Sunday, November 16, 2025

Latest Posts

‘ನನ್ನ ಬಾಯಲ್ಲಿ ಹೇಳಿದ್ರೆ ಮಾತ್ರ ಸತ್ಯ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ರೆ ಸುಳ್ಳಾ..?’

- Advertisement -

Hassan Political News: ಹಾಸನ : ಸಹಕಾರ ಸಚಿವ ಮತ್ತು ಹಾಸನ ಉಸ್ತುವಾರಿ ಸಚಿವರಾಗಿರುವ ಕೆ.ಎನ್‌.ರಾಜಣ್ಣ ಎರಡು ತಿಂಗಳಿನಿಂದ ಹಾಸನ ಜಿಲ್ಲೆಗೆ ಬಾರದ ವಿಚಾರಕ್ಕೆ ಸಂಬಂಧಿಸಿದಂತೆ, ಇಂದು ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಹಾಸನಕ್ಕೆ ಬರದಿರುವ ಬಗ್ಗೆ ನೀವೇ ನೋಡಿರ್ತಿರಿ. ನಾನು ಅರೋಗ್ಯವಾಗಿ ಇದ್ನಾ ಇಲ್ಲವಾ ಎನ್ನೋದು ಗೊತ್ತಾಗಿಲ್ವಾ..? ಅನಾರೋಗ್ಯದ ಕಾರಣ ಹಾಸನಕ್ಕೆ ಬರಲು ಸಾಧ್ಯವಾಗಿಲ್ಲ. ನನ್ನ ಬಾಯಲ್ಲಿ ಹೇಳಿದ್ರೆ ಮಾತ್ರ ಸತ್ಯ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ರೆ ಸುಳ್ಳಾ..? ನಾನು ಬಹಳ ದಿನ ಅನಾರೋಗ್ಯದ ಕಾರಣ ಬರೋಕೆ ಆಗಿಲ್ಲ. ನನಗೆ ಅನಾರೋಗ್ಯ ಆಗಿದ್ದ ಕಾರಣ ಸಚಿವರು, ಶಾಸಕರು ಬಂದು ಮಾತನಾಡಿಸಿ ಹೋಗಿದ್ದು ನೀವು ನೋಡಿದ್ದೀರಿ. ಉದ್ದೇಶಪೂರ್ವಕವಾಗಿ ಬಂದಿಲ್ಲ ಎಂದು ಯಾರೂ ಭಾವಿಸಬಾರದು ಎಂದು ರಾಜಣ್ಣ ಹೇಳಿದ್ದಾರೆ.

ಈಗಲು ನಾನು ಸಂಪೂರ್ಣ ಗುಣಮುಖ ಆಗಿಲ್ಲ. ಆದರು ಹೋಗಬೇಕು ಎನ್ನುವ ಕಾರಣಕ್ಕಾಗಿ ಬಂದಿದ್ದೇನೆ. ಇನ್ಮುಂದೆ ನಿರಂತರವಾಗಿ ಬರುತ್ತೇನೆ. ಬರಗಾಲದ ಬಗ್ಗೆ ಕೇಂದ್ರದ ತಂಡಕ್ಕೆ ನಾನು, ಕೃಷಿ ಮತ್ತು ಕಂದಾಯ ಸಚಿವರು ವಿವರಣೆ ನೀಡಿದ್ದೇವೆ. ಸರ್ಕಾರದ ನಿಲುವನ್ನು ಮನವರಿಕೆ ಮಾಡಿದ್ದೇವೆ. ಹಾಸನ ಜಿಲ್ಲೆಯ ಬರ ಘೋಷಣೆ ಬಗ್ಗೆ ಕೂಡ ಚರ್ಚೆ ಆಗಿದೆ. ಬೆಳೆ ಸಮೀಕ್ಷೆ ಬಳಿಕ ಹಾಸನ ಜಿಲ್ಲೆಯ ಅರಕಲಗೂಡು, ಆಲೂರು ಅರಸೀಕೆರೆ, ಹಾಸನ ತಾಲೂಕುಗಳನ್ನು ಬರ ಎಂದು ಘೋಷಣೆ ಬಗ್ಗೆ ತೀರ್ಮಾನ ಆಗಿದೆ. ನಿನ್ನೆ ಕೂಡ ಸಭೆ ನಡೆದು ಉಳಿದ ಕಡೆ ಸಮೀಕ್ಷೆಗೆ ಸೂಚನೆ ನೀಡಲಾಗಿದೆ. ವರದಿ ಬಂದ ಬಳಿಕ ಅವುಗಳನ್ನು ಕೂಡ ಬರ ಎಂದು ಘೋಷಣೆ ಮಾಡುತ್ತೇವೆ ಎಂದು ಸಚಿವರು ಹೇಳಿದ್ದಾರೆ.

ಬರ ಸಾಧಾರಣ, ಬರ ಎನ್ನೋದು ನಮ್ಮ ಕಾನ್ಸೆಪ್ಟ್ ಅಲ್ಲ. ಅದು ಕೇಂದ್ರ ಸರ್ಕಾರದ ಗೈಡ್ ಲೈನ್ ಇದೆ. ಅದನ್ನು ಮೀರಿ ನಾವು ಒಂದಕ್ಷರ ಕೂಡ ಬದಲು ಮಾಡಲು ಅಗೋದಿಲ್ಲ. ಹಾಗೇನಾದರೂ ಮಾಡಿದರೆ ಕೇಂದ್ರದಿಂದ ನಮಗೆ ಪರಿಹಾರ ಸಿಗೋದಿಲ್ಲ. ನಮ್ಮ ರಾಜ್ಯದಲ್ಲಿ 36 ಸಾವಿರ ಕೋಟಿ ಬೆಳೆ ನಷ್ಟ ಆಗಿದೆ ಎನ್ನೋದು ನಮ್ಮ ವರದಿ. ಕೇಂದ್ರದ ಮಾನದಂಡದ ಪ್ರಕಾರ 4800 ಕೋಟಿ ಪರಿಹಾರಕ್ಕೆ ನಾವು ಅರ್ಹರು ಎಂದು ಕ್ಲೇಮ್ ಮಾಡಿದ್ದೇವೆ. ಈಗ ಬಂದಿದ್ದ ಟೀಂ ವರದಿ ಆದರಿಸಿ ನಮಗೆ ಎಷ್ಟು ಪರಿಹಾರ ಸಿಗಬಹುದು ಗೊತ್ತಾಗಲಿದೆ. ಕೇಂದ್ರದಲ್ಲಿ ಬರ ಘೋಷಣೆಗೆ ಶೇಕಡ 63 ಮಳೆ‌ ಕೊರತೆ ಇರಬೇಕು. ಮೂರು ವಾರ ಶುಷ್ಕ ವಾತಾವರಣ ಇರಬೇಕು ಎಂದಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ, ಚನ್ನರಾಯಪಟ್ಟಣ, ಸಕಲೇಶಪುರ ಕೂಡ ಬರ ಪಟ್ಟಿಗೆ ಸೇರಿಸುವ ವಿಶ್ವಾಸ ಇದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬರ ಘೋಷಣೆ ನಿಯಮ ಬದಲಾವಣೆಗಾಗಿ ಸಿಎಂ ಅವರೆ ಪತ್ರ ಬರೆದಿದ್ದಾರೆ. ಆದರೆ ಅವರು ಇದುವರೆಗೆ ಆ ಬಗ್ಗೆ ಚಕಾರ ಎತ್ತಿಲ್ಲ. ಹಾಗಾಗಿ ಇರುವ ಗೈಡ್ ಲೈನ್‌ನಲ್ಲೆ ಎಷ್ಟು ಪರಿಹಾರ ಪಡೆಯಬಹುದು ಎನ್ನುವ ಬಗ್ಗೆ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಬರ ಘೋಷಣೆ ನಿಯಮ ನಮಗೆ ಸಮಾಯದಾನ ಇಲ್ಲ. ಸಮಾಧಾನ‌ ಇದ್ದರೆ ನಾವು ಯಾಕೆ ಸಿಎಂ‌ ಮೂಲಕ ಪತ್ರ ಬರೆಯಬೇಕಿತ್ತು. ಈಗಿರುವ ನಿಯಮಗಳ ಪ್ರಕಾರ ರೈತರಿಗೆ ಅನುಕೂಲ ಆಗಲ್ಲ ಹಾಗಾಗಿ ಬದಲಾವಣೆ ಮಾಡಿ ಎಂದು ಪತ್ರ ಬರೆಯಲಾಗಿದೆ ಎಂದು ಸಚಿವ ರಾಜಣ್ಣ ಹೇಳಿದ್ದಾರೆ.

ಕರವೇ ಕಾರ್ಯಕರ್ತರಿಂದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಕಾರಿಗೆ ಮುತ್ತಿಗೆ ಯತ್ನ..!

friend ship: ಪ್ರೇಮಿಗಳಿಗೆ ಸಹಾಯಮಾಡಿದ ಸ್ನೇಹಿತ ; ಆದರೆ ನಂತರ ನಡೆದಿದ್ದೇ ಬೇರೆ..!

ಹತ್ತು ಜಿಲ್ಲೆಗಳಲ್ಲಿ ಬರಪೀಡಿತ ಎಂದು ಅಧ್ಯಯನ ತಂಡ ಘೋಷಿಸಿದೆ; ಜಾರಕಿಹೊಳಿ..!

- Advertisement -

Latest Posts

Don't Miss