Sunday, September 8, 2024

Latest Posts

‘ಇತಿಹಾಸ ತಿರುವಿ ನೋಡಿ, ಯಾರು ಧರ್ಮರಾಜಕಾರಣ ಮಾಡಿದ್ದಾರೆಂದು ಗೊತ್ತಾಗುತ್ತದೆ’

- Advertisement -

ಹಾಸನ : ಹಾಸನಕ್ಕೆ ಭೇಟಿ ನೀಡಿ ಮಾತನಾಡಿದ ಆರೋಗ್ಯ ಸಚಿವ ಕೆ.ಸುಧಾಕರ್, ಖರ್ಗೆಯವರು ಮೋದಿಯನ್ನು ರಾವಣನಿಗೆ ಹೋಲಿಕೆ ಮಾಡಿ ಮಾತನಾಡಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಧಾಕರ್, ಪಾಪ ಅವರಿಗೆ ಗೊತ್ತಿರುವ ಎಲ್ಲರು ರಾವಣನಂತಹವರೇ. ನಮಗೆ ಗೊತ್ತಿರೋದು ಶ್ರೀರಾಮಚಂದ್ರ. ಇವತ್ತು ಅನೇಕರು ಏನು ಹೇಳುತ್ತಿದ್ದಾರೆ. ನರೇಂದ್ರ ಮೋದಿ ಅವರನ್ನು ಈ ಶತಮಾನದ ಮಹಾತ್ಮ ಅಂತಿದ್ದಾರೆ. ಮಹಾತ್ಮನಿಗೆ ಹೋಲಿಕೆ ಮಾಡುತ್ತಿದ್ದಾರೆ ಎಂದು ಹೇಳಿದರು.

‘ಅಸಡ್ಡೆ ತೋರುವಂತಹ ಮಂತ್ರಿಗಳಿಗೆ ಯಾಕೆ ತೋಟಗಾರಿಕೆ ಖಾತೆ ಕೊಡ್ತಿರಾ..?’

ಅಲ್ಲದೇ, ಒಬ್ಬ ಶ್ರೀರಾಮಚಂದ್ರ ರಾಮರಾಜ್ಯವನ್ನು ಯಾವ ರೀತಿ ಕಟ್ಟಬೇಕು ಅಂತ ವಿಚಾರ ಮಾಡಿದ್ರು. ಅಂತಹ ಒಂದು ರಾಜ್ಯವನ್ನು, ಈ ದೇಶವನ್ನು ಕಟ್ಟುತ್ತಿರುವುದು ನರೇಂದ್ರ ಮೋದಿಯವರು. ಮಲ್ಲಿಕಾರ್ಜುನ ಖರ್ಗೆ ಅವರು ಅರ್ಥ ಮಾಡಿಕೊಳ್ಳಬೇಕು. ಯುಪಿಎ ಸರ್ಕಾರದಲ್ಲಿ ಯಾವ ರೀತಿ ಆಡಳಿತ ಆಗಿತ್ತು. ಇವತ್ತು ಮೋದಿ ಅವರ ಆಡಳಿತ ಯಾವ ರೀತಿ ಇದೆ ಅನ್ನೋದನ್ನ ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸುಧಾಕರ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರದಿಂದ ಪಂಚರತ್ನ ಕಾರ್ಯಕ್ರಮ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಧಾಕರ್, ಚುನಾವಣೆ ಸಂದರ್ಭದಲ್ಲಿ ಎಲ್ಲಾ ಯಾತ್ರೆಗಳು ಪ್ರಾರಂಭವಾಗ್ತವೆ. ಭಾರತ್ ಜೋಡೋಯಾತ್ರೆ ಆಯ್ತು, ಪಂಚರತ್ನ ಯಾತ್ರೆ ಆಗ್ತಿದೆ. ನಾವು, ನಾವು ಮಾಡಿರುವ ಒಳ್ಳೆಯ ಕೆಲಸಗಳನ್ನು ಜನರಿಗೆ ಮುಟ್ಟಿಸಲು ಜನಸಂಕಲ್ಪ ಯಾತ್ರೆ ಮಾಡುತ್ತಿದ್ದೇವೆ. ಇದು ಸ್ವಾಭಾವಿಕ, ಇದು ಸಹಜ, ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಏನು ಇಲ್ಲ ಎಂದಿದ್ದಾರೆ.

ಸುಂದರಿಯ ಕೊಲೆಯಲ್ಲಿ ಅಂತ್ಯಗೊಂಡ ಪ್ರೇಮಕಥೆ..

ಬಿಜೆಪಿಯವರು ನಕಲಿ ಹಿಂದೂಗಳು ಎಂಬ ಸಿದ್ದರಾಮಯ್ಯ ಪುತ್ರ, ಶಾಸಕ ಯತೀಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಧಾಕರ್, ಬಿಜೆಪಿ ಆಡಳಿತ ಮಾಡುತ್ತಿರುವುದು ಒಳ್ಳೆಯ ಆಡಳಿತ ಕೊಡಲಿಕ್ಕೆ. ಒಳ್ಳೆಯ ಸರ್ಕಾರ ಕೊಡಲಿಕ್ಕೆನೇ. ಅಭಿವೃದ್ಧಿ ಹೆಸರಿನಲ್ಲೇ ರಾಜಕಾರಣ ಮಾಡೋದು. ಯಾವಾಗಲೂ ಜಾತಿಯನ್ನು, ಧರ್ಮವನ್ನು ಓಲೈಕೆ ಮಾಡೋದು ಕಾಂಗ್ರೆಸ್ ಅಂತ ಇತಿಹಾಸ ಹೇಳುತ್ತೆ. ಇತಿಹಾಸ ತಿರುವಿ ನೋಡಿದಾಗ ಗೊತ್ತಾಗುತ್ತೆ. ಯಾರೂ ಧರ್ಮಗಳನ್ನ ಓಲೈಕೆ ಮಾಡಿದ್ದಾರೆ, ಧರ್ಮಗಳನ್ನ ಓಟ್ ಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಂಡಿದ್ದಾರೆ ಅನ್ನೋದನ್ನ ಇತಿಹಾಸ ಹೇಳುತ್ತೆ ಎಂದು ಕಾಂಗ್ರೆಸ್‌ಗೆ ಟಾಂಗ್ ಕೊಟ್ಟಿದ್ದಾರೆ.

- Advertisement -

Latest Posts

Don't Miss