Hubballi Political News: ಹುಬ್ಬಳ್ಳಿ: ಹುಬ್ಬಳ್ಳಿಯ ತಹಶೀಲ್ದಾರ್ ಕಚೇರಿಗೆ ಸಚಿವ ಕೃಷ್ಣ ಭೈರೇಗೌಡ ಅನಿರೀಕ್ಷಿತವಾಗಿ ಭೇಟಿ ನೀಡಿದ್ದಾರೆ.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಹುಬ್ಬಳ್ಳಿಗೆ ಇದು ಎರಡನೇ ಬಾರಿಗೆ ಭೇಟಿ ಕೊಟ್ಟಿದ್ದೇನೆ. ಕಳೆದ ಬಾರಿ ಬಂದಾಗ ಆನ್ಲೈನ್ ನಲ್ಲಿ ಕಡತ ವಿಲೇವಾರಿ ಆಗ್ತಾ ಇರಲಿಲ್ಲ. ಜನ ಹೇಳುವ ಹಾಗೇ ಬೇಕಾದವರದ್ದು ಮಾತ್ರ ಕೆಲಸ ಆಗುತ್ತೆ. ಹೀಗಾಗಿ ನಮಗೆ ತೊಂದರೆ ಆಗ್ತಿದೆ ಅನ್ನೋ ದೂರು ನೀಡಿದ್ರು. ಈ ಬಗ್ಗೆ ಮುಖ್ಯಮಂತ್ರಿ ಕೂಡ ನಮಗೆ ತಾಕೀತು ಮಾಡಿದ್ದಾರೆ. ಈಗ ಸಂಪೂರ್ಣ ಆನ್ಲೈನ್ ಮೂಲಕ ಕಡತ ವಿಲೇವಾರಿ ಆಗುತ್ತಿದೆ ಎಂದು ಹೇಳಿದ್ದಾರೆ.
ಕಾವೇರಿ 2.0 ನೋಂದಣಿ ಬಗ್ಗೆ ಕೂಡ ದೂರು ಬಂದಿದವು. ಈಗ ಜೆ ಸ್ಲಿಮ್ ನಿಂದ ಆಗುತ್ತಿದ್ದ ಸಮಸ್ಯೆ ಆಗ್ತಿಲ್ಲ. ಕಾವೇರಿ 2.0 ನೋಂದಣಿಗೆ ಸರ್ವರ್ ಸಮಸ್ಯೆ ಕೂಡ ಆಗ್ತಿಲ್ಲ. ಮೊದಲು ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತಿತ್ತು, ಈಗ 15 ನಿಮಿಷದಲ್ಲಿ ಆಗುತ್ತೆ. ಮರಾಠ ಭೂ ದಾಖಲೆಗಳು ಇವೆ, ದಾಖಲೆಗಳ ತಿದ್ದುಪಡಿ, ಮಿಸ್ಸಿಂಗ್ ಸೇರಿ ಹಲವು ಸಮಸ್ಯೆ ಆಗಿದ್ದವು. ಈಗಾಗಲೇ ಸ್ಕ್ಯಾನರ್, ಕಂಪ್ಯೂಟರ್ ಈಗಾಗಲೇ ಬಂದಿದೆ. ಸ್ಕ್ಯಾನಿಂಗ್ ಕೆಲಸ ಆರಂಭ ಆಗುತ್ತೆ ಎಂದು ಸಚಿವರು ಹೇಳಿದ್ದಾರೆ.
ಭೂ ಸುರಕ್ಷಾ ಕಾರ್ಯಕ್ರಮ ಹಿನ್ನೆಲೆ 31 ಜಿಲ್ಲೆಯ ಒಂದು ತಾಲೂಕಿಗೆ ಕೊಡಲಾಗುತ್ತೆ. ಹುಬ್ಬಳ್ಳಿಯಲ್ಲಿ ಎರಡು ದಿನಗಳಲ್ಲಿ ಭೂ ಸುರಕ್ಷಾ ಯೋಜನೆ ಆರಂಭ ಆಗುತ್ತೆ. ತಹಶೀಲ್ದಾರ್, ಸರ್ವೇ, ಸಬ್ ರಿಜಿಸ್ಟರ್ ಇಲಾಖೆಗಳ ಎಲ್ಲಾ ದಾಖಲೆಗಳನ್ನು ಡಿಜಿಟಲ್ ಮಾಡ್ತಾ ಇದೇವಿ ಎಂದು ಸಚಿವರು ಹೇಳಿದ್ದಾರೆ.
ಏಜೇಂಟರ್ ಹಾವಳಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಭೈರೇಗೌಡ, ಎಲ್ಲೆಲ್ಲಿ ಏಜೆಂಟರ ಹಾವಳಿ ಇದೆ ಅಂತಾ ನಾವು ಪರಿಶೀಲನೆ ಮಾಡ್ತಾ ಇದ್ದಿವಿ. ಯಾವ ಯಾವ ಅಧಿಕಾರಿಗಳ ಹತ್ತಿರ ಕಡತ ಎಷ್ಟು ದಿನಗಳು ಇವೆ ಅನ್ನೋದನ್ನ ತಹಶೀಲ್ದಾರ್ ಗೆ ತಿಳಿಯುವಂತೆ ಮಾಡಿದ್ದೇವೆ. ನಾನು ಇಲ್ಲಿ ಬಂದು ನಿಂತು ಏಜೇಂಟ್ ಹಾವಳಿ ತಪ್ಪಿಸಲು ಆಗಲ್ಲ. ವಿಳಂಬ ಆಗದಂತೆ ಡಿಜಿಟಲೀಕರಣ ಮಾಡ್ತಾ ಇದ್ದಿವಿ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾಕ್ಕೆ ಕೊಕೇನ್ ರಫ್ತು ಮಾಡುತ್ತಿದ್ದ ಭಾರತೀಯ ದಂಪತಿಯ ಬಂಧನ




