Wednesday, November 19, 2025

Latest Posts

ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳು: ಕೃಷ್ಣಪಾಲ್ ಗುರ್ಜರ್

- Advertisement -

ರೈತರು ಆರ್ಥಿಕವಾಗಿ ಸದೃಢಗೊಂಡರೆ ದೇಶವು ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಶನ್ ಸಮ್ಮಾನ್ ಯೋಜನೆ, ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದು ಇಂಧನ ಮತ್ತು ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವರಾದ ಕ್ರಿಶನ್ ಪಾಲ್ ಗುರ್ಜರ್ ರವರು ತಿಳಿಸಿದರು.

ಅವರು ಇಂದು ಭಾರತಿ ನಗರದ ಟೌನ್‌ನಲ್ಲಿ ಕಿಶನ್ ಸಮ್ಮಾನ್ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರೈತರು ಸದಾ ಕಾಲ ಪೂಜನೀಯ ಅವರು ಹಸಿವು, ಗಾಳಿ, ಮಳೆ ಲೆಕ್ಕಿಸದೇ ಸದಾ ದುಡಿಮೆಯಲ್ಲಿ ತೊಡಗಿಕೊಂಡು ದೇಶದ ಜನರಿಗೆ ಆಹಾರ ನೀಡುತ್ತಾರೆ ಎಂದರು.

ಪವಿತ್ರ ಮೃತ್ತಿಕೆ ಸಮರ್ಪಿಸುವ ಮೂಲಕ ನಾಡಪ್ರಭು ಕೆಂಪೇಗೌಡ ಅವರಿಗೆ ಗೌರವ ಸಲ್ಲಿಸಿ: ಗೋಪಾಲಯ್ಯ ಕೆ

ಮೊದಲು ಅತಿವೃಷ್ಠಿ, ಅನಾವೃಷ್ಠಿಯಿಂದ ಶೇ 50 ರಷ್ಟು ರೈತರ ಬೆಳೆ ನಾಶವಾದರೆ ಮಾತ್ರ ಅವರಿಗೆ ಬೆಳೆ ಪರಿಹಾರ ಸಿಗುತ್ತಿತ್ತು, ಇದನ್ನು ಮೋದಿಜೀ ಅವರು ಪರಿಷ್ಕರಿಸಿ ಶೇ 33 ರಷ್ಟು ಬೆಳೆ ನಷ್ಠವಾದರೆ ಪರಿಹಾರ ಒದಗಿಸಲಾಗುತ್ತಿದೆ. ಯುರಿಯಾ ಕಳಸಂತೆಯಲ್ಲಿ ಮಾರಾಟವಾಗದೆ ರೈತರಿಗೆ ಮಾತ್ರ ಸಿಗಬೇಕು ಎಂದು  ಯುರಿಯಾಗೆ ಬೇವಿನ ಲೇಪನವನ್ನು ನೀಡಲಾಯಿತು. ರೈತರ ಮೇಲೆ ಹೊರೆ ಬೀಳದಂತೆ ರಾಸಾಯನಿಕ ಗೊಬ್ಬರ ಡಿ.ಎ.ಪಿ ದರ ಸ್ಥಿರವಾಗಿರುವಂತೆ ನೋಡಿಕೊಳ್ಳಲಾಗಿದೆೆ ಎಂದರು.

ಪ್ರಿಮಿಯಂ ದರವನ್ನು ಕಡಿಮೆ ಮಾಡಿ ಎಲ್ಲಾ ರೈತರಿಗೆ ಎಟಕುವ ದರದಲ್ಲಿ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ. ರೈತರಿಗೆ, ಬಡವರಿಗೆ ಸರ್ಕಾರದಿಂದ ನೀಡುವ ಸಹಾಯಧನ ನೇರವಾಗಿ ಅವರ ಖಾತೆಗೆ ತಲುಪಬೇಕು ಎಂಬ ದೃಷ್ಠಿಯಿಂದ ಯಾವುದೇ ಠೇವಣಿ ಇಲ್ಲದೇ ಜನ್ ಧನ್ ಯೋಜನೆಯಡಿ ಎಲ್ಲರಿಗೆ ಬ್ಯಾಂಕ್ ಖಾತೆ ತೆರೆಯಲಾಯಿತು. ಕೋವಿಡ್ ಸಂದರ್ಭದಲ್ಲಿ 3 ತಿಂಗಳು ನಿರಂತರವಾಗಿ 20 ಕೋಟಿ ಬಡ ಮಹಿಳೆಯರ ಖಾತೆಗೆ  500 ರೂ ಹಣ ಜಮೆ ಮಾಡಲಾಗಿದೆ. ಕಿಶಾನ್ ಸಮ್ಮಾನ್ ಯೋಜನೆಯಡಿ ನೇರವಾಗಿ ರೈತರ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಇದು ಜನ್ ಧನ್ ಯೋಜನೆಯ ಉದ್ದೇಶ ಎಂದರು.

ಇಂದಿನ ಯುವ ಪೀಳಿಗೆಯೇ ಭಾರತದ ಸಂಪತ್ತು: ಕೃಷ್ಣ ಪಾಲ್ ಗುರ್ಜರ್..

ಹನಿ ನೀರವಾರಿಯಿಂದ ನೀರು ಉಳಿತಾಯವಾಗುತ್ತದೆ ಹಾಗೂ ಹನಿ ನೀರವಾರಿ ಅಳವಡಿಸಿಕೊಳ್ಳಲು ರೈತರಿಗೆ ಹೆಚ್ಚಿನ ಸಹಾಯಧನ ಸಹ ನೀಡಲಾಗುತ್ತದೆ. ಇದನ್ನು ರೈತರು ಹೆಚ್ಚು ಅಳವಡಿಸಿಕೊಳ್ಳಬೇಕು. ರೈತರು ಯಂತ್ರೋಪಕರಣ ಖರೀದಿಸಲು ಸಹಾಯಧನ ಒದಗಿಸಲಾಗುತ್ತಿದೆ. ರೈತರನ್ನು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ನೇರ ಮಾರುಕಟ್ಟೆಯನ್ನು ಸಹ ಒದಗಿಸಲಾಗುತ್ತಿದೆ. ಕೇಂದ್ರ ಸರ್ಕಾರ ತನ್ನ 2022-23 ಆಯವ್ಯಯದಲ್ಲಿ ರೈತರಿಗೆ ಸಾಲ ನೀಡಲು 18 ಲಕ್ಷ ಕೋಟಿ ರೂ ಮೀಸಲಿಟ್ಟಿದೆ ಎಂದರು.

ಸಂವಾದದಲ್ಲಿ ವಿಧಾನ ಪರಿಷತ್ ಸದಸ್ಯರ  ಸಿ.ಪಿ.ಯೋಗೇಶ್ವರ್ , ಉಪವಿಭಾಗಾಧಿಕಾರಿ ಆರ್.ಐಶ್ವರ್ಯ,ತಹಶೀಲ್ದಾರ್ ಟಿ.ಎನ್.ನರಸಿಂಹಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಿ.ರಂಗೇಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎಸ್.ಅಶೋಕ್,ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರ ಮಂಜುನಾಥ್,  ಸೇರಿದಂತೆ ಇತರರು ಉಪಸ್ಥಿತರಿದ್ದರು.

- Advertisement -

Latest Posts

Don't Miss