Vijayapura News: ವಿಜಯಪುರ: ವಿಜಯಪುರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ಸಚಿವ ಎಂ.ಬಿ.ಪಾಟೀಲ್, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಗೃಹಜ್ಯೋತಿ ಯೋಜನೆ ಬಗ್ಗೆ ಮಾತನಾಡಿದ ಸಚಿವರು, ಕರೆಂಟ್ ಬಿಲ್ ಹೆಚ್ಚಿಗೆ ಮಾಡಿದ್ದು, ನಮ್ಮ ಸರ್ಕಾರವಲ್ಲ. ನಮ್ಮ ಸರ್ಕಾರ ಬರುವುದಕ್ಕೂ ಮುನ್ನವೇ ಕೆಇಆರ್‌ಸಿ ಎಂಬ ಸಂಸ್ಥೆ ಕರೆಂಟ್ ಬಿಲ್ ಹೆಚ್ಚು ಮಾಡಿದೆ. ಈ ಬಗ್ಗೆ ಸಿಎಂ ಮೊದಲೇ ಹೇಳಿದ್ದು, ಈ ಬಿಲ್ ಚೇಂಜ್ ಮಾಡಲು ಆಗುವುದಿಲ್ಲ. ಕಷ್ಟವಿದೆ ಎಂದಿದ್ದಾರೆ. ಆದರೂ ನಾನು ಈ ಬಗ್ಗೆ ಅವರ ಬಳಿ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.
ಅಲ್ಲದೇ, ನಾನು ಎಲ್ಲ ಕೈಗಾರಿಕೋದ್ಯಮದವರಿಗೆ ವಿನಂತಿಸುತ್ತೇನೆ. ನಮಗೆ ಸಹಕಾರ ಕೊಡಿ. ನಾನು ಮುಖ್ಯಮಂತ್ರಿಗಳ ಜೊತೆ ಮಾತನಾಡಿ, ಇದಕ್ಕೆ ಪರಿಹಾರ ಕೊಡಿಸಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಅನ್ನಭಾಗ್ಯ ಯೋಜನೆ ಬಗ್ಗೆ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ಅಕ್ಕಿ ಕೊಡುವಲ್ಲಿ ರಾಜಕಾರಣ ಮಾಡುತ್ತಿದೆ. ಬಡವರಿಗೆ ಅಕ್ಕಿ ಕೊಡುವಲ್ಲಿಯೂ ರಾಜಕೀಯ ಮಾಡುತ್ತಿದೆ. ನಾವು ಈ ಬಗ್ಗೆ ಪತ್ರ ಬರೆದಿದ್ದೆವು. ಅವರು ಅದಕ್ಕೆ ಉತ್ತರಿಸಿದ್ದರು. ನಮ್ಮ ಬಳಿಕ 7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಇದೆ ಎಂದು ಹೇಳಿದ್ದರು. ಆದ್ರೆ ಅದಾದ ಬಳಿಕ ಈ ರಾಜಕೀಯ ನಡೆದಿದೆ. ಬಡವರ ಅನ್ನದ ಜೊತೆ ಇವರು ರಾಜಕೀಯ ಮಾಡುವಂಥದ್ದು, ಸರಿ ಅಲ್ಲ ಎಂದಿದ್ದಾರೆ.
ಅಲ್ಲದೇ, ನಾವು ಅಕ್ಕಿಯನ್ನ ಪುಕ್ಕಟೆ ಕೇಳುತ್ತಿಲ್ಲ. ನಾವು ದುಡ್ಡು ಕೊಡುತ್ತೇವೆ ಎಂದು ಹೇಳಿದ್ದೇವೆ. ಆದರೆ ನಾವು ನಮ್ಮ ಮಾತಿಗೆ ಬದ್ಧರಿದ್ದೇವೆ. ಈ ಯೋಜನೆ ಜಾರಿಗೆ ತರುವಲ್ಲಿ ವಿಳಂಬವಾಗಬಹುದು. ಆದರೆ ನಾವು ಅಕ್ಕಿ ಕೊಟ್ಟೇ ಕೊಡುತ್ತೇವೆ ಎಂದು ಸಚಿವರು ಹೇಳಿದ್ದಾರೆ.
https://t.co/F5outVlvac
ಅನ್ನಭಾಗ್ಯಕ್ಕೆ ಅಕ್ಕಿ ನೀಡುವಲ್ಲಿ ಅನಗತ್ಯ ರಾಜಕಾರಣ ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಹಾಗೂ ಇನ್ನಿತರೆ ವಿಷಯಗಳ ಕುರಿತು ಮಾಧ್ಯಮಗೋಷ್ಠಿ…ವಿಜಯಪುರದಿಂದ ನೇರ ಪ್ರಸಾರ…— M B Patil (@MBPatil) June 22, 2023
ಕೋಲಾರದಲ್ಲಿ ಸಚಿವ ಬೋಸರಾಜು.! KC ವ್ಯಾಲಿ, ಅಕ್ಕಿ ಬಗ್ಗೆ ಹೇಳಿದ್ದೇನು.?
ವಿದ್ಯುತ್ ದರ ಏರಿಕೆ ವಿರುದ್ಧ ಹುಬ್ಬಳ್ಳಿಯಲ್ಲಿ ಚಿಮಿಣಿ ಹಿಡಿದು ಪ್ರತಿಭಟಿಸಿದ ಕೈಗಾರಿಕೋದ್ಯಮಿಗಳು..