ಮಂಡ್ಯ: ಇಂದು ಪವಿತ್ರ ಮೃತ್ತಿಕೆ ಸಂಗ್ರಹಣೆ ಕಾರ್ಯ ಪೂರ್ಣಗೊಂಡ ಹಿನ್ನೆಲೆ, ಸಚಿವರಾದ ಕೆ,ಗೋಪಾಲಯ್ಯ ಮತ್ತು ನಾರಾಯಣ ಗೌಡರು ಮದ್ದೂರಿನ ಶಿವಪುರಕ್ಕೆ ಆಗಮಿಸಿದ್ದರು. ಇಲ್ಲಿ ಸತ್ಯಾಗ್ರಹ ನಡೆಯುತ್ತಿದ್ದು, ತಮಟೆ ಬಾರಿಸುವ ಮೂಲಕ ಸಚಿವರನ್ನ ಬಿಜೆಪಿ ಜಿಲ್ಲಾಧ್ಯಕ್ಷ ಸಿಪಿ ಉಮೇಶ್ ಸ್ವಾಗತಿಸಿದರು.
ಪವಿತ್ರ ಮೃತ್ತಿಕೆ ಸಂಗ್ರಹಣೆ ಕಾರ್ಯ ಪೂರ್ಣಗೊಂಡ ಹಿನ್ನೆಲೆ, ಈ ಮಣ್ಣು ಮಂಡ್ಯದಿಂದ ಬೆಂಗಳೂರಿಗೆ ಹೊರಡಲಿದೆ. ಹಾಗಾಗಿ ಶಿವಪುರ ಸತ್ಯಾಗ್ರಹ ಸೌಧದ ಬಳಿ ಪವಿತ್ರ ಮೃತ್ತಿಕೆ ಅಭಿಯಾನ ಕಾರ್ಯಕ್ರಮವಿದ್ದು, ಅದನ್ನು ಸಚಿವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪುರುಷೋತ್ತಮ ನಂದ ನಾಥ ಸ್ವಾಮಿ, ರೇಣುಕಾ ಶಿವಾಚಾರ್ಯ ಸ್ವಾಮಿ,ಡಿಸಿ ಗೋಪಾಲಕೃಷ್ಣ, ಎಡಿಸಿ ನಾಗರಾಜು,ಸಿಇಓ ಶಾಂತಾ ಎಲ್.ಹುಲ್ಮನಿ, ಎಸ್ಪಿ ಯತೀಶ್, ಬಿಜೆಪಿ ಜಿಲ್ಲಾಧ್ಯಕ್ಚ ಸಿಪಿ ಉಮೇಶ್, ಡಾ.ಇಂದ್ರೇಶ್, ಸ್ವಾಮಿ ಸೇರಿ ಹಲವರು ಭಾಗಿಯಾಗಿದ್ದರು.
‘ಅವರು ಮುಸ್ಲಿಂರನ್ನು ಓಲೈಕೆ ಮಾಡಲು ಕೆಟ್ಟ ಮಾನಸಿಕತೆ ತೋರಿದ್ದಾರೆ’..
ಈ ವೇಳೆ ಮಾತನಾಡಿದ ಸಚಿವ ಕೆ.ಗೋಪಾಲಯ್ಯ, ಸತೀಶ್ ಜಾರಕಿಹೋಳಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಇವರ ಮಾತನ್ನು ಯಾರು ಒಪ್ಪಲು ಸಾಧ್ಯವಿಲ್ಲ. ನಾವೆಲ್ಲ ಹಿಂದೂಗಳಲ್ವಾ?, ನಾವೆಲ್ಲ ಹಿಂದೂಗಳು ಎನ್ನುವ ಹೆಮ್ಮೆ ಇದೆ. ಚುನಾವಣಾ ಹತ್ತಿರ ಬರ್ತಿದಾಗೆ ಈ ಪದಗಳು ಬಳಸುವುದು ಅಷ್ಟು ಚೆನ್ನಾಗಿ ಕಾಣಲ್ಲ ಎನ್ನುವ ಮೂಲಕ ಸತೀಶ್ ಜಾರಕಿಹೋಳಿಗೆ ಸಚಿವ ಕೆ.ಗೋಪಾಲಯ್ಯ ಎಚ್ಚರಿಕೆ ನೀಡಿದ್ದಾರೆ..
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ನಾರಾಯಣಗೌಡ, ಅವರು ನೀಡಿರುವ ಹೇಳಿಕೆ ತಪ್ಪು. ಒಬ್ಬ ಹಿಂದೂ ಆ ರೀತಿ ಮಾತನಾಡ ಬಾರದು ಎಂದಿದ್ದಾರೆ. ಬಿಜೆಪಿಗೆ ಕಾಂಗ್ರೆಸ್-ಜೆಡಿಎಸ್ MLA ಸೇರ್ಪಡೆ ವಿಚಾರದ ಬಗ್ಗೆ ಮಾತನಾಡಿದ ಅವರು, ಬರುವವಂತವರಿಗೆ ಬಿಜೆಪಿ ಗೆ ಸ್ವಾಗತ. ಬರುವಂತ ಸಂದರ್ಭದಲ್ಲಿ ಎಲ್ಲರು ಬರ್ತಾರೆ ಎಂದಿದ್ದಾರೆ.
ನಾಡಿನ ಅಭಿವೃದ್ಧಿಗೆ ಶ್ರಮಿಸಿದ ಪುಣ್ಯಪುರುಷ ಕೆಂಪೇಗೌಡ: ಗೋಪಾಲಯ್ಯ ಕೆ
ಬಿಜೆಪಿ ಕುತಂತ್ರದ ರಾಜಕಾರಣ ಮಾಡ್ತಿದೆ, ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ನಾರಾಯಣಗೌಡರು, ಸಿದ್ದರಾಮಯ್ಯಗೆ ಮಾತನಾಡೋದು ಬಿಟ್ರೆ ಬೇರೆ ಕೆಲಸ ಇಲ್ಲ. ನಮಗೆ ಜವಾಬ್ದಾರಿ ಇದೆ. ನಾವು ಸರ್ಕಾರವನ್ನ ಸಧೃಡ ಮಾಡ್ತೇವೆ. ಅಭಿವೃದ್ಧಿ ಕೆಲಸ ಮಾಡ್ತೇವೆ, ಸಿದ್ದರಾಮಯ್ಯ ಮಾತಿನ ಬಗ್ಗೆ ಕೌಂಟ್ರು ಕೊಡಲ್ಲ. ಸಿದ್ದರಾಮಯ್ಯ ಯಾವ ಪಕ್ಷದಲ್ಲಿದ್ರು, ಸಿದ್ದರಾಮಯ್ಯ ಮಾತನಾಡ್ಕೊಳ್ಳಿ ಬಿಡಿ ಎಂದಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಕಿಂಗ್ ಮೇಕರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ನಾರಾಯಣಗೌಡ, ಜೆಡಿಎಸ್ ನವರು ಇನ್ನು ಭ್ರಮೆಯಲ್ಲಿದ್ದಾರೆ. ಅವರು ಮಾತನಾಡುವುದಕ್ಕೂ ಲಿಮಿಟ್ ಇರಲಿ ಎಂದಿದ್ದಾರೆ.