Friday, December 13, 2024

Latest Posts

Congress ಸಹವಾಸ, ಸಚಿವ ಸ್ಥಾನ ಕಿತ್ತುಕೊಳ್ಳಲು BJP ನಾಯಕರ ಆದೇಶ

- Advertisement -

Mandya : ಪರಿಷತ್ ಚುನಾವಣೆ ಮುಗಿದು ಕಾಂಗ್ರೆಸ್ Congress, ಬಿಜೆಪಿ BJP ತಲಾ  11, ಜೆಡಿಎಸ್, JDS 2, ಪಕ್ಷೇತರ 1 ಕಡೆ ಗೆಲುವು ಸಾಧಿಸಿದೆ. ಈ ನಡುವೆ ಕಡೆಗಳಿಗೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಚರ್ಚೆ ಎರಡೂ ಪಕ್ಷಗಳಲ್ಲಿ ವಿರೋಧಕ್ಕೆ ಕಾರಣವಾಗಿತ್ತು. ಆದ್ರೆ ಮಂಡ್ಯ ಪರಿಷತ್ ಅಖಾಡದಲ್ಲಿ ಬಿಜೆಪಿಯ ಶಾಸಕ, ಸಚಿವರೂ ಆದ ನಾರಾಯಣಗೌಡ Minister NarayanaGowda ಹಾಗೂ Maddur ಮದ್ದೂರಿನ ಸ್ವಾಮಿಗೌಡ ಪಕ್ಷದ ಆಂತರಿಕ ನಿರ್ದೇಶನದಂತೆ ಜೆಡಿಎಸ್ ಗೆ ಮತಹಾಕಿಸದೆ ಇತ್ತ  ತನ್ನ ಬೆಂಬಲಿಗ ಗ್ರಾಪಂ ಸದಸ್ಯರನ್ನ ಬಿಜೆಪಿ ಅಧಿಕೃತ ಅಭ್ಯರ್ಥಿಗೆ ಮತಹಾಕಿಸದೆ ಕಾಂಗ್ರೆಸ್ ಗೆ ಹಾಕಿಸಿರುವ ಕಾರಣ ಬಿಜೆಪಿ ಹೈಕಮಾಂಡ್ ರೊಚ್ಚಿಗೆದ್ದಿದೆ. ಇತ್ತ ಕೋಲಾರ-ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಬ್ಬರೇ ಬಿಜೆಪಿ ಶಾಸಕರಿದ್ದರೂ ಸಚಿವ ಸುಧಾಕರ್ Minister Sudhakar ಹಾಗೂ ಮುನಿರತ್ನ MInister Muniratna , ಸಂಸದ ಮುನಿಸ್ವಾಮಿ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಓಡಾಡಿ ಬಿಜೆಪಿಗೆ ಅಭ್ಯರ್ಥಿಗೆ ಹೆಚ್ಚಿನ ಮತಗಳನ್ನ ಹಾಕಿಸಿದ್ರು. ಆದ್ರೆ, ನಾರಾಯಣಗೌಡ ಹಾಗೂ ಮದ್ದೂರಿನ ಸ್ವಾಮಿ ಗೌಡ ತನ್ನ ಬೆಂಬಲಿಗರ ಮತಗಳನ್ನ ಕಾಂಗ್ರೆಸ್ಗೆ ಹಾಕಿಸದೆ ಬಿಜೆಪಿಗೆ ಹಾಕಿಸಿದ್ರು ಜೆಡಿಎಸ್ ಗೆಲುವು ಸಾದಿಸುತ್ತಿತ್ತು.

ಮಂಡ್ಯದ ಏಕೈಕ ಬಿಜೆಪಿ ಶಾಸಕ ನಾರಾಯಣಗೌಡ ಸಚಿವ ಸ್ಥಾನಕ್ಕೆ ಕುತ್ತು / Cabinet Resuffle

ಇದನ್ನ ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್ ನಾರಾಯಣಗೌಡರ ಸಚಿವ ಸ್ಥಾನ ಕಿತ್ತುಕೊಳ್ಳಲು ನಿರ್ಧಾರ ಮಾಡಿದೆ. ಗುಜರಾತ್ ಮಾದರಿಯಲ್ಲಿ ಎಲ್ಲಾ ಸಚಿವರ ರಾಜೀನಾಮೆ ಕೊಡಿಸಿ 33 ಸಚಿವ ಸ್ಥಾನಗಳನ್ನ ಹೊಸಬರಿಗೆ ನೀಡಲು ಬಿಜೆಪಿ ಹೈ ಕಮಾಂಡ್ ನಿರ್ಧಾರ ಮಾಡಿತ್ತು. ಆದ್ರೆ, ಗುಜರಾತ್ ಮಾದರಿ ಕರ್ನಾಟಕದಲ್ಲಿ ವರ್ಕೌಟ್ ಆಗಲ್ಲ ಎಂಬ ನಿರ್ಧಾರಕ್ಕೆ ಬಂದಿರುವ ಬಿಜೆಪಿ ಹೈಕಮಾಂಡ್ ಪರಿಷತ್ ಚುನಾವಣೆಯ ಫಲಿತಾಂಶ ಹಾಗೂ ಮುಂದಿನ ಚುನಾವಣೆಯ ದೃಷ್ಟಿಯಲ್ಲಿಟ್ಟುಕೊಂಡು ಕ್ಯಾಬಿನೆಟ್ ಪುನರ್ ರಚನೆ ಮಾಡಲು ನಿರ್ಧಾರ ಮಾಡಿದೆ. ಸಂಕ್ರಾಂತಿ ವೇಳೆಗೆ ರಾಜ್ಯದಲ್ಲಿ ರಾಜಕೀಯಕ್ರಾಂತಿ ಆಗೋದು ಬಹುತೇಕ ಪಕ್ಕಾ ಆಗಿದೆ.

ಕಾಂಗ್ರೆಸ್ ಬಾಗಿಲಲ್ಲಿ ನಿಂತ KR Pete ನಾರಾಯಣಗೌಡ

ಇನ್ನು ಬಿಜೆಪಿಯಲ್ಲಿ ಗೆದ್ದು ಸಚಿವರಾಗಿದ್ರೂ ಪಕ್ಷಕ್ಕೆ ಯಾಮಾರಿಸಿದ ಹಿನ್ನೆಲೆ ಇದೀಗ ಕಾಂಗ್ರೆಸ್ ಬಾಗಿಲಲ್ಲಿ ನಾರಾಯಣಗೌಡ ನಿಂತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹ ಬಿಜೆಪಿ-ಜೆಡಿಎಸ್ ಶಾಸಕರು ನಾಯಕರನ್ನ ಪಕ್ಷಕ್ಕೆ ಸೆಳೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ನಾರಾಯಣಗೌಡ ಸಚಿವ ಸ್ಥಾನ ಕಳೆದುಕೊಂಡರೂ ಕಾಂಗ್ರೆಸ್ ಮುಂದಿನ ಬಾರಿ ಟಿಕೆಟ್ ಕೊಡುತ್ತೆ ಅನ್ನುವ ಖುಷಿಯಲ್ಲಿದ್ದಾರಂತೆ

ಶಿವಕುಮಾರ್ ಬೆಸಗರಹಳ್ಳಿ, Karnataka Tv , Mandya

- Advertisement -

Latest Posts

Don't Miss