ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ, ಆರ್. ಅಶೋಕ್, ಮಂಡ್ಯ ಜಿಲ್ಲೆಯ ಜನತೆಗೆ 67 ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸೌಹಾರ್ದತೆಯಾಗಿ ನಾವೆಲ್ಲರೂ ಬದುಕಬೇಕು. ದಶಕದ ಹೋರಾಟದ ಫಲವಾಗಿ, ಮೈಸೂರು ರಾಜ್ಯ ಉದಯವಾಗಿತ್ತು. ಹಲವರು ಹೋರಾಟಗಾರರು ಹೋರಾಡಿದಂತವರು. ನಾವು ಅವರನ್ನ ನೆನಪು ಮಾಡಿಕೊಳ್ಳಬೇಕು. ದೇವರಾಜು ಅರಸ್ ಅವರು ಮೈಸೂರು ರಾಜ್ಯವನ್ನ ಕರ್ನಾಟಕ ಮಾಡಿದರು ಕೆಂಪೇಗೌಡರು, ಚೆನ್ನಮ್ಮ ಹೋರಾಟಗಾರನ್ನ ಪಡೆದಂತವರು. ರಾಷ್ಟ್ರಕವಿ ಕುವೆಂಪು ಅವರ ಸ್ಮರಿಸಬೇಕು ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಮತ್ತೊಮ್ಮೆ ಆಪರೇಷನ್ ಕಮಲ..? ಸಚಿವ ಅಶೋಕ್ ಸೂಚನೆ..?
ರಾಜ್ಯದಲ್ಲಿ ಮಳೆಯಿಂದ ಬಾರಿ ಹಾನಿ ಆಗಿತ್ತು. 309 ಕೋಟಿ ಬಿಡುಗಡೆ ಮಾಡಲಾಗಿದೆ. 39500 ಕುಟುಂಬಕ್ಕೆ ತಲ 10 ಸಾವಿರ ಪರಿಹಾರ ಕೊಡಲಾಗಿದೆ. ಭೂ ಕಬಳಿಕೆ ನಿಷೇಧಕ್ಕೆ ತಿದ್ದುಪಡಿ ತರಲಾಗಿದೆ. ಮಂಡ್ಯ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಿದೆ. 32300 ವಿದ್ಯಾರ್ಥಿಗಳಿಗೆ 14 ಕೋಟಿ ಶಿಷ್ಯ ವೇತನ ನೀಡಿದೆ. ರೈತರ ಮಕ್ಕಳಿಗೆ ವಿದ್ಯಾ ಯೋಜನೆ ಕೊಟ್ಟಿದ್ದಾರೆ. ರೈತರು ಬೆಳೆದ ಉತ್ಪನ್ನಗಳಿಗೆ ಉನ್ನತ ಬೆಲೆ ಸಿಗಬೇಕು. ಕಂದಾಯ ಗ್ರಾಮಗಳಾಗಿ ಘೋಷಣೆಯಾಗದ ಗ್ರಾಮವನ್ನ ಗುರ್ತಿಸಿ ಪರಿಗಣಿಸಲಾಗುತ್ತೆ ಎಂದು ಅಶೋಕ್ ಹೇಳಿದ್ದಾರೆ.
ಇನ್ನು 233 ಗ್ರಾ.ಪಂ.ಯಲ್ಲಿ ಗ್ರಾಮ ಒನ್ ಸೌಲಭ್ಯ ಕಲ್ಪಿಸಲಾಗಿದೆ. ಗ್ರಾಮ ಒನ್ ಕೇಂದ್ರ ಗಳಿಂದ ಜನರಿಗೆ ಸೌಲಭ್ಯ. ಹಲೋ ಕಂದಾಯ ಸಚಿವರೆ ಯೋಜನೆ ತರಲಾಗಿದೆ. ಪಲಾನುಭವಿಗಳಿಗೆ ಪಿಂಚಣಿ ಯೋಜನೆ ಕೊಡಲಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಯಶಸ್ವಿಯಾಗಿದೆ. ಕೆ.ಆರ್.ಎಸ್ ಹಿನ್ನಿರಿನ ಜಲ ಕ್ರೀಡೆ ಅಭಿವೃದ್ಧಿಗೆ 1 ಕೋಟಿ ಬಿಡುಗಡೆ ಮಾಡಿದೆ. ಮಂಡ್ಯ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ.