Friday, November 22, 2024

Latest Posts

ಹಾಲಿನ ದರ ಹೆಚ್ಚಳ ವಿಚಾರದ ಬಗ್ಗೆ ಸಚಿವ ರಾಜಣ್ಣ ಹೇಳಿದ್ದಿಷ್ಟು..

- Advertisement -

Hassan News: ಹಾಸನ : ಹಾಸನದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ, ಜೂ.27 ರಂದು ಹಾಸನದಲ್ಲಿ ರಾಜ್ಯಮಟ್ಟದ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈಗಾಗಲೇ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಉತ್ತಮ ರೀತಿಯಲ್ಲಿ ಆಚರಿಸಲು ತೀರ್ಮಾನ ಆಗಿದೆ ಎಂದು ಹೇಳಿದ್ದಾರೆ.

ನಾಳೆ ಸಂಜೆಯೊಳಗೆ ಆಹ್ವಾನ ಪತ್ರಿಕೆ ನೀಡಿ ಗಣ್ಯರನ್ನು ಆಹ್ವಾನಿಸಲಾಗುವುದು. ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆದಿಚುಂಚನಗಿರಿ ಮಠದ ಪಿಠಾಧ್ಯಕ್ಚ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಆಹ್ವಾನಿಸಲಾಗುವುದು. ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಆಗಬೇಕು ಎನ್ನುವುದು ಎಲ್ಲರ ಅಭಿಲಾಷೆ. ಎಲ್ಲಾ ಹಾಲಿ, ಮಾಜಿ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನ ಮಾಡಲಾಗುವುದು ಎಂದು ರಾಜಣ್ಣ ಹೇಳಿದ್ದಾರೆ.

ಫಸಲ್ ಭೀಮಾ ಯೋಜನೆ ಬಗ್ಗೆ ಕರಪತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಫಸಲ್ ಭೀಮಾ ಯೋಜನೆ ನೋಟಿಫಿಕೇಷನ್ ಮಾಡುವುದು ತಡವಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ತೊಂದರೆ ಆಗದ ರೀತಿ ಎಚ್ಚರಿಕೆ ವಹಿಸುತ್ತೇವೆ ಎಂದಿದ್ದಾರೆ. ಇನ್ನು ಹಾಲಿನ ದರ ಹೆಚ್ಚಳ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ,  ಹಾಲಿನ‌ ದರ ಏರಿಕೆ ಮಾಡಬೇಕೆನ್ನುವುದು ಸರ್ಕಾರದ ನಿರ್ಧಾರವಲ್ಲ, ಅದು ನನ್ನ ಅಭಿಪ್ರಾಯ. ರೈತರಿಗೆ ಉತ್ಪಾದನ ವೆಚ್ಚ ಜಾಸ್ತಿ ಇದೆ. ರೈತರಿಗೆ ಐದು ರೂಪಾಯಿ ಹೆಚ್ಚಿಗೆ ದೊರಕಿಸಿಕೊಡಬೇಕು ಅನ್ನೋದು ನನ್ನ ಉದ್ದೇಶ. ರೈತರ ಬಗ್ಗೆ ಒಬ್ಬರು ಹೇಳುತ್ತಿಲ್ಲ, ಬರೀ ಗ್ರಾಹಕರ ಬಗ್ಗೆ ಮಾತ್ರ ಹೇಳುತ್ತಿದ್ದಾರೆ. ದರ ಏರಿಕೆ ಅಂದರೆ ಗ್ರಾಹಕರಿಗೆ ಹೊರೆ ಮಾಡುವುದಿಲ್ಲ. ರೈತರ ಹಿತ ಕಾಪಾಡುವುದು ಮುಖ್ಯ. ಜಾನುವಾರುಗಳ ಆಹಾರ ಪದಾರ್ಥದ ಬೆಲೆ ಜಾಸ್ತಿಯಾಗಿವೆ. ರೋಗದಿಂದ ಜಾನುವಾರುಗಳು ಸಾವನ್ನಪ್ಪಿ ರೈತರು ನಷ್ಟ ಅನುಭವಿಸಿದ್ದಾರೆ ಎಂದು ರಾಜಣ್ಣ ಹೇಳಿದ್ದಾರೆ.

ಕೇಂದ್ರದಿಂದ ಅಕ್ಕಿ ತರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ರಾಜಣ್ಣ, ಅಕ್ಕಿ ಬಗ್ಗೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಒಂದು ದಿನ ಅಕ್ಕಿ ಕೊಡ್ತಿವೆ ಎಂದು ಪತ್ರ ಕೊಟ್ಟು, ಇನ್ನೊಂದು ದಿನ ಕೊಡಲ್ಲ ಅಂದರೆ ಏನರ್ಥ. ಇದರಲ್ಲಿ ರಾಜಕೀಯದ ಷಡ್ಯಂತ್ರ ಇದೆ, ಇದನ್ನು ನಾನು ಕಂಡಿಸುತ್ತೇವೆ. ಅವರೇನು ಪುಕ್ಸಟ್ಟೆ ಕೊಡಲ್ಲ, ಹಣ ಕೊಡುತ್ತೇವೆ. ಛತ್ತಿಸ್‌ಗಡ್, ಪಂಜಾಬ್‌ನಿಂದ‌ ಅಕ್ಕಿ  ಖರೀದಿ ಮಾಡುತ್ತೇವೆ. ಅಕ್ಕಿಯನ್ನು ಕೊಟ್ಟೆ ಕೊಡ್ತೇವೆ . ಎರಡು ಕೆಜಿ ಜೋಳ ಎಲ್ಲಾ ಸೇರಿಸಿ ಹತ್ತು ಕೆಜಿ ಕೊಟ್ಟೇ ಕೊಡ್ತಿವಿ ಎಂದು ರಾಜಣ್ಣ ಹೇಳಿದ್ದಾರೆ.

ಮೊದಲ ಭಾರಿ ಆಯ್ಕೆಯಾದ ಶಾಸಕರಿಗೆ ತರಬೇತಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ, ಕಲಿಲಿಕ್ಕೆ ಅಂತ್ಯವಿರುವುದಿಲ್ಲ, ಕಲೀಲಿ ಬಿಡಿ. ಕೆಲವರು ಅಭಿಪ್ರಾಯ ಇರಬಹುದು ನಮ್ಮ ಅಭಿಪ್ರಾಯ ಇಲ್ಲಾ. ವಿಜ್ಞಾನಿ ಐನ್‌ಸ್ಟೈನ್ ಹೇಳಿದ್ದಾರೆ, ಬದುಕಿರುವವರೆಗೂ ಕಲಿಯಬೇಕು ಅಂತಾ. ಮೊದಲ ಬಾರಿ ಆಯ್ಕೆಯಾದ ಶಾಸಕರು ಕಲಿಯಲಿ ಬಿಡಿ ಎಂದು ರಾಜಣ್ಣ ಹೇಳಿದ್ದಾರೆ.

ಆಟೋ ಚಾಲಕರಿಗೆ ವಿಷದ ಭಾಗ್ಯ ನೀಡಿ: ಚಾಲಕನ ಕಣ್ಣೀರ ಕಹಾನಿ..

ಯೂಸ್ ಲೆಸ್ ಫೆಲೋ ಇದೆಲ್ಲಾ ಇಟ್ಕೊಬೇಡ: ನಗರಸಭೆ ಆಯುಕ್ತರ ವಿರುದ್ಧ ಸಚಿವ ರಾಜಣ್ಣ ಗರಂ

‘ಮೊದಲು ಸುಳ್ಳು ಸುದ್ದಿ ಹಬ್ಬಿಸಿರುವ ಡಿಕೆಶಿ, ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಬೇಕು’

- Advertisement -

Latest Posts

Don't Miss