Sunday, May 26, 2024

Latest Posts

ವೀಣಾ ಕಾಶಪ್ಪನವರ್ ಕುರಿತು ಶಾಕಿಂಗ್ ಹೇಳಿಕೆ‌ ನೀಡಿದ ಸಚಿವ ಆರ್.ಬಿ.ತಿಮ್ಮಾಪೂರ್

- Advertisement -

Political News: ಶಿವಾನಂದ ಪಾಟೀಲ್ ಅವರು ಈಗ ಮಗಳನ್ನು ಗೆಲ್ಲಿಸಲು ಪಡುತ್ತಿರುವ ಶ್ರಮಕ್ಕಿಂತ ಹೆಚ್ಚಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ವೀಣಾ ಕಾಶಪ್ಪನವರ್ ರನ್ನು ಗೆಲ್ಲಿಸಲು ಶ್ರಮಿಸಿದ್ದರು.

ಬಾಗಲಕೋಟೆ ಲೋಕಸಭಾ ಕ್ಷೇತ್ರ ದಿನದಿಂದ ದಿನಕ್ಕೆ ರಂಗೇರುತ್ತಿದೆ‌. ಎರಡೂ ಕಡೆಯ ಅಭ್ಯರ್ಥಿಗಳ ಪ್ರಚಾರ ಬಿರುಸಿನಿಂದ ಸಾಗಿದ್ದು, ಅದರಲ್ಲೂ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರ ಪ್ರಚಾರ ಒಂದು ಕೈ ಹೆಚ್ಚೇ ಎನ್ನಬಹುದು. ಈ ನಡುವೆ ಚುನಾವಣಾ ಪ್ರಚಾರಾರ್ಥ ನಡೆದ ಸಭೆಯೊಂದರಲ್ಲಿ ಸಚಿವ ಆರ್ ಬಿ ತಿಮ್ಮಾಪೂರ್ ಆಡಿದ ಮಾತೊಂದು ಪತ್ರಕರ್ತರ ಗಮನವನ್ನು ಬಹುವಾಗಿ ಸೆಳೆಯಿತು.

ಸಭೆಯನ್ನುದ್ದೇಶಿಸಿ ಮಾತಾಡಿದ ತಿಮ್ಮಾಪೂರ್ ಅವರು “ಶಿವಾನಂದ ಪಾಟೀಲ್ ಅವರು ಈ ಚುನಾವಣೆಯಲ್ಲಿ ಮಗಳನ್ನು ಗೆಲ್ಲಿಸಲು ಪಡುತ್ತಿರುವ ಶ್ರಮಕ್ಕಿಂತ 2019ರ ಲೋಕಸಭಾ ಚುನಾವಣೆಯಲ್ಲಿ ಆಗಿನ ಅಭ್ಯರ್ಥಿ ವೀಣಾ ಕಾಶಪ್ಪನವರ್ ಅವರ ಗೆಲುವಿಗಾಗಿ ಶ್ರಮಿಸಿದ್ದರು, ಮಧ್ಯರಾತ್ರಿ ವರೆಗೂ ಚುನಾವಣೆ ಗೆಲ್ಲಲು ಶತಾಯಗತಾಯ ತ‌ಂತ್ರಗಾರಿಕೆ ನಡೆಸುತ್ತಿದ್ದದ್ದು ನನಗೆ ಗೊತ್ತಿದೆ.”

ಟಿಕೆಟ್ ಸಿಗದೆ ಅತ್ತ ತನ್ನ ನಿರ್ಧಾರವನ್ನೂ ಸ್ಪಷ್ಟ ಪಡಿಸದ, ಇತ್ತ ನಿಯೋಜಿತ ಅಭ್ಯರ್ಥಿ ಸಂಯುಕ್ತ ಪಾಟೀಲ್ ಗೂ ಬೆಂಬಲವನ್ನು ವೀಣಾ ಕಾಶಪ್ಪನವರ್ ಅವರು ಕೊಡ್ತಿಲ್ಲ. ಇಂತಹ ಸಂದರ್ಭದಲ್ಲಿ ಸಚಿವರು ಆಡಿದ ಈ ಮಾತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ.

ಕನಿಷ್ಠ 200 ಸ್ಥಾನಗಳನ್ನು ಗೆದ್ದು ತೋರಿಸಿ: ಬಿಜೆಪಿಗೆ ಮಮತಾ ಬ್ಯಾನರ್ಜಿ ಚಾಲೆಂಜ್

ಹುಟ್ಟುಹಬ್ಬಕ್ಕೆ ಅನ್ನದಾನ, ಪ್ರಚಾರ ಮಾಡಬೇಡಿ ಎಂದ ನಟಿ ಸಾರಾ ಅಲಿ ಖಾನ್

ರಾಜರಾಜೇಶ್ವರಿಯ ಆಶೀರ್ವಾದದೊಂದಿಗೆ ಪ್ರಚಾರ ಕಾರ್ಯ ಆರಂಭಿಸಿದ ಡಿಸಿಎಂ ಡಿಕೆಶಿ

- Advertisement -

Latest Posts

Don't Miss