Tuesday, July 16, 2024

Latest Posts

ಪ್ರಜ್ವಲ್,ನಿಖಿಲ್ ಪಕ್ಷದ ಕಾರ್ಯಕರ್ತರಾಗಿ ಕೆಲಸ ಮಾಡಲಿ- ರೇವಣ್ಣ ಹೇಳಿಕೆ

- Advertisement -

ಬೆಂಗಳೂರು: ನಿಖಿಲ್ ಹಾಗೂ ಪ್ರಜ್ವಲ್ ಗೆ ಈಗಾಗಲೇ ಸಾಕಷ್ಟು ಪ್ರಚಾರ ಸಿಕ್ಕಿದೆ, ಅವರು ತೆರೆ ಮರೆಗೆ ಸರಿಯೋದು ಸೂಕ್ತ ಅನ್ನೋ ವೈಎಸ್ ವಿ ದತ್ತಾ ಹೇಳಿಕೆಯನ್ನು ಸಚಿವ ಎಚ್.ಡಿ.ರೇವಣ್ಣ ಸಮರ್ಥಿಸಿಕೊಂಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ, ನಿಖಿಲ್ ಹಾಗೂ ಪ್ರಜ್ವಲ್ ಪಕ್ಷದ ಕಾರ್ಯಕರ್ತರಾಗಿ ದುಡಿಯಲಿ. ಹಾಗೆ ನೋಡಿದ್ರೆ ಜೆಡಿಎಸ್ ವರಿಷ್ಠರಾದ ದೇವೇಗೌಡರು ನನನ್ನೇನು ರಾಜ್ಯಾಧ್ಯಕ್ಷ, ಪ್ರಧಾನ ಕಾರ್ಯಕರ್ಶಿ ಮಾಡಿದ್ದಾರಾ..? ಅಂತ ಪ್ರಶ್ನಿಸಿದ ರೇವಣ್ಣ, ರಾಷ್ಟ್ರೀಯ ಅಧ್ಯಕ್ಷರು ಯಾವ ಜವಾಬ್ದಾರಿ ಕೊಟ್ಟರೂ ನಿರ್ವಹಿಸುವೆ ಎಂದರು. ಹಾಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಒಪ್ಪೋದಕ್ಕೆ ನಾನು ಮಾತ್ರ ತಯಾರಿಲ್ಲ. ಆ ಸ್ಥಾನಕ್ಕೆ ಏರುವ ಅರ್ಹತೆಯೂ ನನಗಿಲ್ಲ. ನನಗೆ ಕೊಟ್ಟಿರೋ ಲೋಕೋಪಯೋಗಿ ಇಲಾಖೆಯೇ ಸಾಕು ಅಂತ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟಪಡಿಸಿದ್ದಾರೆ.

ಸಿಎಂಗೆ ಟೆನ್ಶನ್ ಕೊಡ್ತಿರೋದು ಯಾರು?? ಈ ವಿಡಿಯೋದಲ್ಲಿದೆ ಕಂಪ್ಲೀಟ್ ಡೀಟೇಲ್ಸ್. ತಪ್ಪದೇ ನೋಡಿ

- Advertisement -

Latest Posts

Don't Miss