Thursday, November 21, 2024

Latest Posts

ನೆಹರುರನ್ನು ಬೈಯೋದಕ್ಕೆ ನಿಮಗೆ ಅರ್ಹತೆ ಇದೆಯಾ?: ಬಿಜೆಪಿಗೆ ಸಂತೋಷ್ ಲಾಡ್ ಪ್ರಶ್ನೆ..

- Advertisement -

Dharwad News: ಧಾರವಾಡ: ಧಾರವಾಡಕ್ಕೆ ಭೇಟಿ ಕೊಟ್ಟಿದ್ದ ಸಚಿವ ಸಂತೋಷ್ ಲಾಡ್, ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಯಾವ ಯಾವ ಇಲಾಖೆಯಲ್ಲಿ ಹಗರಣ ಆಗಿದೆ ಎಲ್ಲವನ್ನ ತನಿಖೆ ಮಾಡಲಾಗುತ್ತಿದೆ. ವಿಪಕ್ಷದಲ್ಲಿದ್ದಾಗ ನಾವು ಒತ್ತಾಯ ಮಾಡಿದ್ದೆವೆ. ಆದರೆ ಈಗ ನಮ್ಮದೆ ಆಡಳಿತವಿದೆ ಅದಕ್ಕೆ ತನಿಖೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಅದರಲ್ಲೂ ಆರೋಗ್ಯ ಇಲಾಖೆಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ಆಗಿದೆ. ಬೇರೆ ಬೇರೆ ಜಿಲ್ಲೆಯಲ್ಲಿ ಬಿಜೆಪಿಗರು ಕಾಂಗ್ರೆಸ್ ಬರ್ತಾ ಇದಾರೆ. ಧಾರವಾಡ ಜಿಲ್ಲೆಯಲ್ಲಿ ಇಬ್ಬರು ಬಿಜೆಪಿಗರು ಕಾಂಗ್ರೆಸ್ ಪಕ್ಷಕ್ಕೆ ಬರ್ತಾರೆ . ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಾಂಗ್ರೆಸ್ ಪಕ್ಷಕ್ಕೆ‌ ಬರ್ತಾರೆ ಎಂದು ಮಾಹಿತಿ ಇದೆ. ಕುಂದಗೋಳದ ಮಾಜಿ ಶಾಸಕ ಎಸ್ ಐ ಚಿಕ್ಕನಗೌಡ್ರು ಬರ್ತಾರೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ಇದಾದ ಬಳಿಕ ಹುಬ್ಬಳ್ಳಿಗೆ ಭೇಟಿ ನೀಡಿದ ಲಾಡ್ ಅಲ್ಲೂ ಕೂಡ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ಅವರು 10 ವರ್ಷ ಆಯ್ತು ಲೋಕ್ ಪಾಲ್ ಬಗ್ಗೆ ಪಾರ್ಲಿಮೆಂಟ್ ನಲ್ಲಿ ಮಾತನಾಡುತ್ತಿಲ್ಲ. ನಮ್ಮ ವಿರುದ್ಧ ಬಹಳ ಮಾತನಾಡುತ್ತಿದ್ದಾರೆ, ಕ್ಯಾಗ್ ರಿಪೋರ್ಟ್ ಬಂದಾಗಿದೆ. ರೆಫೈಲ್ ಡೀಲ್ ಮುಚ್ಚಿ ಹೋಗಿದೆ ನಾನು ಮಾತನಾಡಲ್ಲ. ಈಗಿರುವ ಕ್ಯಾಗ್ಸ್ ರಿಪೋರ್ಟ್ ನಲ್ಲಿ 6 ಜಾಗದಲ್ಲಿ ಸ್ಕ್ಯಾಮ್ ಆಗಿದೆ. ದೇಶ ಡೆಮೋಕ್ರೆಸಿ ಸೇಟಿಫೈ ನಲ್ಲಿ ನಡೀತಾ ಇಲ್ಲಾ.

ಇಂದಿರಾ ಗಾಂಧಿ, ಮನಮೋಹನ ಸಿಂಗ್ ಸೇರಿದಂತೆ ಹಲವರ ಕಾಲದಲ್ಲಿ ಆಗಿರುವ ಕೇಂದ್ರ ಸರ್ಕಾರದ ಸೆಂಟರ್ ಗಳು, ಹೆಚ್ಚು ಮಾರಾಟ ಆಗಿರೋದು ಇವರ ಕಾಲದಲ್ಲಿ. ಪ್ರಚಾರ ಗಿಟ್ಟಿಸಿಕೊಳ್ಳೋದನ್ನ ಬಿಟ್ರೆ, ಕಳೆದ 10 ವರ್ಷದಲ್ಲಿ ಯಾವುದೇ ಲಾಭ ಆಗಿಲ್ಲ. ಚುನಾವಣೆ ಇದೆ ಗಿಮಿಕ್ ಸಹಿತ ನಡಿಯುತ್ತೆ. ಸಾವಿರಾರು ಕೋಟಿ ಸರ್ಕಾರದ ದುಡ್ಡು ಖರ್ಚು ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳೋದ್ರಲ್ಲಿ ಮುಂದೆ ಇದೆ. ಮುಂದಿನ ದಿನಗಳಲ್ಲಿ ಯಾರು ಸರಿ, ತಪ್ಪು ಅಂತ ಜನ ಪಾಠ ಕಲಿಸ್ತಾರೆ ಎಂದು ಸಂತೋಷ್ ಪ್ರತಿಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರಲ್ಹಾದ್ ಜೋಶಿ ಅವರು ನಮಗೆ ಭ್ರಷ್ಟಾಚಾರ ಅಂತಾರೆ. ಅನಿಲ್ ಅಂಬಾನಿ ಕಂಪನಿ ಅವರು ಒಂದು ಸೈಕಲ್ ನೂ ಮಾಡಿಲ್ಲ. ಅವರಿಗೆ ಹೆಲಿಕಾಪ್ಟರ್ ಮಾಡಲು ಕೊಡ್ತಿರಲ್ಲ ಇದು ಯಾವ ಧರ್ಮ..? ಅನುಭವ ಇಲ್ಲದ ಕಂಪನಿ ಅವರಿಗೆ ಫ್ರಾನ್ಸ್ ಕಂಪನಿ ಅವರಿಗೆ ನೇರವಾಗಿ ಕಾಂಟ್ರಾಕ್ಟ್ ಕೊಡ್ತೀರಿ ಅಂದ್ರೆ ಇದು ನೇರ ಭ್ರಷ್ಟಾಚಾರ ತಾನೇ? ಕೋವಿಡ್ ಸಂಧರ್ಭದಲ್ಲಿ 30 ಸಾವಿರ ಕೋಟಿ ಸಪ್ರೇಟ್ ಟ್ರಸ್ಟ್ ನಲ್ಲಿ ದುಡ್ಡು ತಗೊಂಡಿದ್ದಾರಲ್ಲ ಇದಕ್ಕಿಂತ ಬೇರೆ ದೊಡ್ಡ ಉದಾಹರಣೆ ಏನು ಬೇಕು..? ಎಂದು ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.

ಪ್ರಧಾನ ಮಂತ್ರಿ ರಿಲೀಫ್ ಫೆಂಡ್ ಅಂತ ತಗೋ ಬಹುದಿತ್ತಲ್ಲ..? ಬಿಜೆಪಿ ಅವರ ಕರ್ಮಕಾಂಡ ಮುಂದಿನ ದಿನಗಳಲ್ಲಿ ಕಾಣುತ್ತೆ. ಚುನಾವಣೆ ಬಂದಿದೆ ನಮ್ಮ ಸರ್ಕಾರದ ಹೆಸರು ಕೆಡಿಸಬೇಕು ಅಂತ ಎವಿಡೆನ್ಸ್ ಇಲ್ಲದೇ ಮಾತನಾಡುತ್ತಾರೆ. ಅವರ ಅಭಿವೃದ್ಧಿ ಬಗ್ಗೆ ಕೇಳಿ ಉತ್ತರ ಕೊಡೋದಿಲ್ಲ. ಪ್ರಧಾನ ಮಂತ್ರಿ ಯಾಕೆ ನೇರವಾಗಿ ಬಂದು ಪ್ರೆಸ್ ಮೀಟ್ ಮಾಡಲ್ಲ ಅನ್ನೋದೇ ನಮ್ಮ ಪ್ರಶ್ನೆ. ಯಾಕೆ 9 ವರ್ಷದಿಂದ ಪ್ರೆಸ್ ಮೀಟ್ ಮಾಡಿಲ್ಲ ಅಂತ ಪ್ರಶ್ನೆ ಮಾಡಿ. ನಿಮ್ಮ ರಿಟೈಡ್ ಆದ ಚೀಫ್ ಜೆಸ್ಟಿಸ್ ಗಳು ಎಲ್ಲಿದ್ದಾರೆ ಈಗ. ಅವರು ಬೇರೆ ಬೇರೆ ಹುದ್ದೆಗಳಲ್ಲಿದ್ದಾರೆ. ನಾವು ಅದನ್ನು ಹೇಳಬಹುದಾ? ಎಂದು ಬಿಜೆಪಿಗರಿಗೆ ಸಂತೋಷ್ ಪ್ರಶ್ನಿಸಿದ್ದಾರೆ.

ಅವರ ಇತಿಹಾಸ ತೆಗೆದು ನೋಡಿ. ಅವರಿಗೆ ಆರೋಪ ಮಾಡೋದನ್ನ ಬಿಟ್ಟು ಏನು ಇಲ್ಲಾ. ಅವರ ರೈಟ್ ಟು ಎಜುಕೇಷನ್ ಎಲ್ಲಿದೆ? ಯಾಕೆ ಮುಗಿತು? ಬಡವರ ಪರವಾಗಿ ಯಾವ ಕಾರ್ಯಕ್ರಮವನ್ನೂ ಮಾಡಿಲ್ಲ. ನಾವು ಮಾಡಿದ ಕಾರ್ಯಕ್ರಮದ ಹೆಸರನ್ನು ಬದಲಾಯಿಸಿದ್ದಾರೆ. ಅವರ ಎಲ್ಲಾ ಕಾರ್ಯಕ್ರಮಗಳು ಎಲ್ಲಿವೆ? ಚುನಾವಣೆ ಬಂದಿದೆ ಪ್ರಚಾರ ಗಿಟ್ಟಿಸಿಕೊಳ್ತಾ ಇದ್ದಾರೆ. 5 ಸಾವಿರ ಕೋಟಿ ಮೋದಿ ಪ್ರಚಾರ, ಅಷ್ಟು ಪ್ರಚಾರ ಮಾಡಿಕೊಂಡ್ರೆ ಮಹಾನ್ ವ್ಯಕ್ತಿಯಂತೆ ಕಂಡೆ ಕಾಣ್ತಾರೆ. 40% ಭ್ರಷ್ಟಾಚಾರದ ಬಗ್ಗೆ ತನಿಖೆ ಆಗೇ ಆಗುತ್ತೆ. 10 ವರ್ಷ ಅಧಿಕಾರ ಇತ್ತಲ್ಲ ನಮ್ಮನ್ನ ಯಾಕೆ ಜೈಲಿಗೆ ಕಳಿಸಿಲ್ಲ. ಸಿಬಿಐ ಸೇರಿ ಎಲ್ಲವನ್ನು ಜೇಬಿನಲ್ಲಿಟ್ಟುಕೊಂಡು ತಿರುಗಾಡುವವರು. ಯಾರ್ಯಾರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೋ ಅವರೆಲ್ಲ ಎಲ್ಲಿದ್ದಾರೆ? ಎಂದು ಬಿಜೆಪಿಗರ ವಿರುದ್ಧ ಸಂತೋಷ್ ಲಾಡ್ ಹರಿಹಾಯ್ದಿದ್ದಾರೆ.

ಬಿಜೆಪಿ ಅವರು ಅವಕಾಶ ವಾದಿಗಳು. ರಾಹುಲ್ ಗಾಂಧಿ ಸದಸ್ಯತ್ವ ತೆಗೆದ್ರು ಏನಾಯ್ತು. ಎಲ್ಲದಕ್ಕೂ ಒಂದು ಕಾಲ ಇರುತ್ತೆ. ನಾವು ಪ್ರಶ್ನೆ ಕೇಳ್ತಿದ್ದೀವಿ ಉತ್ತರ ಕೊಡ್ತಾರಾ ಕೇಳಿ? ದೇಶದಲ್ಲಿ ಎಲ್ಲಾ ದೇವರ ಮೇಲೆ ಒಂದು ದೇವರು ಅಂದ್ರೆ ನಮ್ಮ ನರೇಂದ್ರ ಮೋದಿಯರು ಇರೋದಿಗ ಮೋದಿನೇ ಯಾಕೆ ಬೇಕು ನಿಮಗೆ ಅಂದ್ರೆ ಪ್ರಚಾರಕ್ಕೆ.  ಎಷ್ಟು ರಾಜ್ಯ ಚುನಾವಣೆ ಆಗಿವೆ ಎಲ್ಲಾ ಕಡೆ ಅವರೇ ಇದ್ದಾರೆ. ನರೇಂದ್ರ ಮೋದಿಯವರ ಅಜೆಂಡಾ ಜನಪ್ರಿಯತೆ. ರಾಹುಲ್ ಗಾಂಧಿ ಬಗ್ಗೆ ಒಬ್ಬ ಪ್ರಧಾನ ಮಂತ್ರಿ ಪಾರ್ಲಿಮೆಂಟ್ ನಲ್ಲಿ ಹೇಳ್ತಾರೆ. ಕವಿದ ಮೋಡ, ಹಮ್ನೆ ಸೊಚ್ಚಾ, ಬಾದಲ್ ಕೆ ನಿಚೆ ಹೆಲಿಕಾಪ್ಟರ್ ಲೇಕ್ ಜಾಯೇಂಗೆ ಇದ್ಯಾವ ಪ್ರಭುತ್ವ ಇದು ..?

ಅದೇ ನಾವು ಮಾಡಿದ್ರೆ ತಪ್ಪು ಅಂತ ಹೇಳ್ತಿರಿ. ಪ್ರಧಾನ ಮಂತ್ರಿ ಅವರು ಬುದ್ದಿವಂತರಿದ್ರೆ ಒಂದೇ ಗಂಟೆ ಮಾಧ್ಯಮದ ಮುಂದೆ ಬನ್ನಿ. ಉದಾಹರಣೆಗೆ 56 ರೂಪಾಯಿಗಿದ್ದ 86ಕ್ಕೆ ಹೋಗಿದೆ . ಕಟೀಲ್ ಹೇಳ್ತಾ ಇದ್ರೂ ಮೋದಿ ಅಧಿಕಾರಕ್ಕೆ ತನ್ನಿ 20-30 ರೂಪಾಯಿಗೆ ಡಾಲರ್ ತರ್ತೀವಿ ಅಂತ. ಜೋಶಿ ಅವರಿಗೆ ಕೇಳಬೇಕಲ್ಲ.

ಮೋದಿಯವರಿಗೆ ಬೈತಿಲ್ಲ. ಬೇಜಾರ್ ಆಗ್ತಿದೆ. ಗ್ರಾ. ಪಂ ನೀರು ಚನ್ನಾಗಿ ಬಂದ್ರೆ ಮೋದಿ ಕಾರಣ ಇಲ್ಲಾಂದ್ರೆ ರಾಜ್ಯ ಸರ್ಕಾರ ಕಾರಣ. ಹಿಂದೂ ಮುಸ್ಲಿಂ ಪಾಕಿಸ್ತಾನ್ ಅಂತಾರೆ. ಅವರು ಇನ್ನೊಬ್ರನ್ನ ಕೆಟ್ಟದಾಗಿ ತೋರಿಸಿ ಇವರು ದೊಡ್ಡದಾಗಿ ಬೆಳೆಯೋದು. ನೆಹರುರನ್ನು ಬೈಯೋದಕ್ಕೆ ನಿಮಗೆ ಅರ್ಹತೆ ಇದೆಯಾ? ಎಂದು ಲಾಡ್ ಪ್ರಶ್ನಿಸಿದ್ದಾರೆ.

‘ನಾವು ಇಷ್ಟು ಬೇಗ ಗ್ಯಾರಂಟಿ ಜಾರಿ ಮಾಡ್ತೇವೆ ಅಂತ ಅವರು ಅಂದುಕೊಂಡಿರ್ಲಿಲ್ಲ’

‘ಕಾಂಗ್ರೆಸ್ ಯೋಜನೆಯಲ್ಲಿ 1% ಕೂಡ ಭ್ರಷ್ಟಾಚಾರ ನಡೆಯಲು ಚಾನ್ಸ್ ಇಲ್ಲಾ’

ಧಾರವಾಡ ಟೌನ್ ಪೊಲೀಸ್ ಇನ್ಸಪೆಕ್ಟರಿಂದ “34” ರೌಡಿ ಷೀಟರ್‌ಗಳಿಗೆ ಖಡಕ್ ವಾರ್ನಿಂಗ್…

- Advertisement -

Latest Posts

Don't Miss