Sunday, September 8, 2024

Latest Posts

‘ಸಿದ್ದರಾಮಯ್ಯ ಅಂದ್ರೆ ಚಾಂಪಿಯನ್. ಇಡೀ ದೇಶಕ್ಕೆ ಉತ್ತಮ ಸಿಎಂ ಸಿಕ್ಕಿದ್ದಾರೆ. ಅದು ನಮ್ಮ ಹೆಮ್ಮೆ’

- Advertisement -

Dharwad News: ಧಾರವಾಡ: ಧಾರವಾಡ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್, ಇಂದು ಮಾಧ್ಯಮದೊಂದಿಗೆ ಮಾತನಾಡಿದ್ದು, ಈ ವೇಳೆ ಸಿದ್ದರಾಮಯ್ಯರನ್ನ ಹಾಡಿ ಹೊಗಳಿದ್ದಾರೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸಭೆ ನಡೆದಿದ್ದು, ಈ ಸಭೆಯಲ್ಲಿ ಸಿದ್ದರಾಮಯ್ಯ ಭಾಷಣ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಲಾಡ್, ಸಿದ್ದರಾಮಯ್ಯ ಅಂದ್ರೆ ಚಾಂಪಿಯನ್. ನಮ್ಮ ಇಡೀ ದೇಶಕ್ಕೆ ಉತ್ತಮ ಸಿಎಂ ನಮಗೆ ಸಿಕ್ಕಿದ್ದಾರೆ ಅದು ನಮ್ಮ ಹೆಮ್ಮೆ. ಅವರ ಡಿಮ್ಯಾಂಡ್ ಮಹಾರಾಷ್ಟ್ರ ಅಷ್ಟೇ ಅಲ್ಲ ಮೊನ್ನೆ ತಮಿಳುನಾಡು ಹೋಗಿ ಬಂದಿದ್ದಾರೆ. ಅವರ ಪಾಪುಲ್ಯಾರಿಟಿ ಹೆಚ್ಚಾಗುತ್ತಿದೆ. ಅವರ ಪಾಪ್ಯುಲಾರಿಟಿ ನಮಗೆ ಅನುಕೂಲ ಆಗುತ್ತೆ. ಬೇರೆ ಬೇರೆ ಕಡೆ ಡಿಮ್ಯಾಂಡ್ ಇದ್ರೆ ಸಿದ್ದರಾಮಯ್ಯ ಸಾಹೇಬ್ರು ಹೋಗ್ತಾರೆ ಎಂದು ಲಾಡ್ ಹೇಳಿದರು. ಇದಕ್ಕೆ ಮತ್ತೊಂದು ಪ್ರಶ್ನೆ ಇಟ್ಟ ಮಾಧ್ಯಮದವರು, ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಕೇಂದ್ರಕ್ಕೆ ಹೋಗ್ತಾರಾ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲಾಡ್, ಅದು ಅವರನ್ನೇ ಕೇಳಿ ಎಂದು ಹೇಳಿದ್ದಾರೆ.

ಉಸ್ತುವಾರಿ ಸಚಿವ ಲಾಡ್ ಅವರಿಂದ ಅಬಕಾರಿ ಅಧಿಕಾರಿಗೆ ಖಡಕ್ ಎಚ್ಚರಿಕೆ

ಧಾರವಾಡ ಜಿಲ್ಲೆಯಲ್ಲಿ ಅಕ್ರಮ ಸಾರಾಯಿ ಧಂಧೆ ಎಗ್ಗಿಲ್ಲದೆ ಸಾಗುತ್ತಿದ್ದು. ಈಗ ಮುಂದುವರಿದು ಹಳ್ಳಿಗಳಿಗೂ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ ಈ ಕುರಿತು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಇಂದು ಅಬಕಾರಿ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡರು.

ಅಕ್ರಮ ಸಾರಾಯಿ ಮಾರಾಟ ಮಾಡುವುದು ಧಾರವಾಡದಲ್ಲಿ ಅತಿಯಾಗಿ ನಡೆಯುತ್ತಿದೆ. ನೀವು ಇನ್ನೂ 2 ದಿನಗಳಲ್ಲಿ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಾನು ನಿಮ್ಮ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಲಾಡ್ ಅವರು ಎಚ್ಚರಿಸಿದರು.

ದೇಶದ ಯುವಕರಿಗೆ ಮೋದಿ ಅನ್ಯಾಯ ಮಾಡಿದ್ದಾರೆ: ಸಚಿವ ಸಂತೋಷ ಲಾಡ್

ಹುಬ್ಬಳ್ಳಿ: ದೇಶದ ಯುವಕರಿಗೆ ಅನ್ಯಾಯ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು. ಕಾಂಗ್ರೆಸ್ ಯುವ ಜನತೆಗೆ ಮೋಸ ಮಾಡುವ ಕೆಲಸ ಮಾಡಿಲ್ಲ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಎಲ್ಲ ಗ್ಯಾರಂಟಿ ಅನುಷ್ಠಾನ ಮಾಡಿಯೇ ಮಾಡುತ್ತದೆ. ಆದರೆ ಬಿಜೆಪಿ ಹೇಳಿರುವ ಹದಿನೈದು ಲಕ್ಷ ಬ್ಯಾಂಕ್ ಖಾತೆಗೆ ಹಾಕುವುದು ಎರಡು ಕೋಟಿ ಉದ್ಯೋಗ ಸೃಷ್ಟಿ ಬಗ್ಗೆ ಮಾತನಾಡಲಿ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.

‘ಬಿಜೆಪಿಯಲ್ಲಿ ಶಿಸ್ತು ಹೋಗಿದೆ. ಕಾಂಗ್ರೆಸ್ ಗಾಳಿ ನಮ್ಮ ಮೇಲೂ ಬಂದಿದೆ’

‘ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್. ನೆಹರು ಕಾಲದಿಂದ ಇದು ಆರಂಭವಾಗಿದೆ’

ನೀವೂ ಅಕ್ಕಿ ಖರೀದಿಸಿ ಜನರಿಗೆ ವಿತರಿಸಿ, ನಮ್ಮದೇನು ಅಭ್ಯಂತರವಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

- Advertisement -

Latest Posts

Don't Miss