Hubli: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಸಚಿವ ಸಂತೋಷ್ ಲಾಡ್, ಸರ್ಕಾರ ಪತನವಾಗುವ ಬಗ್ಗೆ ಮಾತನಾಡಿದ್ದಾರೆ. ಸರ್ಕಾರ ಪತನವಾಗುವ ಸಮಯಯಕ್ಕೆ ಆಗತ್ತೆ ಬಿಡ್ರಿ ಎಂದಿದ್ದಾರೆ.
ಸರ್ಕಾರ ಪತನ ಆಗತ್ತೆ ಅನ್ನೋದು ಬಿಟ್ರೆ ಬಿಜೆಪಿಯವರಿಗೆ ಏನ ಪ್ರಶ್ನೆ ಇಲ್ಲ. ಚುನಾವಣೆ ಬರ್ತಿದೆ, ವಿಜಯೇಂದ್ರ ಬರ್ತಾರೆ, ಸರ್ಕಾರ ಪತನ ಆಗತ್ತೆ ಅಂದ್ರೆ ನಾವ ಏನ ಹೇಳೋಣ..? ಸರ್ಕಾರ ಪತನ ಆಗೋದೆ ಇಂಪಾಂರ್ಟೆಂಟ್ ಇದೆಯಾ. ಸರ್ಕಾರ ಪತನ ಆಗೋ ಸಮಯಕ್ಕೆ ಆಗತ್ತೆ ಬಿಡಿ. ಯಾಕೆ ಇವರು ಪದೇ ಪದೇ ಅದನ್ನೆ ಹೇಳ್ತಾ ಕೂಡ್ತಾರೆ.. ಇವರಿಗೆ ಬೇರೆ ಕೆಲಸ ಇಲ್ವಾ..? ಹತ್ತು ವರ್ಷದಲ್ಲಿ ಏನಾಗಿದೆ ಅನ್ನೋದು ಬೇಡ್ವಾ..? ಎಂದು ಲಾಡ್ ಪ್ರಶ್ನಿಸಿದ್ದಾರೆ.
ಇನ್ನು ಡಿ.ಕೆ.ಸುರೇಶ್ ಪ್ರತ್ಯೇಕ ರಾಷ್ಟ್ರದ ಬಗ್ಗೆ ಮಾತನಾಡಿದ್ದಕ್ಕೆ ಪ್ರತಿಕ್ರಿಯಿಸಿದ ಲಾಡ್, ಡಿಕೆ ಸುರೇಶ್ ಅವರ ಅಭಿಪ್ರಾಯ ಹೇಳಿದ್ದಾರೆ. ಅವರ ಹೇಳಿಕೆಯಲ್ಲಿ ಲಾಜಿಕ್ ಇದೆ. ಸೌಥ್ ಇಂಡಿಯಾಗೆ ಬರೋ ದುಡ್ಡು ಕಡಿಮೆಯಾಗಿದೆ. ನಮ್ಮ ದುಡ್ಡು ನಮಗೆ ಬರಲೇಬೇಕು. ನಮ್ಮ ಹಣ ತಗೆದುಕೊಂಡು ಅಲ್ಲಿ ಹೋಗಿ ಅಭಿವೃದ್ಧಿ ಮಾಡೋದು ಸರಿ ಅಲ್ಲ. ಡಿಕೆ ಸುರೇಶ್ ಅದನ್ನೆ ಹೇಳಿದ್ದಾರೆ,ಅದಕ್ಕೆ ನನ್ನ ಸಹಮತ ಇದೆ. ಪ್ರತ್ಯೇಕ ಧಕ್ಷಿಣ ಭಾರತಕ್ಕೆ ಅವರೇ ಉತ್ತರ ಕೊಡಬೇಕು. ಸಂವಿಧಾನ ಬದಲಾವಣೆ ಮಾಡ್ತೀನಿ ಅಂತಾರೆ. ದಿನ ಬೆಳಗ್ಗೆ ಎದ್ರೆ ಮಾತಾಡ್ತಾರೆ. ಸಂವಿಧಾನ ಬದಲಾವಣೆ ಆದ್ರೆ ದೇಶ ಬದಲಾವಣೆ ಆದಂಗೆ ಅಲ್ವಾ. ನಮ್ಮ ರಾಜ್ಯದಲ್ಲಿ ಬೇರೆ ರಾಜ್ಯ ಕೇಳಿದ್ದಾರೆ. ಬೇರೆ ರಾಜ್ಯ,ಬೇರೆ ದೇಶದ ಬಗ್ಗೆ ಹಲವಾರು ಬಾರಿ ಚರ್ಚೆ ಆಗಿದೆ. ಸಂವಿಧಾನ ಬದಲಾವಣೆ ಬಗ್ಗೆ ಚರ್ಚೆಯಾಗಬೇಕು ಎಂದು ಸಂತೋಷ್ ಲಾಡ್ ಆಗ್ರಹಿಸಿದ್ದಾರೆ.
ಬಾಲಕೃಷ್ಣ ಹೇಳಿಕೆ ನಾವ ಸಮರ್ಥನೆ ಮಾಡಲ್ಲ. 80 ಕೋಟಿ ಜನಕ್ಕೆ ಅಕ್ಕಿ ಕೊಡೋದು ಮೋದಿ ಗ್ಯಾರಂಟಿ ಅಲ್ಲ. ಅದು ನಮ್ಮ ಸರ್ಕಾರದ ಕಾರ್ಯಕ್ರಮ. ಅಹಾರ ಭದ್ರತೆ ಕಾರ್ಯಕ್ರಮದಲ್ಲಿ ಅಕ್ಕಿ ಕೊಡ್ತೀದಾರೆ. ನಾವೆಲ್ಲೂ ಸಿದ್ದರಾಮಯ್ಯ ಅಕ್ಕಿ ಅಂದಿಲ್ಲ. ಕರ್ನಾಟಕ ಸರ್ಕಾರದ ಅಕ್ಕಿ ಎಂದಿದ್ದೇವೆ. ಎಲ್ಲ ಕಾರ್ಯಕ್ರಮವೂ ನಮ್ದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಮೇಕ್ ಇನ್ ಇಂಡಿಯಾ ಎಲ್ಲಿದೆ..? ಮೇಕ್ ಇನ್ ಇಂಡಿಯಾದಲ್ಲಿ ಒಂದು ಸೂಜಿ ಮಾಡಿಲ್ಲ. ಮೇಕ್ ಇನ್ ಇಂಡಿಯಾ ಮೇಡ್ ಇನ್ ಇಂಡಿಯಾಗೂ ವ್ಯತ್ಯಾಸ ಇದೆ. ಸ್ಮಾರ್ಟ್ ಸಿಟಿಗಳು ಎಲ್ಲಿವೆ..? ವಿಜಯೇಂದ್ರ ಅವರೇ ನೀವು ಇದರ ಬಗ್ಗೆ ಚರ್ಚೆ ಮಾಡಿ. ಅದು ಬಿಟ್ಟು ಸರ್ಕಾರ ಪತನದ ಬಗ್ಗೆ ಮಾತಾಡಬೇಡಿ. ಸರ್ಕಾರ ಪತನ ಆಗೋ ಸಮಯಕ್ಕೆ ಆಗತ್ತೆ. ಎಷ್ಟು ಬಾರಿ ಅದನ್ನೆ ಹೇಳತೀರಿ..? ಎಂದು ಲಾಡ್ ಮರು ಪ್ರಶ್ನಿಸಿದ್ದಾರೆ.
ಸರ್ಕಾರ ಪತನ ಬಿಟ್ರೇ ಏನೂ ಇಲ್ವಾ…? ಸರ್ಕಾರ ಪತನ ಮಾಡಿ ನೀವು ಮುಖ್ಯಮಂತ್ರಿ ಆಗಿರೋದು ಎಂದು ಲಾಡ್, ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನೀವು ಯಾವಾಗ ಓರಿಜನಲ್ ಮುಖ್ಯಮಂತ್ರಿ ಆಗಿದ್ದೀರಿ..? ದೇಶಕ್ಕೆ ಕಾಂಗ್ರೆಸ್ ಬಿಜೆಪಿ ಅನಿವಾರ್ಯ ಅಲ್ಲ. ಕಾರ್ಯಕ್ರಮಗಳೂ ಅನಿವಾರ್ಯ. ವಾಜಪೇಯಿ ಸರ್ಕಾರ ಮಾಡಿರೋ ಕೆಲಸ ಇಗಿರೋ ಸರ್ಕಾರದ ವ್ಯತ್ಯಾಸ ನೋಡಿ ಎನ್ನುವ ಮೂಲಕ ಲಾಡ್ ವಾಜಪೇಯಿ ಆಡಳಿತವನ್ನು ಹೊಗಳಿದ್ದಾರೆ. ಜನಕ್ಕೆ ಬಸವ,ಅಂಬೇಡ್ಕರ್ ಯೋಚನೆ ಮುಟ್ಟಬೇಕು. ದುರ್ಗಮ್ಮ ಕಾಳಮ್ಮ ಆಂಜನೇಯನ ಬಗ್ಗೆ ಮಾತಾಡಬೇಕು ಎಂದು ಲಾಡ್ ವ್ಯಂಗ್ಯವಾಡಿದ್ದಾರೆ.
ಜಗದೀಶ್ ಶೆಟ್ಟರ್ ಸಾಹೇಬರ ಜೊತೆ ಯಾರ ಬಂದಿರೋದು ನಾನು ನೋಡಿಲ್ಲಾ. ಅವರ ಜೊತೆ ಬಂದಿದ್ದು ನಾನು ನೋಡಿಲ್ಲ, ಹೋಗಿದ್ದು ನಾನು ನೋಡಿಲ್ಲ. ಅಕಸ್ಮಾತ್ ಬಂದಿದ್ರೆ ಹೋಗಲಿ. ನಾನ ಯಾರ ಬಂದಿದ್ದೂ ನೋಡಿಲ್ಲ. ನಮ್ಮ ಪಕ್ಷಕ್ಕೆ ಬಂದ್ರೆ ಶಾಲು ಹಾಕ್ತೀವಿ. ನಾವು ಯಾರಿಗೂ ಶಾಲ ಹಾಕಿಲ್ಲ. ಅಕಸ್ಮಾತ್ ಯಾರಾದರೂ ಬಂದಿದ್ರೆ ಅವರು ಹೋಗಲಿ ನಮಗೇನೂ ಸಮಸ್ಯೆ ಇಲ್ಲ. ಬಿಜೆಪಿಯವರು ಸುಳ್ಳು ಸೃಷ್ಠಿ ಮಾಡ್ತಾರೆ.
ಸುಳ್ಳು ಬಹಳ ಚೆನ್ನಾಗಿ ಹೇಳ್ತಾರೆ ಎಂದು ಲಾಡ್ ಹೇಳಿದ್ದಾರೆ.
ಬಿಗ್‌ಬಾಸ್ ಸ್ಪರ್ಧಿ ಮಾಡಿದ್ದ ರೀಲ್ಸ್‌ನಿಂದ ಕಳೆದು ಹೋಗಿದ್ದ ಪುರುಷ, ಮಂಗಳಮುಖಿಯಾಗಿ ಪತ್ತೆ




