Political News: ಧಾರವಾಡ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಸಚಿವ ಸಂತೋಷ ಲಾಡ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಹುಬ್ಬಳ್ಳಿ ಹಾಗೂ ಧಾರವಾಡ ಮಹಾನಗರ ಪಾಲಿಕೆಯನ್ನ ಪ್ರತ್ಯೇಕವಾಗಿ ವಿಭಜಿಸುವಂತೆ ಮನವಿ ಮಾಡಿದ್ದಾರೆ.
ಧಾರವಾಡದ ಹಿರಿಯ ನಾಗರಿಕರು ಹಾಗೂ ಸಾಹಿತಿಗಳಿಂದ ಪ್ರತ್ಯೇಕ ಪಾಲಿಕೆ ಬೇಡಿಕೆ ಹೆಚ್ಚಾಗಿತ್ತು, ಈ ಹಿನ್ನೆಲೆ ಲಾಡ್ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿ, ಮನವಿ ಪತ್ರ ಕೂಡ ಸಲ್ಲಿಸಿದ್ದು, ಬಹಳ ವರ್ಷಗಳ ಹೋರಾಟಕ್ಕೆ ಮೊದಲ ಹಂತದಲ್ಲಿ ಜಯ ಸಿಕ್ಕಿದೆ. ಹು- ಧಾ ಮಹಾನಗರ ಪಾಲಿಕೆ, ರಾಜ್ಯದ ಎರಡನೇಯ ಅತೀ ದೊಡ್ಡ ಮಹಾನಗರ ಪಾಲಿಕೆಯಾಗಿದೆ. ಇದರಲ್ಲಿ 82 ವಾರ್ಡ್‌ಗಳಿದೆ.
ಇತ್ತೀಚಿಗಷ್ಟೇ ಶಾಸಕ ಅರವಿಂದ್ ಬೆಲ್ಲದ ಕೂಡ, ಪ್ರತ್ಯೇಕ ಪಾಲಿಕೆ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಸಿಎಂ ಸಿದ್ದರಾಮಯ್ಯಗೆ ಪ್ರತ್ಯೇಕ ಪಾಲಿಕೆ ಮಾಡುವಂತೆ ಆಗ್ರಹಿಸಿ ಪತ್ರ ಬರೆದಿದ್ದರು. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಲಾಡ್ ಕೂಡ ನಗರಾಭಿವೃದ್ದಿ ಸಚಿವರಿಗೆ ಪತ್ರ ಬರೆದಿದ್ದಾರೆ.
ಪಾಲಿಕೆಯನ್ನು ವಿಭಜಿಸಿ ಪ್ರತ್ಯೇಕವಾಗಿ ಧಾರವಾಡಕ್ಕೆ ಪಾಲಿಕೆ ನೀಡಬೇಕೆಂದು ಇದರಲ್ಲಿ ಮನವಿ ಮಾಡಲಾಗಿದ್ದು, ಧಾರವಾಡಕ್ಕೆ ಅನುದಾನ ಕೊರತೆ ಸೇರಿ ಅಭಿವೃದ್ದಿ ಕಾರ್ಯಗಳಲ್ಲಿ ಕುಂಠಿತ ಎಂದು ಆರೋಪಿಸಿದ್ದಾರೆ. ಇದೀಗ ನಗರಾಭಿವೃದ್ದಿ ಸಚಿವರಿಂದ ಪಾಲಿಕೆ ವಿಸರ್ಜನೆಗೆ ಲಾಡ್ ಪತ್ರ ಬರೆದಿದ್ದಾರೆ.
ಹಾವೇರಿಯಲ್ಲಿ ಅತ್ತಿಗೆ, ಇಬ್ಬರು ಮಕ್ಕಳನ್ನು ಕೊಚ್ಚಿ ಕೊಂದ ಕಟುಕ: ಮಾಡಿದ ತಪ್ಪಾದರೂ ಏನು?