Dharwad News: ಧಾರವಾಡ: ಅನ್ನಭಾಗ್ಯ ಅಂತೀರಿ.. ಪ್ರತಿ ತಿಂಗಳು ಹತ್ತು ಕೆಜಿ ಅಕ್ಕಿ ಕೊಡ್ತೀವಿ ಅಂತೀರಿ.. ಆದ್ರೆ 14 ವರ್ಷದಿಂದ ಪಡಿತರ ಚೀಟಿಗಾಗಿ ನಾನು ಅಲೆದಾಡುತ್ತಿದ್ದರೂ, ನನಗೆ ಪಡಿತರ ಚೀಟಿ ಮಾಡಿ ಕೊಡ್ತಿಲ್ಲ ಎಂದು ವ್ಯಕ್ತಿಯೊಬ್ಬ ಕಾರ್ಮಿಕ ಸಚಿವ ಸಂತೋಷ ಲಾಡ್ ಮುಂದೆ ತಮ್ಮ ಅಳಲು ತೋಡಿಕೊಂಡ ಪ್ರಸಂಗ ನಡೆಯಿತು.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಡೆದ ಸಭೆಯೊಂದಕ್ಕೆ ಬಂದ ಸಚಿವರನ್ನು ಭೇಟಿಯಾದ ಕೃಷಿ ವಿವಿ ಗುತ್ತಿಗೆ ನೌಕರ, ಸರ್ ನಾನು 14 ವರ್ಷದಿಂದ ಪಡಿತರ ಚೀಟಿಗಾಗಿ ಅಲೆದಾಡುತ್ತಿದ್ದೇನೆ. ಇದುವರೆಗೂ ನನಗೆ ರೇಷನ್ ಕಾರ್ಡ್ ಸಿಕ್ಕಿಲ್ಲ. ಗುತ್ತಿಗೆ ಆಧಾರದ ಮೇಲೆ ನಾನು ಕೃಷಿ ವಿವಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅನ್ನಭಾಗ್ಯ ಅಂತೀರಿ ಆದರೆ ನಮಗೆ ರೇಷನ್ ಕಾರ್ಡ್‌ನ್ನೇ ಮಾಡಿ ಕೊಡುತ್ತಿಲ್ಲ ಎಂದು ತನ್ನ ಅಳಲು ತೋಡಿಕೊಂಡನು.
ಸಚಿವರು ಕೂಡಲೇ ಈ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆ ವ್ಯಕ್ತಿಗೆ ಸೋಮವಾರ ಬಂದು ಭೇಟಿ ಆಗುವಂತೆ ಹೇಳಿದರು.
ರಾಜಕಾರಣ ಯಾವ್ದೇ ಮನೆತನಕ್ಕೆ ಸಿಮೀತವಲ್ಲ – ವಿಜಯೇಂದ್ರ ಆಯ್ಕೆಗೆ ಸೋಮಣ್ಣ ಅಸಮಾಧಾನ