Political News:
ಸಚಿವ ಸಂತೋಷ್ ಲಾಡ್ 50ನೇ ವರ್ಷದ ಹುಟ್ಟುಹಬ್ಬದ ಆಚರಣೆ
ನಿರುದ್ಯೋಗ ಸಮಸ್ಯೆ ಕಿತ್ತೊಗೆಯಲು ಪಣತೊಟ್ಟ ಕಾರ್ಮಿಕ ಸಚಿವ
ಇಂದಿನ ಯುವ ಪೀಳಿಗೆಗೆ ಮಾದರಿ ರಾಜಕಾರಣಿ ಈ ಸಚಿವರು
ನೀವೇನಾದ್ರೂ ಕಾಂಗ್ರೆಸ್‌ನಲ್ಲಿ ಅತ್ಯುತ್ತಮ ಸಚಿವರು ಯಾರು ಅಂತಾ ಕೇಳಿದ್ರೆ, ಇಂದಿನ ಯುವ ಪೀಳಿಗೆಯಲ್ಲಿ, ಅದರಲ್ಲೂ ಉತ್ತರಕರ್ನಾಟಕದ ಹಲವು ಯುವಕ ಯುವತಿಯರು ಹೇಳೋದು, ಸಚಿವ ಸಂತೋಷ್ ಲಾಡ್ ಹೆಸರು.
ಹೌದು, ಕಾರ್ಮಿಕ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವ ಸಂತೋಷ್ ಲಾಡ್ ಅವರು, ಹಲವು ಕಾರ್ಮಿಕರು ದುಡಿದು ಜೀವನ ನಡೆಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಸಂತೋಷ್ ಲಾಡ್ ಫೌಂಡೇಶನ್ ಮೂಲಕ ಎಷ್ಟೋ ಕಡೆ ಉದ್ಯೋಗ ಮೇಳ ನಡೆಸಿ, ಅಂಗವಿಕಲು, ಮಹಿಳೆಯರು, ನಿರುದ್ಯೋಗಿಗಳು ಉದ್ಯೋಗ ಹುಡುಕಿಕೊಳ್ಳಲು ಸಹಾಯ ಮಾಡಿದ್ದಾರೆ.
ರಾಜೀನಾಮೆ ಕೊಡಬೇಕೆಂದು ಗೊತ್ತಿದ್ದರೂ ಕರ್ತವ್ಯ ನಿಭಾಯಿಸಿದ್ದ ಅದ್ಭುತ ರಾಜಕಾರಣಿ
ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಬಂದಾಗ, ಸಂತೋಷ್ ಲಾಡ್ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಕಾರಣಾಂತರಗಳಿಂದ ಅವರು ತಮ್ಮ ಸಚಿವ ಸ್ಥಾನ ಕಳೆದುಕೊಂಡಿದ್ದರು. ಆದರೆ ಕೂಡ, ಇನ್ನೇನು ನಾಳೆ ಅವರು ರಾಜೀನಾಮೆ ನೀಡಬೇಕು ಎಂದು ಗೊತ್ತಿದ್ದರೂ ಕೂಡ, ಕೇದಾರನಾಥದಲ್ಲಿ ಬಂದ ಪ್ರವಾಹದಲ್ಲಿ ಸಿಲುಕಿದ್ದ ಕನ್ನಡಿಗರ ರಕ್ಷಣೆಗಾಗಿ ಹೋಗಿದ್ದರು.
ಕೇದಾರನಾಥಕ್ಕೆ ಹೋಗಿ, ಅಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಕನ್ನಡಿಗರನ್ನು ರಕ್ಷಿಸಿ, ಕರ್ನಾಟಕಕ್ಕೆ ಕರೆದುಕೊಂಡು ಬಂದು, ಬಳಿಕ ರಾಜೀನಾಮೆ ನೀಡಿದ್ದರು. ಆದಲೇ ಹಲವರಿಗೆ ಸಂತೋಷ್ ಲಾಡ್ ಎಂಥ ಅದ್ಭುತ ರಾಜಕಾರಣಿ ಎಂದು ಗೊತ್ತಾಗಿತ್ತು. ಬೇರೆ ಬೇರೆ ಪಕ್ಷಗಳನ್ನು ಬೆಂಬಲಿಸುವ ಹಲವರು, ಸಂತೋಷ್ ಲಾಡ್ ಅವರ ಕೆಲಸವನ್ನು ಮೆಚ್ಚುತ್ತಾರೆ.
ಉದ್ಯೋಗ ಮೇಳದ ಮೂಲಕ ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಮುಂದಾದ ಕಾರ್ಮಿಕ ಸಚಿವರು
ಬಳ್ಳಾರಿ ಜಿಲ್ಲೆಯ ಕಂಪ್ಲಿ, ಧಾರವಾಡ, ಕಂಪ್ಲಿ, ಕೂಡ್ಲಿಗಿ ಸೇರಿ ಹಲವು ಕಡೆ ಸಂತೋಷ್ ಲಾಡ್ ಫೌಂಡೇಶನ್‌ನಿಂದ ಉದ್ಯೋಗ ಮೇಳ ನಡೆಸಿ, ಹಲವು ನಿರುದ್ಯೋಗಿಗಳಿಗೆ ಉದ್ಯೋಗ ನೀಡಲಾಗಿದೆ. ಕೆಲವರಿಗೆ ತರಬೇತಿ ನೀಡಿ, ಬಳಿಕ ಕೆಲಸ ಪಡೆಯಲು ಅನುಕೂಲ ಮಾಡಿಕೊಟ್ಟಿರುವ ಖ್ಯಾತಿ ಸಂತೋಷ್ ಲಾಡ್ ಅವರಿಗಿದೆ.
ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಹಾಯ ಧನ
ಬರೀ ನಿರುದ್ಯೋಗಿಗಳಿಗಷ್ಟೇ ಅಲ್ಲದೇ, ವಿದ್ಯಾರ್ಥಿಗಳಿಗೂ ಕೂಡ ಸ್ಕಾಲರ್‌ಶಿಪ್ ಕೊಡುವ ಕೆಲಸವನ್ನು ಸಂತೋಷ್ ಲಾಾಡ್ ಫೌಂಡೇಶನ್ ಮಾಡಿದೆ. ಹಲವು ಕಡೆ ಕಾರ್ಯಕ್ರಮಗಳನ್ನು ನಡೆಸಿ, ಅಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಧನವನ್ನು ನೀಡಿ ಗೌರವಿಸಲಾಗಿದೆ.
ಲೇಬರ್ ಕಾರ್ಡ್ ಪಡೆದ ಕಾರ್ಮಿಕರಿಂದ ಸಚಿವರಿಗೆ ಧನ್ಯವಾದ
ಇನ್ನು ಯಾವ ಕಾರ್ಮಿಕರು ಲೇಬರ್ ಕಾಾರ್ಡ್ ಮಾಡಿಸಿರುತ್ತಾರೋ, ಅಂಥವರಿಗೆ ಒಳ್ಳೆಯ ಪ್ರಯೋಜನ ಸಿಗುತ್ತಿದೆ. ಹಾಗಾಗಿ ಕಾರ್ಮಿಕರು ಸಂತೋಷ್ ಲಾಡ್ ಅವರಿಗೆ ಧನ್ಯವಾದ ಸಲ್ಲಿಸುತ್ತಿದ್ದಾರೆ. ಅಂಬೇಡ್ಕರ್ ಕಾರ್ಮಿಕ ಸಹಾಯ ಅಸ್ತ ಸ್ಕೀಮ್ ಅಡಿಯಲ್ಲಿ ಲೇಬರ್ ಕಾರ್ಡ್ ಕೊಡಲಾಗುತ್ತದೆ. 1 ವರ್ಷದಲ್ಲಿ 90 ದಿನವಾದರೂ ಕೆಲಸ ಮಾಡಿದ್ದರೆ, ಅಂಥವರಿಗೆ ಲೇಬರ್ ಕಾರ್ಡ್ ಸಿಗುತ್ತದೆ.
ಈ ಕಾರ್ಡ್ ಇದ್ದವರಿಗೆ ಪಿಂಚಣಿ ಸಿಗುತ್ತದೆ. ಪತ್ನಿಗೆ ಹೆರಿಗೆಯಾದರೆ, ಆ ಭತ್ಯೆಯನ್ನೂ ತುಂಬಲಾಗುತ್ತದೆ. ಅಲ್ಲದೇ ಕಾರ್ಮಿಕ ಸಾವನ್ನಪ್ಪಿದರೆ, ಅಂಥವರ ಅಂತ್ಯಕ್ರಿಯೆ ವೆಚ್ಚವೂ ಭರಿಸಲಾಗುತ್ತದೆ. ಈ ಕಾರ್ಡ್ ಸೌಲಭ್ಯ ಪಡೆದಿರುವ ಕಾರ್ಮಿಕರು, ಸಂತೋಷ್ ಲಾಡ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಸಂತೋಷ್ ಲಾಡ್ ಅವರನ್ನು ನೋಡಿದರೆ ಖುಷಿಯಾಗತ್ತೆ, ಅವರು ಬಡವರು, ರೈತರ ಪರ ಕೆಲಸ ಮಾಡುತ್ತಿದ್ದಾರೆ. ಸಹಾಯ ಮಾಡುತ್ತಾರೆ. ಸಚಿವರಾಗಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆಂದು ಹೇಳಿದ್ದಾರೆ. ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದಿದ್ದಾರೆ.
ಧಾರವಾಡದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಸಿದ್ಧತೆ
ಇನ್ನು ಧಾರವಾಡದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ನಡೆಸಲಾಗುತ್ತಿದೆ. ಸರಕಾರದಿಂದ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜಿಸುತ್ತಿರುವುದರಿಂದ ಅಧಿಕಾರಿಗಳು ಉದ್ಯೋಗದಾತರಿಗೆ ಮತ್ತು ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲವಾಗುವಂತೆ ವ್ಯವಸ್ಥಿತವಾಗಿ ಉದ್ಯೋಗ ಮೇಳ ಸಂಘಟಿಸಬೇಕೆಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜನೆ ಕುರಿತು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಮತ್ತು ಅವಳಿ ನಗರದ ಕೈಗಾರಿಕೋದ್ಯಮಿಗಳೊಂದಿಗೆ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿ ಅವರು, ಮಾತನಾಡಿದರು.
ಅರ್ಹತೆ ಇರುವ ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗ ದೊರೆಯಬೇಕು. ಖಾಸಗಿ ಕೈಗಾರಿಕೆಗಳಲ್ಲಿ ಉದ್ಯೋಗ ಕಲ್ಪಿಸಲು ಈ ಉದ್ಯೋಗ ಮೇಳ ಸಂಘಟಿಸಲಾಗುತ್ತಿದೆ.ಮೇಳ ಪೂರ್ವದ ಒಂದು ವಾರ ಮೊದಲೇ ಉದ್ಯೋಗಾಂಕ್ಷಿಗಳ ಮಾಹಿತಿ, ಬೇಡಿಕೆ ಸಂಗ್ರಹಿಸಿ, ಮ್ಯಾಪಿಂಗ್ ಮಾಡಬೇಕು ಅವಳಿ ನಗರದ ಕೈಗಾರಿಕೋದ್ಯಮಿಗಳಿಂದ ಕಾರ್ಮಿಕರ ಬೇಡಿಕೆ ಪಡೆಯಬೇಕು. ಅದಕ್ಕೆ ಅನುಗುಣವಾಗಿ ಕಾರ್ಯಕ್ರಮ ರೂಪಿಸಬೇಕೆಂದು ಅವರು ಹೇಳಿದರು.
ಉದ್ಯೋಗ ಮೇಳಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಕುಡಿಯುವ ನೀರು, ಊಟ, ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳು ಸೀಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಆಕಾಂಕ್ಷಿಗಳು ನೋಂದಣಿ ಮಾಡಿಕೊಂಡರೆ ಎರಡು ದಿನಗಳವರೆಗೆ ಉದ್ಯೋಗ ಮೇಳ ಆಯೋಜಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕೆಂದು ಸಚಿವರು ನಿರ್ದೇಶನ ನೀಡಿದರು.
ಆಶಾದೀಪ ಎಂಬ ನೂತನ ಯೋಜನೆ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯೋಗ ಆಕಾಂಕ್ಷಿಗಳಿಗೆ ಕೈಗಾರಿಕೆಗಳು ಉದ್ಯೋಗ ನೀಡಿದಲ್ಲಿ ಉದ್ಯೋಗಿಗೆ ಸರಕಾರದ ಕಾರ್ಮಿಕ ಇಲಾಖೆಯಿಂದ ಆಶಾದೀಪ ಯೋಜನೆಯಡಿ ಎರಡು ವರ್ಷಗಳವರೆಗೆ ಪ್ರತಿ ತಿಂಗಳು 6 ಸಾವಿರ ರೂ.ಗಳ ಸಹಾಯಧನ ನೀಡುತ್ತದೆ. ಕೈಗಾರಿಕೆಗಳು ಎಸ್.ಸಿ., ಎಸ್.ಟಿ. ಸಮುದಾಯದವರಿಗೆ ಉದ್ಯೋಗ ನೀಡಿ ಪ್ರೋತ್ಸಾಹಿಸಬೇಕು ಮತ್ತು ಆಶಾದೀಪ ಯೋಜನೆ ಪ್ರಯೋಜನೆ ಪಡೆಯಬೇಕೆಂದು ಸಚಿವರು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರವು, ಖಾಸಗಿ ವಲಯದ ಉದ್ಯೋಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ಮಾಲೀಕರನ್ನು, ಉದ್ಯೋಗದಾತರನ್ನು ಉತ್ತೇಜಿಸುವ ದೃಷ್ಟಿಯಿಂದ ಹಾಗೂ ಈ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಖಾಸಗಿ ವಲಯದಲ್ಲಿ ಉದ್ಯೋಗಾವಕಾಶ ಪಡೆಯಲು ಅನುಕೂಲವಾಗುವಂತೆ ಆಶಾದೀಪ ಎಂಬ ನೂತನ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯನ್ನು ಕರ್ನಾಟಕ ರಾಜ್ಯ ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ (ಆಶಾದೀಪ ಯೋಜನೆ) ಸೊಸೈಟಿಯ ಮೂಲಕ ಜಾರಿಗೊಳಿಸಲಾಗುತ್ತಿದೆ ಎಂದು ಸಚಿವ ಸಂತೋಷ ಎಸ್.ಲಾಡ್ ಅವರು ತಿಳಿಸಿದರು.
ಹೀಗೆ ಆಗಾಗ ಉದ್ಯೋಗ ಮೇಳ ಸೃಷ್ಟಿಸಿ ಆದಷ್ಟು ನಿರುದ್ಯೋಗ ಸಮಸ್ಯೆ ಪರಿಹಾರಕ್ಕಾಗಿ ಸಂತೋಷ್ ಲಾಡ್ ಫೌಂಡೇಶನ್ ಪ್ರಯತ್ನಿಸುತ್ತಿದೆ. ಫೆಬ್ರವರಿ 27ರಂದು ಸಂಂತೋಷ್ ಲಾಡ್ ಅವರ ಹುಟ್ಟುಹಬ್ಬವಾಗಿದ್ದು, ಸಂತೋಷ್ ಲಾಡ್ ಅವರ ಫೌಂಡೇಶನ್ ಇದೇ ರೀತಿ ಹಲವರ ಸಮಸ್ಯೆಗೆ ಸ್ಪಂದಿಸಿ, ಎಲ್ಲರ ಬಾಳಿಗೂ ಬೆಳಕಾಗಲಿ ಎಂದು ಹಾರೈಸೋಣ.