Political News: ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆ ವೇಳೆ ನಡೆದ ಗಲಾಟೆ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದ್ದು, ಅಂಥ ಘಟನೆಗಳನ್ನು ಸ್ಥಳೀಯ ಪೊಲೀಸ್ ಅಧಿಕಾರಿಗಳು ಹ್ಯಾಂಡಲ್ ಮಾಡುತ್ತಾರೆ. ಕಲ್ಲು ತೂರಾಟದಂಥ ಘಟನೆ ನಡೆದಿದ್ದು, ಸ್ಥಳೀಯ ಜಿಲ್ಲಾಡಳಿತದವರು ಆ ಬಗ್ಗೆ ಕ್ರಮ ವಹಿಸುತ್ತಾರೆಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಆಗಿದ್ದೇನು..?
ನಿನ್ನೆ ಶಿವಾಜಿ ಮಹಾರಾಜರ ಜಯಂತಿ ಇದ್ದು, ಹಲವೆಡೆ ಹಿಂದೂ ಕಾರ್ಯಕರ್ತರು ಮೆರವಣಿಗೆ ಹಮ್ಮಿಕೊಂಡಿದ್ದರು. ಅದೇ ರೀತಿ ಬಾಗಲಕೋಟೆಯ ಕಿಲ್ಲಾ ಓಣಿಯಲ್ಲೂ ಹಿಂದೂ ಕಾರ್ಯಕರ್ತರು ಮೆರವಣಿಗೆಗೆ ಬಂದಿದ್ದು, ಅಲ್ಲೇ ಇದ್ದ ಮಸೀದಿಯ ಬಳಿಯಿಂದ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.ಈ ವೇಳೆ ಕೋಮು ಗಲಭೆ ಉಂಟಾಗಿದ್ದು, ಪೊಲೀಸ್ ಅಧಿಕಾರಿಗಳಿಗೂ ಕಲ್ಲು ತಾಕಿ ರಕ್ತ ಬಂದಿದೆ.
ಬಳಿಕ ಹಿಂದೂ ಕಾರ್ಯಕರ್ತರ ಮೇಲೆ ಪೋಲೀಸರು ಲಾಠಿ ಚಾರ್ಜ್ ಮಾಡಿದ್ದು, ಹಿಂದೂ ಮುಖಂಡರು ಮತ್ತು ಪೊಲೀಸರ ನಡುವೆ ವಾಗ್ವಾಾದ ಏರ್ಪಟ್ಟಿದೆ. ಬಳಿಕ ಮರುದಿನವೂ ಕಲ್ಲು ಎಸೆತ ನಡೆದು ಗಲಾಟೆಯಾಗಿದ್ದು, ಸದ್ಯ ಬಾಗಲಕೋಟೆ ಬೂದಿ ಮುಚ್ಚಿದ ಕೆಂಡದಂತಾಗಿದೆ.




