ಮಂಡ್ಯ: ಮಂಡ್ಯಕ್ಕೆ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಶ್ರೀರಾಮುಲು ಆಗಮಿಸಿದ್ದು, ಮಂಡ್ಯದ ಖಾಸಗಿ ಸಮುದಾಯ ಭವನದಲ್ಲಿ ನಡೆದ ಪರಿಶಿಷ್ಟ ಪಂಗಡ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿದ್ದರು. ಶ್ರೀರಾಮುಲು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ್ದು, ‘ಮೀಸಲಾತಿ ಕ್ರೆಡಿಟ್ ಬಿಜೆಪಿ ಪಕ್ಷಕ್ಕೆ ಮಾತ್ರ ಸಲ್ಲುತ್ತೆ’ ಎಂದರು.
ಬಿಜೆಪಿ ಐತಿಹಾಸಿಕ ತಿರ್ಮಾನ ತೆಗೆದುಕೊಂಡಿದೆ. ಎಸ್ಸಿ,ಎಸ್ಟಿ ಮೀಸಲಾತಿ ವಿಚಾರದಲ್ಲಿ 1957 ರಲ್ಲಿ ಅಂಬೇಡ್ಕರ್ ಸಂವಿಧಾನ ಬರೆದ್ರು. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಸಿಗಬೇಕಿತ್ತು ಸಿಕ್ಕಲ್ಲ. ಮೀಸಲಾತಿ ಜಾಸ್ತಿ ಮಾಡಿದ್ದು ಬಿಜೆಪಿ ಪಕ್ಷ.. ಮೋದಿ ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದ್ದಾರೆ.
‘ಜೋಡೊ ಯಾತ್ರೆ ಓಡೋ ಯಾತ್ರೆಯಾಗಿದೆ, ಮರ್ಯಾದೆ ಹೋಯ್ತೆ ಹೊರತು ಲಾಭ ಇಲ್ಲ’
ನ.20 ಕ್ಕೆ ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಇದೆ. 151 ಜಾತಿಯ ಜನರು ಸಮಾವೇಶದಲ್ಲಿ ಸೇರಬೇಕು. ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಗೆ ಮಾತನಾಡಕ್ಕೆ ಒಂದು ಶಬ್ದಕೂಡ ಇಲ್ಲ. ಹಿಂದೂಳಿದ ಜಾತಿ ಹೆಸರು ಹೇಳಿಕೊಂಡು ಸಿಎಂ ಆಗಿದ್ರು. ಸಿಎಂ ಸಂದರ್ಭದಲ್ಲಿ ಮೀಸಲಾತಿ ಹೆಚ್ಚಳ ಮಾಡಬೇಕಿತ್ತು. 2017 ರಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು, ನಾಗಮೋಹನ್ ದಾಸ್ ವರದಿ ಜಾರಿ ಮಾಡಿಲ್ಲ ಎಂದರು.
ಅಲ್ಲದೇ, ನಮ್ಮದು ಪಾಲು ಅಂತಾರೆ, ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದ್ದು. ಯಾರು ಮಾಡದ ಕೆಲಸವನ್ನು ಬಿಜೆಪಿ ಮಾಡಿದೆ. ಈ ಕ್ರೆಡಿಟ್ ಯಾರು ತೆಗೆದುಕೊಳ್ಳಲು ಹಾಗಲ್ಲ. ನಮ್ಮ ಬಿಜೆಪಿಗೆ ಮಾತ್ರ ಮೀಸಲಾತಿ ಕ್ರೆಡಿಟ್ ಸಲ್ಲತ್ತೆ. ಬೊಮ್ಮಯಿ, ನರೇಂದ್ರ ಮೋದಿ ಗೆ ಈ ಕ್ರೆಡಿಟ್ ಎಂದು ಶ್ರೀರಾಮುಲು ಬಿಜೆಪಿ ಮತ್ತು ಮೋದಿ ಪರ ಬ್ಯಾಟ್ ಬೀಸಿದ್ದಾರೆ..