ಹಾಸನ: ಹಾಸನಕ್ಕೆ ಭೇಟಿ ನೀಡಿದ ಸಚಿವ ಶ್ರೀರಾಮುಲು, ಹಾಸನಾಂಬೆಯ ದರ್ಶನ ಮಾಡಿದರು. ಇದಾದ ಬಳಿಕ ಮೀಸಲಾತಿ ಹೆಚ್ಚಳ ಚುನಾವಣೆ ಗಿಮಿಕ್ ಎಂಬ ವಿರೋಧ ಪಕ್ಷದ ನಾಯಕರ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಅನೇಕ ದಶಕಗಳಿಂದ ಮೀಸಲಾತಿ ಜಾಸ್ತಿ ಆಗಬೇಕು ಅಂತ ಹೋರಾಟ ನಡೆಯುತ್ತಿತ್ತು. ಎಸ್ಸಿ ಜನಾಂಗಕ್ಕೆ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕೊಡಬೇಕಿತ್ತು. ಅನೇಕ ಸರ್ಕಾರಗಳು ಬಂದು, ಹೋದವು. ಸರ್ಕಾರಗಳು ಬಂದಂತಹ ಸಮಯದಲ್ಲಿ ಮೀಸಲಾತಿ ಜಾಸ್ತಿ ಮಾಡಬೇಕು ಅಂತ ಈ ಶ್ರೀರಾಮುಲು ಕೂಡ ಒತ್ತಾಯಿಸಿದ್ದ. ನಾನು ಅನೇಕ ಭಾರಿ ಉಲ್ಲೇಖ ಮಾಡದ್ದೀನಿ ಎಂದು ಹೇಳಿದ್ದಾರೆ.
ಅಲ್ಲದೇ, ನಮ್ಮ ಸರ್ಕಾರ ಬರಬೇಕು, ಈ ಬಿಜೆಪಿ ರಾಮುಲು ಕೆಳಸಮುದಾಯಗಳಿಗೆ ಮೀಸಲಾತಿ ಜಾಸ್ತಿ ಮಾಡಿಕೊಡ್ತಿನಿ ಅನ್ನುವ ವಿಚಾರದಲ್ಲಿ ಅವತ್ತು ಕೂಡ ರಾಮುಲು ಬದ್ದವಾಗಿದ್ದೆ. ಎಷ್ಟು ಮಂದಿ, ಎಷ್ಟು ರಾಜಕೀಯ ಪಕ್ಷಗಳು ಆಗಲ್ಲ ಅನ್ನುವ ಸಂದರ್ಭದಲ್ಲಿ ನಾನು ಮಾತು ಕೊಟ್ಟಿದ್ದೆ. ಎಷ್ಟೋ ಮಂದಿ ಟೀಕೆ ಮಾಡಿದ ಸಂದರ್ಭದಲ್ಲಿ ಯಾವತ್ತು ಕೂಡ ಹೆದರಿ ಹಿಂದೆ ಹೋದಂತಹ ವ್ಯಕ್ತಿಯಲ್ಲ, ಈ ಮಾತಿನಲ್ಲಿ ಸ್ಟಿಕನ್ ಆಗಿದ್ದೆ.
ಇವತ್ತು 150 ಸಮುದಾಯದಗಳ ಪರವಾಗಿ ಸರ್ಕಾರ ಇವತ್ತು ಮೀಸಲಾತಿ ಹೆಚ್ಚಳ ಮಾಡಿದೆ. ಇದು ಪೊಲಿಟಿಕಲ್ ಗಿಮಿಕ್, ರಾಜಕೀಯಕ್ಕೋಸ್ಕರ ಅಲ್ಲ. ನಿನ್ನೆ ರಾತ್ರಿ 10.30 ಕ್ಕೆ ಸುಗ್ರೀವಾಜ್ಞೆ ಆಗಿದೆ. ನಿನ್ನೆ 10.30 ರಿಂದಲೇ ಮೀಸಲಾತಿ ಜಾಸ್ತಿಯಾಗಿದೆ, ಇವತ್ತಿನಿಂದ ಜಾರಿಗೆ ಬರುವಂತಹ ಕೆಲಸವಾಗಿದೆ. ಇದು ಪೊಲಿಟಿಕಲ್ ಗಿಮಿಕ್ ಅನ್ನುತ್ತಿರುವುದಕ್ಕೆ ಯಾವುದೇ ರೀತಿ ಅರ್ಥವಿಲ್ಲ, ಇವತ್ತು ನಮ್ಮ ಸರ್ಕಾರ ಹೆಚ್ಚಳ ಮಾಡಿದೆ ಎಂದು ಹೇಳಿದ್ದಾರೆ.
‘ತಾಯಿಯ ಆಶೀರ್ವಾದಿಂದ ಇವತ್ತು ಸರ್ಕಾರ ಎಸ್ಸಿ, ಎಸ್ಟಿ ಜನಾಂಗಕ್ಕೆ ಮೀಸಲಾತಿ ಜಾಸ್ತಿ ಮಾಡಿದೆ’
ಶಾಸಕ ಪ್ರೀತಂ ಗೌಡ್ರ ನೇತೃತ್ವದಲ್ಲಿ ಬರುವ ಭಕ್ತರಿಗೆ ನಿರಂತರ ಅನ್ನದಾನ..