Sunday, September 8, 2024

Latest Posts

ಮಹಾರಾಷ್ಟ್ರದ ಸ್ಪೆಶಲ್ ಖಾದ್ಯವನ್ನ ನೀವೂ ಒಮ್ಮೆ ಟ್ರೈ ಮಾಡಿ..

- Advertisement -

ಮಹಾರಾಷ್ಟ್ರದ ಪ್ರಖ್ಯಾತ ಖಾದ್ಯಗಳಲ್ಲಿ ಮಿಸಳ್ ಪಾವ್ ತುಂಬಾನೇ ಫೇಮಸ್ ತಿಂಡಿ. ಮಹಾರಾಷ್ಟ್ರದಲ್ಲಿ ಕೆಲವರು ಬೆಳಗ್ಗಿನ ತಿಂಡಿಗೆ ಮಿಸಳ ಪಾವ್ ಮಾಡ್ತಾರೆ. ಬನ್ ಜೊತೆ ಸವಿಯೋ ಈ ಖಾದ್ಯ ರುಚಿಕರವಾಗಿರುತ್ತದೆ. ಹಾಗಾದ್ರೆ ಬನ್ನಿ ಈ ತಿಂಡಿ ಮಾಡೋಕ್ಕೆ ಏನೇನ್ ಸಾಮಗ್ರಿ ಬೇಕು ಅನ್ನೋದನ್ನ ನೋಡೋಣ.

ಬೇಕಾಗುವ ಸಾಮಗ್ರಿ: 2 ಪಾವ್, 2 ಈರುಳ್ಳಿ, ಒಂದು ಟೊಮೇಟೊ, ಒಂದು ಕಪ್ ಮಿಕ್ಸ್‌ಚರ್, ಒಂದು ಚಕ್ಕೆ, 2ರಿಂದ 3ಕಾಳು ಲವಂಗ, 2 ಮಸಾಲೆ ಎಲೆ, ಕೊಂಚ ಸೋಂಪು, 2 ಕಪ್ ನೆನೆಸಿದ ಬಟಾಣಿ, ಕಡಲೆ ಮತ್ತು ಮೊಳಕೆ ಬರಿಸಿದ ಹೆಸರು ಕಾಳು ಮತ್ತು ಮಟ್ಕಿ ಕಾಳು, 2 ಒಣಮೆಣಸಿನಕಾಯಿ, ಖಾರ ಹೆಚ್ಚು ಬೇಕಾದಲ್ಲಿ 3ರಿಂದ 4ಒಣಮೆಣಸು ಬಳಸಿ. 5ರಿಂದ6 ಎಸಳು ಬೆಳ್ಳುಳ್ಳಿ, 5ರಿಂದ 6 ಎಸಳು ಕರೀಬೇವು, ಅರ್ಧ ಸ್ಪೂನ್ ಜೀರಿಗೆ, ಅರ್ಧ ಸ್ಪೂನ್ ಸಾಸಿವೆ, ಕೊಂಚ ಇಂಗು, ಅರ್ಧ ಕಪ್ ತೆಂಗಿನ ತುರಿ, ಒಂದು ಚಿಕ್ಕ ತುಂಡು ಹಸಿ ಶುಂಠಿ, ಅರ್ಧ ಸ್ಪೂನ್ ಅರಿಷಿನ, ಅರ್ಧ ಸ್ಪೂನ್ ಗರಂ ಮಸಾಲೆ, ಅರ್ಧ ಸ್ಪೂನ್ ಧನಿಯಾ ಪುಡಿ, ಅರ್ಧ ಸ್ಪೂನ್ ಹರಿದು ಪುಡಿ ಮಾಡಿದ ಜೀರಿಗೆ, ಒಂದು ನಿಂಬೆ ಹಣ್ಣು, 5ರಿಂದ 6 ಸ್ಪೂನ್ ಎಣ್ಣೆ, ಕೊಂಚ ಬೆಲ್ಲ, ಅರ್ಧ ಕಪ್ ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, ಅಗತ್ಯಕ್ಕೆ ತಕ್ಕಷ್ಟು ಉಪ್ಪು ಮತ್ತು ನೀರು.

ಮಾಡುವ ವಿಧಾನ: ಕುಕ್ಕರಿನಲ್ಲಿ ಎಣ್ಣೆ ಹಾಕಿ, ಅದಕ್ಕೆ ಚಕ್ಕೆ, ಲವಂಗ, ಮಸಾಲೆ ಎಲೆ, ಸೋಂಪು, ಸಾಸಿವೆ, ಜೀರಿಗೆ, ಕರೀಬೇವು, ಇಂಗು ಹಾಕಿ ಕೊಂಚ ಹುರಿಯಿರಿ, ಇದಕ್ಕೆ ಈರುಳ್ಳಿ ಹಾಕಿ ಹುರಿದು, ಕೊಂಚ ಕಂದು ಬಣ್ಣ ಬಂದ ಮೇಲೆ ಟೊಮೇಟೋ ಹಾಕಿ ಬಾಡಿಸಿ.

https://youtu.be/3LN-eJ4i2Iw

ಈಗ ನೆನೆಸಿಟ್ಟುಕೊಂಡ ಕಾಳುಗಳನ್ನ ಸೇರಿಸಿ 2 ನಿಮಿಷ ಹುರಿದು ಅಗತ್ಯವಿದ್ದಷ್ಟು ಉಪ್ಪು, ನೀರು, ಚಿಟಿಕೆ ಅರಿಶಿನ ಸೇರಿಸಿ ಮಿಕ್ಸ್ ಮಾಡಿ, 2ರಿಂದ 3 ವಿಶಲ್ ಕೂಗಿಸಿ ಬೇಯಿಸಿ.

ಕಾಳು ಬೇಯುತ್ತಿರುವಾಗ ಮತ್ತೊಂದು ಪ್ಯಾನ್‌ನಲ್ಲಿ ಕೊಂಚ ಎಣ್ಣೆ , ಕೊಬ್ಬರಿ ತುರಿ, ಬೆಳ್ಳುಳ್ಳಿ, ಒಣಮೆಣಸು ಹಾಕಿ ಘಮ ಬರುವವರೆಗೂ ಹುರಿಯಬೇಕು. 3 ನಿಮಿಷ ಹುರಿದ ನಂತರ ಅದನ್ನ ಮಿಕ್ಸರ್‌ಬೌಲ್‌ಗೆ ಹಾಕಿ ಅದರೊಟ್ಟಿಗೆ ಹಸಿ ಶುಂಠಿ ಹಾಕಿ ಪೇಸ್ಟ್‌ ತಯಾರಿಸಿ.

ಕಾಳುಗಳು ಬೆಂದ ಬಳಿಕ ಅದರಲ್ಲಿ ಈ ಪೇಸ್ಟ್ ಸೇರಿಸಿ. ಜೊತೆಗೆ ಗರಂ ಮಸಾಲೆ ಪೌಡರ್, ಧನಿಯಾ ಪೌಡರ್, ಜೀರಿಗೆ ಪೌಡರ್, ಮತ್ತೆ ಕೊಂಚ ಅರಿಷಿನ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 5ರಿಂದ 10 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಈಗ ಗ್ಯಾಸ್ ಆಫ್ ಮಾಡಿ, ಕೊತ್ತೊಂಬರಿ ಸೊಪ್ಪು ಹಾಕಿ ಮುಚ್ಚಿಡಿ.10 ನಿಮಿಷದ ನಂತರ ಒಂದು ಸ್ಪೂನ್ ನಿಂಬೆ ರಸ ಹಾಕಿ ಮಿಕ್ಸ್ ಮಾಡಿದ್ರೆ, ಮಿಸಳ್ ಪಾವ್ ರೆಡಿ. ಈಗ ಈ ಪಲ್ಯವನ್ನ ಬನ್ ಜೊತೆ ಸವಿಯಲು ಕೊಡಿ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

- Advertisement -

Latest Posts

Don't Miss