Friday, April 18, 2025

Latest Posts

‘ನಾನೇ ಅಂತರ್ಜಾತಿ ವಿವಾಹ ಆಗಿದ್ದೇನೆ. ನಾನೇನು ಚೇಂಜ್ ಆಗಿದ್ದೀನಾ..?’

- Advertisement -

Hassan Political News: ಹಾಸನ: ಹಾಸನದಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಎ.ಮಂಜು, ಒರಿಜಿನಲ್ ಜೆಡಿಎಸ್ ನಮ್ದು ಎಂಬ ಸಿ.ಎಂ.ಇಬ್ರಾಹಿಂ ಹೇಳಿಕೆ ಹಾಗೂ ಜೆಡಿಎಸ್‌ನಿಂದ ಸಿ.ಎಂ.ಇಬ್ರಾಹಿಂ ಉಚ್ಛಾಟನೆ ಹಾಗೂ ನೂತನ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.

ಅವರವರ ಪಕ್ಷ ಅವರವರು ತೀರ್ಮಾನ ತಗೋತಾರೆ. ಕೆಲವರದ್ದು ವೈಯುಕ್ತಿಕ ನಿರ್ಧಾರ ಇರುತ್ತೆ. ಇಬ್ರಾಹಿಂ ಯಾಕೆ ಆ ರೀತಿ ಹೇಳಿದ್ದಾರೆ ಅನ್ನೋದನ್ನ ಅವರೇ ಹೇಳಬೇಕು. ಎನ್‌ಡಿಎ ಜೊತೆ ಹೋಗುವುದು ಇಷ್ಟ ಇಲ್ಲ ಎಂದು ಇಬ್ರಾಹಿಂ ಹೇಳಿದಾಗ, ಅವರ ಬದಲು ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವುದು ನಮ್ಮ ಪಕ್ಷದ ಜವಾಬ್ದಾರಿ. ಆ ಪಕ್ಷದ ಜವಾಬ್ದಾರಿ ಮೇಲೆ ಹೆಚ್ ಡಿಕೆ ಅವರನ್ನು ನೇಮಿಸಿಕೊಂಡಿದ್ದೇವೆ. ಅದರಲ್ಲಿ ತಪ್ಪೇನಿದೆ..? ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ, ಹೊಂದಾಣಿಕೆ ಎನ್ನುವುದು ಮೊದಲಿಂದಲೂ ರಾಜಕಾರಣದಲ್ಲಿ ಇರುವ ಪ್ರಕ್ರಿಯೆ. ಹಿಂದೆ ರಾಮಕೃಷ್ಣ ಹೆಗ್ಡೆ, ಬಂಗಾರಪ್ಪ ಅವರು ಇದ್ದಾಗ ಬಿಜೆಪಿ ಜೊತೆ ಜನತಾದಳ ಹೊಂದಾಣಿಕೆ ಆಗಿರಲಿಲ್ವಾ..? ಈಗ ಯಾಕೆ ಅದರ ಬಗ್ಗೆ ಮಾತನಾಡುತ್ತಾರೆ..? ಹೊಂದಾಣಿಕೆ ಮಾಡಿಕೊಳ್ಳುವುದು ಆ ಪಕ್ಷದ ಸಂಘಟನೆ, ಆ ಪಕ್ಷದ ಶಕ್ತಿಯನ್ನು ಹೆಚ್ಚಿಗೆ ಮಾಡಲು. ಹೊಂದಾಣಿಕೆ ಮಾಡಿಕೊಂಡ ತಕ್ಷಣ ಜಾತ್ಯಾತೀತ ತತ್ವ ಬದಲಾವಣೆ ಆಗಲ್ಲ.

ಉದಾಹರಣೆಗೆ ನಾನೇ ಅಂತರ್ಜಾತಿ ವಿವಾಹ ಆಗಿದ್ದೇನೆ. ನಾನೇನು ಚೇಂಜ್ ಆಗಿದ್ದೀನಾ..? ನನ್ನ ಇನ್ಸಿಲ್ ಚೇಂಜ್ ಆಗುತ್ತಾ..? ಅದಕ್ಕೂ, ಇದಕ್ಕೂ ಸಂಬಂಧವಿಲ್ಲ. ನಮ್ಮ ದೇಶದ ದೃಷ್ಟಿಯಿಂದ, ಮುಂದಿನ ದೇಶದ ಹಿತಕ್ಕೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ತಪ್ಪೇನು‌ ಇಲ್ಲ ಎನ್ನೋದು ನನ್ನ ಅಭಿಪ್ರಾಯ ಎಂದು ಎ.ಮಂಜು ಹೇಳಿದ್ದಾರೆ.

ನಾನು ಈಗಾಗಲೇ ಮೀಟಿಂಗ್‌ನಲ್ಲಿ ಮನವಿ ಮಾಡಿದ್ದೇನೆ. ಹಾಸನ ಲೋಕಸಭಾ ಕ್ಷೇತ್ರಕ್ಕೆ ನಮ್ಮ ಪಕ್ಷದಿಂದ ದೇವೇಗೌಡರು ನಿಲ್ಲಬೇಕೆಂದು ಒತ್ತಾಯ ಮಾಡಿದ್ದೇನೆ. ಇವತ್ತು ಹೇಳುತ್ತಿದ್ದೇನೆ, ಅವರದ್ದು ಇದು ಕೊನೆ ಎಲೆಕ್ಷನ್. ಅವರು ಈ‌ ಜಿಲ್ಲೆಯಿಂದ ನಿಲ್ಲಬೇಕು ಎನ್ನುವುದು ನನ್ನ ಒತ್ತಾಯ ಎಂದು ಎ.ಮಂಜು ಹೇಳಿದ್ದಾರೆ.

MTB Nagaraj : ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಮತ್ತೆ ಆರೋಪಿಸಿದ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್

ಕೊಲೆ ಮಾಡಿ ಕಾಣೆಯಾದಳೆಂದು ಕಥೆ ಕಟ್ಟಿದವರು 3 ವರ್ಷದ ಬಳಿಕ ಅಂದರ್‌..

40 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಡಿಡಿಪಿಐ.

- Advertisement -

Latest Posts

Don't Miss