Monday, September 25, 2023

Latest Posts

‘ಅತೃಪ್ತರು ವಾಪಸ್ ಬರ್ತಾರೆ- ಪತಿ ಕುಮಾರಸ್ವಾಮಿ ಆರಾಮಾಗಿದ್ದಾರೆ’- ಶಾಸಕಿ ಅನಿತಾ ಕುಮಾರಸ್ವಾಮಿ

- Advertisement -

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸರ್ಕಾರ ಉಳಿಯುತ್ತೆ, ಯಾವುದೇ ಕಾರಣಕ್ಕೂ ಪತನವಾಗೋದಿಲ್ಲ ಅಂತ ಶಾಸಕಿ ಅನಿತಾಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಧಾನಮಂಡಲ ಅಧಿವೇಶನ ಹಿನ್ನೆಲೆಲ್ಲಿ ವಿಧಾನಸೌಧಕ್ಕೆ ಆಗಮಿಸಿದ್ದ ಶಾಸಕಿ ಅನಿತಾ ಕುಮಾರಸ್ವಾಮಿ, ರಾಜೀನಾಮೆ ನೀಡಿರುವ ಅತೃಪ್ತ ಶಾಸಕು ವಾಪಸ್ ಬರ್ತಾರೆ. ಶಾಸಕರಾಗಿ ಜನರಿಂದ ಆಯ್ಕೆಯಾದ ಮೇಲೆ ಜನಸೇವೆ ಮಾಡಬೇಕು. ಹಣ, ಅಧಿಕಾರಕ್ಕಾಗಿ ಬೇರೆ ಪಕ್ಷಕ್ಕೆ ಜಿಗಿಯುವುದು ತಪ್ಪು. ಸಮಸ್ಯೆಗಳಿದ್ದರೆ ಮಾತುಕತೆ ಮಾಡೋ ಮೂಲಕ ಅವುಗಳನ್ನು ಬಗೆಹರಿಸಿಕೊಳ್ಳಬೇಕು. ಆದ್ರೆ ಕೆಲ ಶಾಸಕರು ರಾಜೀನಾಮೆ ನೀಡಿರೋದು ಬೇಸರ ತಂದಿದೆ ಎಂದರು. ಇನ್ನು ಪತಿ ಸಿಎಂ ಕುಮಾರಸ್ವಾಮಿ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಭರವಸೆಯಿಂದಿದ್ದು, ಅವರು ಆರಾಮಾಗಿದ್ದಾರೆ ಅಂತ ಇದೇ ವೇಳೆ ಶಾಸಕಿ ಅನಿತಾ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಇನ್ನು ನಿನ್ನೆ ಸಾ.ರಾ ಮಹೇಶ್- ಬಿಜೆಪಿ ನಾಯಕರ ಭೇಟಿ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಅನಿತಾ ಕುಮಾರಸ್ವಾಮಿ, ಸಾ.ರಾ ಮಹೇಶ್ ಈ ಹಿಂದೆ ಬಿಜೆಪಿಯಲ್ಲಿದ್ದವರು. ಹೀಗಾಗಿ ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಅಂತ ಹೇಳಿದ್ರು.

ವಿಪ್ ಉಲ್ಲಂಘಿಸೋ ಶಾಸಕರ ಗತಿಯೇನಾಗುತ್ತೆ ಗೊತ್ತಾ..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=pTVe2bqEH5s
- Advertisement -

Latest Posts

Don't Miss