Hubballi political News: ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಶಾಸಕ ಅರವಿಂದ್ ಬೆಲ್ಲದ, ಕಾಂಗ್ರೆಸ್ ಒಳಜಗಳದ ಆರೋಪದ ಬಗ್ಗೆ ಮಾತನಾಡಿದ್ದು, ಸಿದ್ದರಾಮಯ್ಯ ಸಿಎಂ ಸ್ಥಾನ ಉಳಿಸಿಕೊಳ್ಳುವ ಕಸರತ್ತು ಮಾಡುತ್ತಿದ್ದಾರೆಂದು ಹೇಳಿದರು.
ಕಾಂಗ್ರೆಸ್ ನಲ್ಲಿ ಮೊದಲ ತಿಂಗಳಿಂದಲ್ಲೆ ಗದ್ದಲ ಆರಂಭವಾಗಿದೆ. ಇದು ಹನಿಮೂನ್ ಸಮಯ. ಆದ್ರೆ ಒಂದೇ ತಿಂಗಳಲ್ಲಿ ಅಸಮಾಧಾನ ಶುರುವಾಗಿದೆ. ನಮ್ಮ ಪ್ರಕಾರ ಸಿದ್ದರಾಮಯ್ಯ ಎರಡುವರೆ ವರ್ಷ,ಡಿಕೆ ಶಿವಕುಮಾರ್ ಎರಡುವರೆ ವರ್ಷ ಅನ್ನೋ ಮಾಹಿತಿ ಇತ್ತು. ಆದ್ರೆ ಸಿದ್ದರಾಮಯ್ಯ ಇವಾಗಲೇ ನಾಲ್ಕು ಜನರನ್ನು ರೆಡಿ ಮಾಡಿದ್ದಾರೆ. ಎರಡು ವರ್ಷ ಆದ ಬಳಿಕ ನಾಲ್ಕು ಜನರ ನಡುವೆ ಜಗಳ ಹಚ್ಚಿ ಅವರೇ ಮುಂದುವರಿಬೇಕು ಅಂದುಕೊಂಡಿದ್ದಾರೆ.. ಆದ್ರೆ ಅದು ಆಗಲ್ಲ ಎಂದು ಅರವಿಂದ್ ಬೆಲ್ಲದ ಕಾಂಗ್ರೆಸ್ ಬಗ್ಗೆ ಮಾತನಾಡಿದ್ದಾರೆ.
ಪಕ್ಷಕ್ಕೆ ಬಹಳ ಜನ ಕೆಲಸ ಮಾಡಿರ್ತಾರೆ ಎನ್ನುವ ಮೂಲಕ, ಡಿಕೆಶಿಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದ ಬೆಲ್ಲದ, ನಾವು ಅವರ ಬಗ್ಗೆ ಮಾತಾಡೋ ಅವಶ್ಯಕತೆ ಇಲ್ಲ. ಯಾಕಂದ್ರೆ ಅದು ತನ್ನಿಂದ ತಾನೇ ಆಗತ್ತೆ. ನಾವು ವಿರೋಧ ಪಕ್ಷದಲ್ಲಿದ್ದೇವೆ ಎಂದಿದ್ದಾರೆ.
ನಾವು ಸರ್ಕಾರ ತಗೆಯೋ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕಾಂಗ್ರೆಸ್‌ನವರೇ ಹೊಡದಾಡತಿದಾರೆ. ಸರ್ಕಾರ ಏನು ಕೆಲಸ ಮಾಡಬೇಕು ಅದನ್ನು ಮಾಡಿಲ್ಲ. ಹುಲಿ ಉಗುರು ಎಂದು ಗದ್ದಲ ಎಬ್ಬಸಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ನವರು ಹೊಡೆದಾಡತೀದಾರೆ. ಅವರ ಪಕ್ಷದಲ್ಲಿ ಏನಾದರೂ ಆದ್ರೆ ಅದು ಅವರ ಹಣೆಬರಹ ಎಂದು ಹೇಳಿದ್ದಾರೆ.
ಇನ್ನು ಪರೀಕ್ಷಾ ಅಕ್ರಮ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬೆಲ್ಲದ, ಇದಕ್ಕೆ ಕಾಂಗ್ರೆಸ್ ಉತ್ತರ ಕೊಡಬೇಕು. ಬ್ಲೂಟೂಥ್ ಉಪಯೋಗ ಮಾಡ್ರಾರೆ ಅನ್ನೋದೆ ಗೊತ್ತಿರಲಿಲ್ಲ. ನಮ್ಮ ಸರ್ಕಾರ ಅಂತಹದ್ದನ್ನು ಹೊರಗೆ ತಂದಿತು. ಅವರ ಧೈರ್ಯ ನೋಡಿ ಜೈಲಿನಿಂದ ಹೊರಗೆ ಬಂದು ಅದನ್ನೆ ಮಾಡ್ತಾರೆ. ಇದು ಕೇವಲ ಪಾಟೀಲ್ ಇಬ್ಬರೇ ಅಲ್ಲಟೀಮ್ ಇರತ್ತೆ. ಅಧಿಕಾರಿಗಳು ಇರ್ತಾರೆ, ಹೊರಗಿನವರು ಇರ್ತಾರೆ. ಅಂತವರನ್ನು ಒಳಗೆ ಹಾಕಬೇಕು. ರಾಜಕೀಯ ನಾಯಕರು ಅಂತವರನ್ನು ದೂರ ಇಡಬೇಕು ಎಂದು ಬೆಲ್ಲದ್ ಹೇಳಿದ್ದಾರೆ.
ಬಿಜೆಪಿ ನಾಯಕರಿಗ ಹೈಕಮಾಂಡ್ ಬುಲಾವ್ ನೀಡಿರುವ ವಿಚಾರದ ಬಗ್ಗೆ ಮಾತನಾಡಿದ ಬೆಲ್ಲದ, ಇದು ಸಹಜ. ಅವರೆಲ್ಲ ಹಿರಿಯ ನಾಯಕರ ಏನೋ ಮಾಹಿತಿಗಾಗಿ ಅವರನ್ನು ಕರೆದಿರಬೇಕು. ಅವರೊಂದಿಗೆ ಚರ್ಚೆಗೆ ಕರೆದಿರಬೇಕು. ಇದು ರೆಗ್ಯೂಲರ್ ಪ್ರೋಸೆಸ್ ಎಂದು ಹೇಳಿದ್ದಾರೆ.
‘ಆಯ್ತಪ್ಪಾ, ನಮ್ಮ ಸರ್ಕಾರ ಬೀಳಿಸ್ಕೊಳ್ಳಿ. ಸರ್ಕಾರ ಬೀಳುತ್ತೆ ಎಂಬ ಮಾತು ಕೇಳಿ ನಮಗೂ ಸಾಕಾಗಿದೆ’
ಬಿಜೆಪಿ ಸಂಸದರು ಕೇಂದ್ರದಿಂದ ಬರಪರಿಹಾರ ಕೊಡಿಸಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ