Wednesday, August 20, 2025

Latest Posts

‘ಒಂದು ಕಡೆ ಹೊರೆ, ಇನ್ನೊಂದು ಕಡೆ ಬರೆ ಕೊಟ್ಟು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳಬಾರದು’

- Advertisement -

Hassan News: ಹಾಸನ: ಹಾಸನದಲ್ಲಿ ಮಾತನಾಡಿದ ಶಾಸಕ , ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ , ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟಬಹುಮತ ಬಂದಿದೆ ಬಿಜೆಪಿಗೆ ಹಿನ್ನಡೆ ಆಗಿದೆ. ಬಿಜೆಪಿಗೆ ಇದೇನು ಹೊಸದಲ್ಲ, ಮತದಾರರ ತೀರ್ಪನ್ನು ಹಿಂದೆನೂ ಸ್ವಾಗತ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಅಲ್ಲದೇ, ಜವಾಬ್ದಾರಿಯುತ ಪ್ರತಿಪಕ್ಷವಾಗಿ ನಮ್ಮ ಕಾರ್ಯ, ಕೆಲಸವನ್ನ ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ನಿರ್ವಹಿಸುತ್ತೇವೆ. ಮುಂದಿನ ದಿನಗಳಲ್ಲಿ ಜನರ ಜೊತೆ ಇದ್ದು, ಹೋರಾಟಗಳನ್ನ ಮಾಡುವುದರ ಮೂಲಕ, ಆಡಳಿತ ಪಕ್ಷ ಎಡವಿರುವ ಸಂದರ್ಭದಲ್ಲಿ ಕಿವಿಯನ್ನು ಹಿಂಡುವ ಮೂಲಕ, ಅದನ್ನ ಸರಿ ದಾರಿಗೆ ತೆಗೆದುಕೊಂಡು ಹೋಗುವಂತಹದ್ದು ಜವಾಬ್ದಾರಿಯುತ ಪ್ರತಿಪಕ್ಷದ ಕರ್ತವ್ಯವಾಗಿದೆ. ಅದನ್ನ ನಾವು ಯಶಸ್ವಿಯಾಗಿ ನಿಭಾಯಿಸುತ್ತೇವೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣವಾಗಿ ಬಹುಮತ ಸಿಕ್ಕಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಚುನಾವಣೆ ಸಂದರ್ಭದಲ್ಲಿ ಕೊಟ್ಟಿದ್ದಂತಹ ಭರವಸೆಗಳು ಒಂದೊಂದಾಗಿ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುತ್ತಾ ಇದ್ದಾರೆ. ಈ ಮೂಲಕ ಸರ್ಕಾರಕ್ಕೆ ಆಗ್ರಹವನ್ನ ಮಾಡ್ತಿದ್ದೇನೆ. ತಾವು ಕೊಟ್ಟಿರುವ ಭರವಸೆಯನ್ನು ಈಡೇರಿಸುವ ಭರದಲ್ಲಿ ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ನಡೆದುಕೊಳ್ಳಲಿ. ಈಗಾಗಲೇ ಕೇಳಿ ಬರ್ತಾ ಇದೆ, ಪೆಟ್ರೋಲ್ ಡಿಸೇಲ್ ಮೇಲಿನ ಸೆಸ್ ಜಾಸ್ತಿ ಮಾಡುವಂತಹದ್ದು, ಸ್ಟ್ಯಾಂಪ್ ಡ್ಯೂಟಿ ಜಾಸ್ತಿ ಮಾಡುವಂತಹ ಮಾತು ಕೇಳಿಬರ್ತಿದೆ. ಏನೇ ಮಾಡಿದ್ರೂ ರಾಜ್ಯದ ಜನರಿಗೆ ಹೊರೆಯಾಗಬಾರದು. ಒಂದು ಕಡೆ ಹೊರೆ, ಇನ್ನೊಂದು ಕಡೆ ಬರೆ ಕೊಟ್ಟು. ತಾವು ಕೊಟ್ಟಿರೋ ಭರವಸೆಯನ್ನು ಈಡೇರಿಸ್ತಾ ಇದ್ದೇವೆ ಅಂತಾ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವಂತಹ ಕೆಲಸ ಆಗಬಾರದು ಎಂದು ವಿಜಯೇಂದ್ರ ಹೇಳಿದ್ದಾರೆ.

ಇತ್ತೀಚೆಗೆ ಕೆಎಂಎಫ್ ಹಾಲಿನ‌ದರವನ್ನು ಜಾಸ್ತಿ ಮಾಡ್ತೀವಿ ಅಂತಾ ಹೇಳಿದ್ದಾಗ, ಅದನ್ನ ರಾಜ್ಯ ಸರ್ಕಾರ ತತ್ ಕ್ಷಣ ತಡೆಯುವಂತಹ ಕೆಲಸ ಮಾಡಿದ್ರು. ಈಗ ಎಲೆಕ್ಟ್ರಿಸಿಟಿ ಬಿಲ್ ಜಾಸ್ತಿ ಮಾಡಿರೋ ವಿಚಾರ ರಾಜ್ಯಾದ್ಯಂತ ಬೊಬ್ಬೆ ಹೊಡೆಯುತ್ತಿರೋದನ್ನ ನೋಡ್ತಾ ಇದ್ದೇವೆ. ಬಿಜೆಪಿ‌ ಮೇಲೆ ಗೂಬೆ ಕೂರಿಸುವಂತಹ ಕೆಲಸವನ್ನ ರಾಜ್ಯ ಸರ್ಕಾರ ಮಾಡ್ತಾ ಇದೆ. ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮಂತ್ರಿಗಳ‌ ಹೇಳಿಕೆಗಳನ್ನ ನೋಡ್ತಾ ಇದ್ದೀರಿ. ಹಿಂದಿನ‌‌ ಸರ್ಕಾರಗಳು‌ ಮಾಡಿರುವ ಕೆಲವು ಕಾಮಗಾರಿಗಳನ್ನ ತಡೆಹಿಡಿಯುತ್ತೇವೆ. ಕೆಲವು ಸಂಘಸಂಸ್ಥೆಗಳಿಗೆ ಭೂಮಿ ಹಂಚಿಕೆಯಾಗಿರೋದನ್ನ ಪುನರ್ ಪರಿಶೀಲಿಸುತ್ತೇವೆ ಅನ್ನೋ ಮಾತನ್ನೂ ಕೂಡಾ ಮಂತ್ರಿಗಳು ಹೇಳಿಕೆಗಳನ್ನ ಕೊಡ್ತಾ ಇದ್ದಾರೆ.

ಇಂತಹ ಸಂದರ್ಭದಲ್ಲಿ‌ ಕೆಎಆರ್ ಸಿ ಆದೇಶದ ಮೂಲಕ ವಿದ್ಯುತ್ ಬಿಲ್ಲನ್ನ ಜಾಸ್ತಿ ಮಾಡ್ತಿರೋದನ್ನೂ ಕೂಡಾ ಪುನರ್ ಪರಿಶೀಲನೆ ಮಾಡಬೇಕು. ಇದಕ್ಕೆ ತಾಂತ್ರಿಕ ಕಾರಣಗಳನ್ನ ಕೊಟ್ಟು ಬಿಜೆಪಿ ಮೇಲೆ ಗೂಬೆ ಕೂರಿಸುವಂತಹ ಕೆಲಸಕ್ಕಿಂತ ಹೆಚ್ವಾಗಿ ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಕ್ರಮಕೈಗೊಳ್ಳಬೇಕೆಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಗಾಳಿಸುದ್ದಿ ಎಂದ ಹೆಚ್.ಡಿ.ಕುಮಾರಸ್ವಾಮಿ

‘ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ, ಮುಂದಿನ ದಿನಗಳಲ್ಲಿ ಉಳಿದ ಗ್ಯಾರಂಟಿ ಜಾರಿ ಮಾಡಲಿದ್ದೇವೆ’

‘ಬಿಬಿಎಂಪಿಯ 675 ಕೋಟಿ ರೂ.ಗಳ ಎಲ್ ಒಸಿ ಬಿಡುಗಡೆ ಮಾಡಿಲ್ಲ, ಏಕೆ?’

- Advertisement -

Latest Posts

Don't Miss