Gadaga News: ಗದಗ: ಗದಗ ನಗರದಲ್ಲಿಂದು ಮಾಜಿ ಸಚಿವ, ಶಾಸಕ ಸಿ.ಸಿ.ಪಾಟೀಲ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಸ್ ಫೀ, 200 ಯೂನಿಟ್ ಫ್ರೀ, ಮಹಿಳೆಯರಿಗೆ 2 ಸಾವಿರ ಹಣ. ಮನೆಯಿಂದ ಹೊರಗಡೆ ಹೋಗದೆ, ಎಲ್ಲಿಯೂ ದುಡಿಯಲು ಹೋಗದೆ, ಗಂಡ ಹೆಂಡತಿ ಮಕ್ಕಳು ಮನೆಯಲ್ಲಿ ಅರಾಮ ತಿನ್ನಬಹುದು. ಅವರ ಘೋಷಣೆ ನಂಬಿ ಜನ್ರು ಕಾಂಗ್ರೆಸ್ಗೆ ಅಧಿಕಾರ ತಂದು ಕೊಟ್ರು. ಬಸ್ ಪ್ರಯಾಣ ಹೊರತುಪಡಿಸಿದ್ರೆ, ಉಳಿದ ಯೋಜನೆ ಜಾರಿ ಮಾಡಲು ಸಾಧ್ಯವಾಗ್ತಾಯಿಲ್ಲಾ. ಇವರಿಗೆ 2 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. 2 ಕೋಟಿ ಪ್ರಯಾಣದ ವೆಚ್ಚವನ್ನು ಸರ್ಕಾರ ಭರಿಸಬೇಕು. ನಾಳೆ ಚಾಲಕ ಹಾಗೂ ಕಂಡಕ್ಟರ್ ಬಸ್ ಬಿಟ್ಟು ಹೋಗಬೇಕಾಗುತ್ತೆ. ಕರ್ನಾಟಕ ಸಾರಿಗೆ ಸಂಸ್ಥೆ ಕೂಡಾ ಒಳಯಬೇಕಾಗಿದೆ. ಶಾಲಾ ಮಕ್ಕಳಿಗೆ, ತೊಂದರೆಯಾಗುತ್ತಿದೆ, ಹೆಚ್ಚಿನ ಬಸ್ ವ್ಯವಸ್ಥೆ ಇಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯನವರು ಹತ್ತು ಕೆಜಿ ಅಕ್ಕಿ ಕೋಡುತ್ತೇನೆ ಅಂತಾ ಹೇಳಿದ್ರು. ವಿಧಾನಸೌಧದ ಮೂರನೇಯ ಮಹಡಿ ಕುರ್ಚಿ ಮೇಲಿನ ಕಣ್ಣಿನಿಂದ ಏನೇನು ಬೇಕು ಅದನ್ನು ಘೋಷಣೆ ಮಾಡಿದ್ರು. ಈವಾಗ ವಿನಾಕಾರಣ ಪ್ರಧಾನಿ ನರೇಂದ್ರ ಮೋದಿ ಕಡೆ ಬೊಟ್ಟು ಮಾಡ್ತಾಯಿದ್ದಾರೆ. ಘೋಷಣೆ ಮಾಡುವ ಕೇಂದ್ರಕ್ಕೆ ಅಕ್ಕಿ ಬೇಕು ಅಂತಾ ಕೇಳಿದ್ರಾ? ಇವಾಗ ನೀಡ್ತಾಯಿರೋ ಅಕ್ಕಿ ನರೇಂದ್ರ ಮೋದಿ ಸರ್ಕಾರದ್ದು. ಇವಾಗ ಹೇಳ್ತೀರಿ ಐದು ಕೆಜಿ ಅಕ್ಕಿ, ಒಬ್ಬರಿಗೆ 175 ರೂಪಾಯಿ ಅಂತಾ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಿಎಂ ಸಿದ್ದರಾಮಯ್ಯಮವರು ಬದ್ದತೆ ಇರೋ ನಾಯಕರು. ಆ 5 ಕೆಜಿ ಅಕ್ಕಿಯನ್ನು ನರೇಂದ್ರ ಮೋದಿ ಸರ್ಕಾರ ನೀಡ್ತಾಯಿದೆ. ನೀವೂ ಇವಾಗ ನೀಡಲು ಮುಂದಾಗಿರೋ 175 ರ ಜೊತೆಗೆ ಇನ್ನೂ 175 ರೂಪಾಯಿ ಹಣ ಹಾಕ್ಬೇಕು. ಮಾರುಕಟ್ಟೆ ಬೆಲೆಯಲ್ಲಿ ಅಕ್ಕಿ ಹಣವನ್ನು ಹಾಕ್ಬೇಕು. ನೀವು ಕೋಡ್ತಾಯಿರೋ ಹಣದಿಂದ ಮಾರುಕಟ್ಟೆಯಲ್ಲಿ 3 ಕೆ ಜಿ ಅಕ್ಕಿ ಸಿಗೋದಿಲ್ಲ.ಸರ್ಕಾರಕ್ಕೆ ಹೊರೆ ಆಗುತ್ತೇ ಅಂತಾ ಸಚಿವ ಎಚ್ ಕೆ ಪಾಟೀಲ್ ಹೇಳ್ತಾರೆ. ಘೋಷಣೆ ಮಾಡುವಾಗ ಗೊತಾಗಲ್ಲಿಲ್ವಾ, ನೀವು ದಾನ ಕೋಡ್ತೀರಾ, ಧರ್ಮಕ್ಕೆ ಕೊಡತೀರಾ.. ಘೋಷಣೆ ಮಾಡಿ ಆಯ್ಕೆಯಾಗಿದ್ದಿರಿ, ಈವಾಗ ಕೋಡ್ಬೇಕು. ಇನ್ನೂ ಹೆಚ್ಚುವರಿ ಐದು ಕೆಜಿ ಅಕ್ಕಿ ಹಣವನ್ನು ನೀಡ್ಬೇಕು. ಐದು ಕೆಜಿ ನಮ್ಮದು, ನಿಮ್ಮ ಲೆಕ್ಕದ ಪ್ರಕಾರ 10 ಕೆಜಿ ಬದಲಾಗಿ 3 ಕೆಜಿ ಅಕ್ಕಿ ಕೋಡ್ತಾಯಿದ್ದಿರಿ ಎಂದು ಶಾಸಕ ಸಿ.ಸಿ.ಪಾಟೀಲ್ ಆರೋಪಿಸಿದ್ದಾರೆ.
‘ಪ್ರವಾಸಕ್ಕೆ ಹೋಗಿರೋ ನನ್ನ ಹೆಂಡ್ತಿ ಇನ್ನೂ ಬಂದಿಲ್ಲಾ, ನಾನ್ ಸಾಯ್ಬೇಕು’
ಹುಬ್ಬಳ್ಳಿ ಧಾರವಾಡ ನೂತನ ಕಮಿಷನರ್ ಆಗಿ ಸಂತೋಷ್ ಬಾಬು ಪ್ರಭಾರಿಯಾಗಿ ನೇಮಕ
ಹಾಸನದಲ್ಲಿ ಬೈಕ್ ವ್ಹೀಲಿಂಗ್ ಪುಂಡರ ಹಾವಳಿ: ಇಬ್ಬರು ಯುವತಿಯರಿಗೆ ಗಂಭೀರ ಗಾಯ