Sunday, May 26, 2024

Latest Posts

ಸರದಿ ಸಾಲಿನಲ್ಲಿ ನಿಂತು ಕುಟುಂಬ ಸಮೇತರಾಗಿ ಶಾಸಕರಾದ ಸಿ.ಎನ್.ಬಾಲಕೃಷ್ಣರವರು ಮತ ಚಲಾಯಿಸಿದರು

- Advertisement -

Political News: ಸ್ವಗ್ರಾಮ ಎ ಚೋಳೇನಹಳ್ಳಿ ಗ್ರಾಮಕ್ಕೆ ತೆರಳಿ ಪತ್ನಿ ಹಾಗೂ ಪುತ್ರಿಯೊಟ್ಟಿಗೆ ಸರದಿ ಸಾಲಿನಲ್ಲಿ ನಿಂತು, ಶಾಸಕರಾದ ಬಾಲಕೃಷ್ಣ ಅವರು ಮತ ಚಲಾಯಿಸಿದರು.

ಬಳಿಕ ಮಾತನಾಡಿದ ಅವರು ಮಾನ್ಯ ಪ್ರಧಾನಿ ನರೇಂದ್ರ ಮೋದಿ ಹಾಗೂ ದೇವೇಗೌಡರವರ ನೇತೃತ್ವದಲ್ಲಿ ಎನ್ ಡಿ ಎ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣರವರು ಸ್ಪರ್ಧಿಸುತ್ತಿದ್ದು, ಶ್ರವಣಬೆಳಗೊಳ ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲಿಯೂ ಯಶಸ್ವಿಯಾಗಿ ಮತ ಚಲಾವಣೆಗೊಳ್ಳುತ್ತಿದ್ದು, ಅಭೂತ ಪೂರ್ವ ಬೆಂಬಲ ಸಿಗುತ್ತಿದೆ. ಪ್ರಜ್ವಲ್ ರೇವಣ್ಣರವರ ಗೆಲುವು ನಿಶ್ಚಿತವಾಗಿದೆ. ನಮ್ಮ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿ ಕೆಲಸಗಳು ನಮಗೆ ವರದಾನವಾಗಿದ್ದು, ಸನ್ಮಾನ್ಯ ನರೇಂದ್ರ ಮೋದಿಯವರ ಜನಪ್ರಿಯತೆ ಹಾಗೂ ಪ್ರಜ್ವಲ್ ರೇವಣ್ಣರವರು ಸಂಸದರಾಗಿ ಜಿಲ್ಲೆಗೆ ಕೊಟ್ಟಿರುವ ಅಭಿವೃದ್ದಿ ಯೋಜನೆಗಳು ನಮ್ಮನ್ನು ಕೈ ಹಿಡಿಯಲಿದೆ ಎಂದರು.

ಇನ್ನು ಸಂಜೆಯ ತನಕ ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ದೇಶದ ಅಭಿವೃದ್ಧಿಗಾಗಿ ತಾವೆಲ್ಲರೂ ಕೂಡ ಕಾರಣೀಭೂತರಾಗಬೇಕು ಎಂದರು.

ನನ್ನ ಮಗಳ ಸಾವಿಗೆ ಫಯಾಝ್ ಸಾವು ನ್ಯಾಯವಾಗಬೇಕು: ನಿರಂಜನಯ್ಯ ಆಗ್ರಹ..!

120 ದಿನದಲ್ಲಿ ನ್ಯಾಯ ಕೊಡಸ್ತಿವಿ, ನಿರಂಜನಯ್ಯ ಕುಟುಂಬದ ಜೊತೆಗಿದ್ದೇವೆ: ಸಿಎಂ ಸಿದ್ಧರಾಮಯ್ಯ

ನೇಹಾ ಮನೆಗೆ ಸಿಎಂ ಸಿದ್ಧರಾಮಯ್ಯ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

- Advertisement -

Latest Posts

Don't Miss