Hubballi Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಶಾಸಕ ಕೋನರೆಡ್ಡಿ, ಸಿಎಂ ಸ್ಥಾನದ ವಿಚಾರದ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದೀಗ ಸಿದ್ದರಾಮಯ್ಯ ಸಿಎಂ ಇದಾರೆ, ಅವರೇ ಸಿಎಂ. ಸಿದ್ದರಾಮಯ್ಯ ಮುಖ್ಯಮಂತ್ರಿ ಅಂತಾ ನಾವು ಹೇಳಿದ್ದೇವೆ. ಅದು ಪ್ರಶ್ನೆನೇ ಅಲ್ಲ. ನೀವೇಕೆ ಹಿಂದು ಮುಂದು ಮಾಡ್ತೀರಿ ಎಂದು ಕೋನರೆಡ್ಡಿ ಮರುಪ್ರಶ್ನಿಸಿದ್ದಾರೆ.
ಇದರ ಬಗ್ಗೆ ಬಹಳ ಚರ್ಚೆ ಬೇಡಾ. ಐದು ವರ್ಷ ಸರ್ಕಾರ ಇರತ್ತೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಕುದುರೆ ತರಹ ಕೆಲಸ ಮಾಡ್ತಿದಾರೆ. ಉದ್ಯೋಗ ಇಲ್ಲದವರು ಯಾರೋ ಮಾತಾಡ್ತಾರೆ. ಇದು ಬಿಜೆಪಿಯವರ ಹಗಲು ಕನಸು ಎಂದು ಕೋನರೆಡ್ಡಿ ಹೇಳಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್ ತೀರ್ಮಾನ. ಆಪರೇಶನ್ ಕಮಲ ಬಿಜೆಪಿ ಹುಟ್ಟು ಗುಣ. ಕೆಲವರ ಮಾತಾಡ್ತಾರೆ. ಏನೂ ಇಲ್ಲದ ಮನೆಗೆ ಯಾರಾದರೂ ಹೋಗ್ತಾರಾ..? ಪರೋಕ್ಷವಾಗಿ ಬಿಜೆಪಿ ಖಾಲಿಮನೆ ಎಂದು ಕೋನರೆಡ್ಡಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯನವರ ಸರ್ಕಾರದ ಆರ್ಥಿಕ ಸಂಕಷ್ಟದ ಪರಿಸ್ಥಿತಿ ಬಿಚ್ಚಿಟ್ಟ ನವಲಗುಂದ ಶಾಸಕ ಎನ್.ಹೆಚ್.ಕೋನರೆಡ್ಡಿ, ಐದು ಗ್ಯಾರಂಟಿಗಳ ಯೋಜನೆಯಿಂದ ನಮ್ಮ ಸರ್ಕಾರಕ್ಕೆ ಆರ್ಥಿಕ ತೊಂದ್ರೆಯಾಗಿದೆ ಎಂದಿದ್ದಾರೆ.
ಗ್ಯಾರಂಟಿಗಳ ಯೋಜನೆಯಿಂದ ಶಾಸಕರಿಗೆ ಅನುದಾನದ ಕೊರತೆ ಆಗಿದೆ. ಗ್ಯಾರಂಟಿಗಳಿಂದ ಶಾಸಕರಿಗೆ ಅನುದಾನ ಕೊಡಲು ಆಗುತ್ತಿಲ್ಲ. ಈ ನಡುವೆಯೂ ಲೋಕೋಪಯೋಗಿ ಇಲಾಖೆಗೆ 25 ಕೋಟಿ ರೂಪಾಯಿ ಕೊಡಲು ಸಿದ್ದರಾಮಯ್ಯನವರು ತೀರ್ಮಾನ ತೆಗೆದುಕೊಂಡಿದ್ದಾರೆ. ಸಿದ್ದರಾಮನವರು ಮುಖ್ಯಮಂತ್ರಿ ಇದ್ದಾಗ ಯಾವತ್ತಿಗೂ ಅನುದಾನ ಕೊರತೆ ಆಗಿಲ್ಲ. ಸಮರ್ಥವಾಗಿ ಸಿದ್ದರಾಮಯ್ಯನವರ ಎಲ್ಲವನ್ನೂ ನಿಭಾಯಿಸುತ್ತಾರೆ. ನಾಲ್ಕೈದು ತಿಂಗಳಲ್ಲಿ ಎಲ್ಲವನ್ನೂ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ನಾವು ಮೊದಲು ಕೆಲಸ ಮಾಡಿ, ನಂತ್ರ ಮಾತನಾಡಿತ್ತೇವೆ ಎಂದು ಕೋನರೆಡ್ಡಿ ಹೇಳಿದ್ದಾರೆ.
ಶಿವಣ್ಣನ ಆರೋಗ್ಯದಲ್ಲಿ ಚೇತರಿಕೆ: ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ನಟ ಶಿವರಾಜ್‌ಕುಮಾರ್
‘ದೊಡ್ಡ ಮಟ್ಟದಲ್ಲಿ ಅನಾಹುತವಾದರೆ ನೇರವಾಗಿ ರೂರಲ್ ಪೊಲೀಸ್ ಠಾಣೆಯವರೇ ಕಾರಣರಾಗುತ್ತಾರೆ’
ವೇದಿಕೆ ಮೇಲೆ ಡಿಕೆಶಿ ಹೆಸರು ಹೇಳೋದನ್ನೇ ಮರೆತ ಸಿದ್ದು: ಸಿಎಂ-ಡಿಸಿಎಂ ದೂರ ದೂರ!