ರಾಜಕೀಯ: ಆರ್ ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರು ಗಣಿಗಾರಿಕೆ ನಡೆಸುತಿದ್ದು ಅನುಮತಿ ಪಡೆಯದೆ ಜಿಲೆಟಿನ್ ಬಳಸಿ ಸ್ಫೋಟಕ ಗಳನ್ನು ಸಿಡಿಸಿದ್ದಕ್ಕಾಗಿ ಅವರ ವಿರುದ್ದ ದೂರು ದಾಖಲಿಸಿ ಎಫ್ ಐ ಆರ್ ದಾಖಲಿಸಿರುವ ಘಟನೆ ನಡೆದಿದೆ.
ಪೋಲಿಸ್ ಮೂಲಗಳ ಪ್ರಕಾರ ಆರ್ ಆರ್ ನಗರ ಶಾಸಕ ಮುನಿರತ್ನ ನಾಯ್ಡು ಮತ್ತವರ ಸಂಗಡಿರರು ಬೆಂಗಳೂರು ಉತ್ತರ ತಾಲ್ಲೂಕಿನ ಹುಣಸನಮಾರನಹಳ್ಳಿ ಬಳಿ ತಾವು ಖರೀದಿಸಿರುವ ಜಮೀನಿನಲ್ಲಿ ಗಣಿಗಾರಿಕೆ ನಡೆಸುತಿದ್ದು ಸರ್ಕಾರದ ಅನುಮತಿ ಇಲ್ಲದ ಜಿಲೆಟಿನ ಬಳಸಿ ಸ್ಪೋಟಿಸಿದ್ದಾರೆ. ಸ್ಥಳಿಯರು ಸ್ಪೊಕಟಗಳನ್ನು ಬಳೆಸಿದ್ದರ ವಿರುದ್ದ ಪ್ರತಿಭಟನೆಯನ್ನು ಮಾಡಿದ್ದಾರೆ ಪ್ರತಿಭಟನೆ ನಂತರ ಯಲಹಂಕ ತಹಶಿಲ್ದಾರ್ ಅನೀಲ್ ಅರಳೋಕರ್ ಅವರು ಚಿಕ್ಕ ಜಾಲ ಆರಕ್ಷಕ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ತಹಶಿಲ್ದಾರರ ದೂರಿನನ್ವಯ ಚಿಕ್ಕಜಾಲ ಪೋಲಿಸರು ಶಾಸಕರು ಮತ್ತು ಅವರ ಸಂಗಡಿಗರ ವಿರುದ್ದ ಎಫ್ ಐ ಆರ್ ದಾಖಲಿಸಿದ್ದಾರೆ.