Kolar News: ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುತ್ತಿನಿ ಅಂತ ಒಬ್ಬ ಮುಖ್ಯ ಮಂತ್ರಿ ಅಭ್ಯರ್ಥಿ ಯಾದವರು ಬಂದು ಆಶ್ವಾಸನೆಯನ್ನು ಕೊಟ್ಟಿದ್ದರು. ಅದರಂತೆ ನಡೆದುಕೊಳ್ಳಬೇಕು. ಮಾತಿಗೆ ತಪ್ಪುವಂತವರು ಈ ಕಾಂಗ್ರೆಸ್ ನವರು. ಈ ದೇಶದ ಭ್ರಷ್ಟಾಚಾರದ ಪಿತಾಮಹ ಯಾರು ಎಂದರೆ ಕಾಂಗ್ರೆಸ್ ಪಕ್ಷದವರು ಎಂದು ಸಂಸದ ಎಸ್ ಮುನಿಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಮುನಿಸ್ವಾಮಿ, ಐದು ಗ್ಯಾರಂಟಿಗಳನ್ನು ಕೊಟ್ಟು ಜನರನ್ನು ಯಾವ ರೀತಿ ಯಾಮಾರಿಸಿದ್ದಾರೆ. ಅಕ್ಕಿ ಕೊಡುವುದಕ್ಕೆ ಆಗಿಲ್ಲ ಅಂದ ಮೇಲೆ ಜನರನ್ನು ಯಾಕೆ ದಿಕ್ಕು ತಪ್ಪಿಸಬೇಕು..? ಕೇಂದ್ರದಿಂದ ಅಕ್ಕಿಕೊಡತ್ತಿಲ್ಲ ಅಂತ ಹೇಳುತ್ತಿದ್ದಾರೆ. ಆದರೆ ಈ ದೇಶದಲ್ಲಿ ೫ ಕೆಜಿ ಅಕ್ಕಿಯನ್ನು ಕೊಡುತ್ತಿರುವುದು ಕೇಂದ್ರ ಸರ್ಕಾರ.
ಜನರನ್ನು ಯಾಮಾರಿಸಿ ವೋಟು ಹಾಕಿಸಿಕೊಂಡವರು ಕರ್ನಾಟಕದ ಜನತೆಗೆ ಮಾಡಿರುವ ಮಹಾ ಅಪರಾಧ, ಘೋರ ಅನ್ಯಾಯವನ್ನು ಮಾಡಿದ್ದಿರಿ. ಅಕ್ಕಿ ಕೊಡುವುದಕ್ಕೆ ಯೋಗ್ಯತೆ ಇಲ್ಲವಾದರೆ ಅಂತಹ ಭರವಸೆಗಳನ್ನು ಯಾಕೆ ಕೊಟ್ಟಿದ್ದಿರಿ..? ಎಂದು ಪ್ರಶ್ನಿಸಿದರು. ಎಲ್ಲಾ ರಾಜ್ಯಗಳಿಗೆ ಏನು ಕೊಡುತ್ತಿದ್ದಿರಿ ನಿಮಗೆ ಅದನ್ನೆ ಕೊಡುತ್ತಿದ್ದಾರೆ. ನರೇಂದ್ರ ಮೋದಿಯವರನ್ನು ಕೇಳಿಕೊಂಡು ಭರವಸೆಗಳನ್ನು ಕೊಟ್ಟಿಲ್ಲ. ಏನು ಹತ್ತು ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತಿನಿ ಅಂತ ಹೇಳಿದ್ದಿರಿ. ಹಾಗಾದರೆ ೧೦ ಕೆಜಿ ಅಕ್ಕಿಗೆ ೩೬೦ ರೂಪಾಯಿಗಳಾಗುತ್ತದೆ ಪ್ರತಿಯೊಂದು ಕುಟುಂಬದಲ್ಲಿ ಇರುವ ಪ್ರತಿಯೊಬ್ಬ ಸದಸ್ಯರ ಅಕೌಂಟಗಳಿಗೆ ನೇರವಾಗಿ ಹಣವನ್ನು ಹಾಕಿ ಎಂದರು.
ಹು-ಧಾ ಪಾಲಿಕೆ ಮೇಯರ್ ಚುನಾವಣೆ : ದಾಂಡೇಲಿ ರೆಸಾರ್ಟ್ನತ್ತ ಬಿಜೆಪಿ ಪಾಲಿಕೆ ಸದಸ್ಯರು
ಸಿಇಟಿ ಇಂಜಿನಿಯರಿಂಗ್ನಲ್ಲಿ ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದ ಸಮೃದ್ದ ಶೆಟ್ಟಿ : 1 ಲಕ್ಷ ರೂ. ಚೆಕ್ ನೀಡಿದ ಸಂಸ್ಥೆ..