ಕೋಲಾರ: ಮಾಲೂರಿನಲ್ಲಿ ಎರಡನೇ ಬಾರಿ ಕಾಂಗ್ರೆಸ್ ಗೆದ್ದು ಇತಿಹಾಸ ನಿರ್ಮಿಸುತ್ತಿದೆ ಎಂದು ಮಾಲೂರು ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಮತ್ತು ಶಾಸಕ ಕೆ.ವೈ.ನಂಜೇಗೌಡ ಹೇಳಿಕೆ ನೀಡಿದ್ದಾರೆ.
ಈ ವರೆಗೂ ಮಾಲೂರಿನಲ್ಲಿ ಎರಡು ಬಾರಿ ಕಾಂಗ್ರೆಸ್ ಗೆದ್ದಿಲ್ಲ. ಈ ಬಾರಿ ಕಾಂಗ್ರೆಸ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸುತ್ತೆ. ಕಳೆದ ೫ ವರ್ಷದ ನನ್ನ ಕೆಲಸ ಮೆಚ್ಚಿ, ಕಾಂಗ್ರೆಸ್ ನ ಮೊದಲನೆ ಪಟ್ಟಿಯಲ್ಲಿ ಪಕ್ಷದ ಹೈಕಮಾಂಡ್ ನನಗೆ ಟಿಕೆಟ್ ಘೋಷಿಸಿದೆ. 5 ವರ್ಷದಲ್ಲಿ ಕ್ಷೇತ್ರದಲ್ಲಿ ನಾನು ನಂಬಿಕೆ ಉಳಿಸಿಕೊಂಡಿದ್ದೇನೆ. ಮುಂದೆಯೂ ಉಳಿಸಿಕೊಳ್ಳುತ್ತೇನೆ ಎಂದಿದ್ದಾರೆ.
ಅಲ್ಲದೇ, 2018 ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಕಡಿಮೆ ಅವಧಿಯಲ್ಲಿ ಅಧಿಕಾರ ಸಿಕ್ಕಿದೆ. 5 ವರ್ಷ ಯಾರೂ ಮಾಡದ ಕೆಲಸವನ್ನು 1.2 ವರ್ಷದ ಅವಧಿಯಲ್ಲಿ ನಾನು ಮಾಡಿದ್ದೇನೆ. ಶಾಲೆಗಳು, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆಗಳು ಅಭಿವೃದ್ಧಿ ಮಾಡಿದ್ದೇನೆ. ನನ್ನ ಅಭಿವೃದ್ಧಿ ಕೆಲಸಗಳನ್ನ ಇಟ್ಟುಕೊಂಡು ಮನೆ ಮನೆ ಮತ ಕೇಳುವ ಕೆಲಸ ಮಾಡುತ್ತಿದ್ದೇನೆ. ಕಷ್ಟ ಅಂತ ಹೇಳಿಕೊಂಡು ಬಂದವರನ್ನು ಯಾರನ್ನೂ ನಾನು ವಾಪಸ್ ಕಳಿಸಿಲ್ಲ . ಮಾಲೂರಿನಲ್ಲಿ ಒಳ್ಳೆಯ ವಾತಾವರಣ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ . ಜೆಡಿಎಸ್ ಬಿಜೆಪಿ ನನ್ನ ವಿರುದ್ದ ಭಾಷಣಗಳಲ್ಲಿ ಟೀಕೆ ಮಾಡುವುದೇ ಅವರ ಕಾಯಕ ಎಂದು ನಂಜೇಗೌಡ ಹೇಳಿದ್ದಾರೆ.
ರಾಜ್ಯದಲ್ಲಿ 20-25 ಸ್ಥಾನ ಮಾತ್ರ ಜೆಡಿಎಸ್ ಪಕ್ಷ ಪಡೆಯುತ್ತೆ . ಅಧಿಕಾರಕ್ಕಾಗಿ ಸಮಯ ಸಂಧರ್ಭಕ್ಕೆ ತಕ್ಕಂತೆ ಜೆಡಿಎಸ್ ಬದಲಾಗುತ್ತೆ. ನಾನೂ ಸಹ ಕುಮಾರಣ್ಣನ ಅಭಿಮಾನಿ, ಆದ್ರೆ ನಾನು ಕಾಂಗ್ರೆಸ್, ಅವ್ರು ಜೆಡಿಎಸ್. ಜೆಡಿಎಸ್ ಪಕ್ಷದ ಅಭ್ಯರ್ಥಿ ರಾಮೇಗೌಡರು ಲೆಕ್ಕಕ್ಕೇ ಇಲ್ಲ. ನನ್ನನ್ನು ಎಂಎಲ್ಎ ಮಾಡಿದ್ದು ನಾನೇ ಅಂತ ಭಾಷಣ ಮಾಡ್ತಾರೆ. ನಾನಿಲ್ಲದಿದ್ರೆ ಜೈಲಿಗೆ ಹೋಗ್ತಾರೆ, ಆತ್ಮಹತ್ಯೆ ಮಾಡ್ಕೋಬೇಕಿತ್ತು ಅಂತ ಹೇಳ್ತಾರೆ. ನನ್ನನ್ನು ಎಂಎಲ್ ಎ ಮಾಡುವ ಶಕ್ತಿ ಅವರಿಗಿದೆಯಾ? ತಾಲೂಕಿನ ಜನತೆ ನನ್ನ ಮೇಲೆ ಇಟ್ಟಿರುವ ನಂಬಿಕೆಯಿಂದ ನಾನು ಶಾಸಕನಾದೆ. ಜೈಲಿಗೆ ಹೋಗುವಂತಹ ಕೆಲಸವನ್ನೂ ನಾನೇನು ಮಾಡಿಲ್ಲ . ನಾನು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ನನಗಿಲ್ಲ ಎಂದಿದ್ದಾರೆ.
ಅಲ್ಲದೇ, ನೀವು ಕಾಂಗ್ರೆಸ್, ಜೆಡಿಎಸ್, ಬಿಜೆಪಿಗೆ ಹೋದ್ರಿ . ಮೂರು ಪಕ್ಷಗಳಲ್ಲಿ ಇದ್ದರೂ ನೀವು ಏನು ಮಾಡಿದ್ರಿ? ನೀವು ಜಿಲ್ಲಾ ಪಂಚಾಯತ್ ನಲ್ಲಿ ಕಾಂಗ್ರೆಸ್ ನಲ್ಲಿ ಮಾತ್ರ ಗೆದ್ರಿ. ಆದ್ರೆ ನಾನು ಕಾಂಗ್ರೆಸ್ ಪಕ್ಷದಲ್ಲಿ ಗೆದ್ದು ಶಾಸಕನಾಗಿದ್ದೇನೆ. ಮಾಲೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ರಾಮೇಗೌಡರನ್ನು ಯಾರೂ ನಂಬೋದಿಲ್ಲ ಎಂದು, ಕೋಲಾರ ಜಿಲ್ಲೆಯ ಮಾಲೂರಿನ ರಾಜೇನಹಳ್ಳಿ ಗ್ರಾಮದಲ್ಲಿ, ಮನೆ ಮನೆ ಪ್ರಚಾರದ ವೇಳೆ ಜೆಡಿಎಸ್ ಅಭ್ಯರ್ಥಿ ರಾಮೇಗೌಡರ ವಿರುದ್ಧ ಶಾಸಕ ನಂಜೇಗೌಡ ಹರಿಹಾಯ್ದಿದ್ದಾರೆ.
‘ಬಹುಶಃ ಜೆಡಿಎಸ್ ಪಕ್ಷಕ್ಕೆ ಏನಾದ್ರೂ ಆ ಶಾಪ ತಟ್ಟಿದೆಯೆನೋ ಗೊತ್ತಿಲ್ಲ’
ನಾನು ಕೋಲಾರದವನೇ, ಪಾಕಿಸ್ತಾನದಿಂದ ಬಂದವನಲ್ಲ: ಗೋ ಬ್ಯಾಕ್ ಕ್ಯಾಂಪೇನರ್ಸ್‌ಗೆ ನಾಯ್ಕರ್ ಟಾಂಗ್..
ಕೋಲಾರ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ, ಗೋ ಬ್ಯಾಕ್ ವೇಲು ನಾಯ್ಕರ್ ಅಭಿಯಾನ