Sunday, December 22, 2024

Latest Posts

‘ಅವ್ವಾ ಮಗನಿಗೆ ಸುಳ್ಳು ಹೇಳೋ ಡಿಎನ್‌ಎ ಪ್ರಾಬ್ಲಂ ಇರ್ಬೇಕು’

- Advertisement -

ಹಾಸನ: ಹಾಸನದಲ್ಲಿ ಮಾತನಾಡಿದ ಶಾಸಕ ಪ್ರೀತಂಗೌಡ, ಜೆಡಿಎಸ್‌ನವರು ತಮಗಾಡಿದ ಮಾತಿಗೆ, ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ರಾತ್ರಿ ಎರಡು ಗಂಟೆ ಮೂರು ಗಂಟೆ ತನಕ ನಶೆಯಲ್ಲಿ ಇರ್ತಾರೆ ಅಂತಾ ಜನ ಹೇಳಿದ್ದು. ನೀವು ಕೇಳಿದಂತೆ ಜನರು ನನಗೆ ಹೇಳಿದ ಮಾತಿದು. ಒಂದು ಡಿಎನ್‌ಎ ಪ್ರಾಬ್ಲಮ್ ಇರಬೇಕು, ಅವ್ವಾ ಮಗ ಇಬ್ಬರೂ ಹಾಗೆ ಮಾತಾಡಿದಾರೆ. ಸುಳ್ಳು ಹೇಳೋದು ಡಿಎನ್‌ಎ ಪ್ರಾಬ್ಲಂ ಇರಬೇಕು. ಇಲ್ಲಾಂದ್ರೆ ರಾತ್ರಿ ನಶೆ ಬೆಳಿಗ್ಗೆ ಆದ್ರು ಇಳಿದಿರಲ್ಲ ಹಾಗಾಗಿ ಮಾತಾಡಿರ್ತಾರೆ ಎಂದು ಭವಾನಿ ವಿರುದ್ದ ಪ್ರೀತಂಗೌಡ ಟೀಕೆ ಮಾಡಿದ್ದಾರೆ.

ಮಂಡ್ಯ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ: ಸಚಿವ ಆರ್. ಅಶೋಕ್..

ಮೂರನೇ ವಿಚಾರ ಏನಾದ್ರು ಸತ್ಯ ಇದ್ದರೆ ಅವರು ದಾಖಲೆ‌ಕೊಡಲಿ. ನಾನು ಯಾವುದೇ ವಿಚಾರ ಎತ್ತಿಲ್ಲ. ವಿಚಾರ ಎತ್ತಿರೊದು ಅವರು. ನಮ್ಮ ತಂದೆಯವರು ಅವರ ಶಿಫಾರಸಿನಂತೆ ಬಿಬಿಎಂಪಿಯಲ್ಲಿ ಕೆಲಸ ಮಾಡಿದ್ದಾರೆ. ಅವರು ಹೇಳಿರೊ ಮಾತು ಸತ್ಯ ಆದರೆ ಆ ಕ್ಷಣಕ್ಕೆ ನಾನು ರಾಜಿನಾಮೆ ಕೊಡ್ತೇನೆ. ಅವರು ದಾಖಲೆ ಕೊಡದಿದ್ದರೆ ಬಹುಶಃ ಅಜ್ಜಿ ಹೇಳಿದ್ದು ಹಾಗೂ ಯಡಿಯುರಲ್ಲಿ ಯುವಕರು ಹೇಳಿದ್ದು ಸರಿ ಅನ್ನಿಸುತ್ತೆ. ರೇವಣ್ಣ ಅವರು ಹಿಂಗೆಲ್ಲಾ ಮಾತಾಡಿಲ್ಲ ನೋಡಿ ಅವರು ಬಹಳ ಸಂಸ್ಕಾರವಂತರು. ದೇವೇಗೌಡರು ಚನ್ನಮ್ಮ ಹತ್ರಾ ಬೆಳೆದವರುತ ಅವರು ಸಂಸ್ಕಾರ ಕೊಟ್ಟಿದಾರೆ. ರೇವಣ್ಣ ಅವರು ಹೀಗೆ ಮಾತಾಡಿದ್ರೆ ನಾನು ಬೇರೆ ತರ ಮಾತಾಡ್ತಿದ್ದೆ ಎಂದು ಪ್ರೀತಂ ಹೇಳಿದ್ದಾರೆ.

ಅವರ ಬಗ್ಗೆ ರಾಜಕೀಯವಾಗಿ ನಾನು ನೂರು ಮಾತಾಡಿರಬಹುದು, ಅವರೂ ಮಾತಾಡಿರಬಹುದು. ಆದರೆ ವೈಯಕ್ತಿಕ ವಾಗಿ ಅವರು ಎಂದೂ ಮಾತಾಡಿಲ್ಲ ಏಕೆಂದರೆ ಅವರಿಗೆ ಸಂಸ್ಕಾರ ಇದೆ. ಆದರೆ ಇವರಿಗೆ ಸಂಸ್ಕಾರ ಇದೆಯೊ ಇಲ್ಲವೊ ಗೊತ್ತಿಲ್ಲ. ಆದರೆ ಸಂಸದರಿಗೆ ಸಂಸ್ಕಾರ ಕೊಡಬೇಕಿರೋದು ತಾಯಿ ಅಲ್ವಾ. ತಾಯಿಗೇ ಹೀಗೆ ಮಾತಾಡಿದ್ರೆ ಸಂಸ್ಕಾರ ಇಲ್ಲದವರು ಬಗ್ಗೆ ನಾನು ಏನು ಮಾತನಾಡಲಿ ಎಂದು ಪ್ರೀತಂಗೌಡ ಪ್ರಶ್ನೆ ಮಾಡಿದ್ದಾರೆ. ನಮ್ಮ ತಂದೆ ಆಲೂರು ತಾಲ್ಲೂಕಿನ ಸಿದ್ದಾಪುರದವರು, ತಾಯಿ ಗಂಜಿಗೆರೆಯವರು. ತಾಯಿ ಹುಟ್ಟೋ ಮೊದಲೇ ಅವರ ಕುಟುಂಬ ನೂರು ಎಕರೆ ಖಾತೆದಾರರು. ನಮ್ಮ ತಂದೆ ಹುಟ್ಟೋಕು‌ ಮೊದಲು ಅವರ ಕುಟುಂಬ ಹತ್ತಾರು ಎಕರೆ ಖಾತೆದಾರರು. ಅದೇ ಸಾಲಿಗ್ರಾಮಕ್ಕೆ ಹೋಗಿ ಕೇಳಿ. ನಮ್ಮ ಅಕ್ಕಾವ್ರ ಮನೆಯಲ್ಲಿ ಎಷ್ಟು ಗುಂಟೆ ಖಾತೆ ಇತ್ತು ಕೇಳಿ. ಎಕರೆ ಬೇಡಾ ಎಷ್ಟು ಗುಂಟೆ ಖಾತೆ ಇತ್ತು ಕೇಳಿ ಎಂದು ಭವಾನಿ ರೇವಣ್ಣ ವಿರುದ್ಧ ಪ್ರೀತಂ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ಮತ್ತೊಮ್ಮೆ ಆಪರೇಷನ್ ಕಮಲ..? ಸಚಿವ ಅಶೋಕ್ ಸೂಚನೆ..?

ಹೊಳೆನರಸೀಪುರಕ್ಕೆ ಸೊಸೆ ಆಗಿ ಬರೋದಕ್ಕು ಮೊದಲು ಅವರ ಮನೆ ಪರಿಸ್ಥಿತಿ ಏನು ಎಂದು ಆತ್ಮವಿಮರ್ಶೆ ಮಾಡಿಕೊಳ್ಳಲಿ. ನಮ್ಮ ಕುಟುಂಬದ ಬಗ್ಗೆ ಇಡೀ ಜಿಲ್ಲೆಗೆ ಗೊತ್ತಿದೆ, ನಾನು ಹೇಳಿಕೊಳ್ಳೋ ಅವಶ್ಯಕತೆ ಇಲ್ಲ. ಅವರೇನಾದ್ರು ಮೈಸೂರು ರಾಜರಿಗೆ ಸಾಲಕೊಟ್ಟಿದ್ದರೋ..? ರಾಜರಿಗಿಂತಾ ಆಗರ್ಭ ಶ್ರೀಮಂತರಾಗಿದ್ರೋ ಏನೋ ನನಗೆ ಗೊತ್ತಿಲ್ಲ. ಆದರೆ ಅವರ ಮಾತಿನ ಶೈಲಿ ದಾಟಿ ನೋಡಿದ್ರೆ,  ಅವರು ಬಹಳ ಆಗರ್ಭ ಶ್ರೀಮಂತ ರು ಅನ್ನಿಸುತ್ತೆ. ನನಗೆ ಮಾಹಿತಿ ಇಲ್ಲ. ಆದರೆ ನಾವಂತೂ ಬಹಳ ಸ್ವಾಭಿಮಾನದಿಂದ ಬದುಕಿರುವವರು ಎಂದು ಪ್ರೀತಂ ಹೇಳಿದ್ದಾರೆ.

ಹಾಗಾಗಿ ಹೇಳುತ್ತಿದ್ದೇನೆ, ಒಂದೇ ಒಂದು ಕ್ಷಣ ಬಮ್ಮೆ ತಂದೆ ಬಿಬಿಎಂಪಿಯಲ್ಲಿ ಕೆಲಸ ಮಾಡಿರೋ ದಾಖಲೆ ಕೊಟ್ಟರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡ್ತೇನೆ. ಇಲ್ಲವೆಂದಾದೇ ಎಣ್ಣೆ ಡಿಟೆಕ್ಟರ್ ಇರುತ್ತಲ್ಲ ಪೊಲೀಸರ ಹತ್ರ. ಅದನ್ನ ಇಟ್ಟುಕೊಂಡಿರಿ. ನಿಮ್ಮ ಬಳಿ ಅವರು ಮುಂದೆ ಪತ್ರಿಕಾಗೋಷ್ಠಿಗೆ ಬಂದರೆ ಚೆಕ್ ಮಾಡಿ. ಆಲ್ಕೊಮೀಟರ್ ನಲ್ಲಿ ನಶೆ ಇದ್ದರೆ ಅವರ ಮಾತನ್ನ ಸೀರಿಯಸ್ಸಾಗಿ ತಗೊ ಬೇಡಿ ಎಂದು ಪ್ರೀತಂಗೌಡ ಟಾಂಗ್ ಕೊಟ್ಟಿದ್ದಾರೆ.

- Advertisement -

Latest Posts

Don't Miss