Wednesday, January 15, 2025

Latest Posts

‘ರೇವಣ್ಣ ಒಂದು ಶಕ್ತಿ, ಅವರಿಂದಲೇ ಜೆಡಿಎಸ್ ಅಭ್ಯರ್ಥಿ ಗೆಲ್ಲುತ್ತಿದ್ದರು’

- Advertisement -

  ಹಾಸನ : ರೇವಣ್ಣ ಸ್ಪರ್ಧಿಸಿದರೆ ಐವತ್ತು ಸಾವಿರ ಮತಗಳ ಲೀಡ್ನಿಂದ ಗೆಲ್ಲುತ್ತೇನೆ ಎಂಬ ಸವಾಲು ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಹದಿನೆಂಟು ತಿಂಗಳ ಹಿಂದೆ ಸವಾಲು ಹಾಕಿದ್ದೆನು..? ಆಗ ಯಾರು ಉತ್ತರ ಕೊಡಬೇಕು ಕೊಟ್ಟಿದ್ದರೇ ಅದಕ್ಕೆ ಮಾನ್ಯತೆ ಇರುತ್ತಿತ್ತು. ಈಗ ಅದು ಅಪ್ರಸ್ತುತ, ಈಗ ಅವರು ಮಾತನಾಡಿದರೆ ನಾನು ಚರ್ಚೆ ಮಾಡುತ್ತೇನೆ. ಐವತ್ತು ಸಾವಿರ ಮತಗಳ ಲೀಡ್ಗೆ ಈಗಲೂ ಬದ್ದ, ಮುಂದಿನ ಚುನಾವಣೆಗೂ ಅವಕಾಶ ಕೊಡ್ತಿನಿ ಎಂದರು.

ರೇವಣ್ಣ ಅವರು ಜಿಲ್ಲೆಯಲ್ಲಿ ಅವರದ್ದೇ ಆದ ಶಕ್ತಿ ಇಟ್ಟುಕೊಂಡಿದ್ದಾರೆ. ಇಡೀ ರಾಜ್ಯದಲ್ಲಿ ಏಕೈಕ ಎಂಪಿ ಗೆಲ್ಲಿಸಿಕೊಂಡವರು ರೇವಣ್ಣ ಅವರು. ಎಂಪಿ, ಎಂಎಲ್ಸಿ ಚುನಾವಣೆಯಲ್ಲಿ ಇಬ್ಬರು ಮಕ್ಕಳನ್ನು ಗೆಲ್ಲಿಸಿಕೊಂಡಿದ್ದಾರೆ. ರೇವಣ್ಣ ಒಂದು ಶಕ್ತಿ, ಅವರಿಂದಲೇ ಜೆಡಿಎಸ್ ಅಭ್ಯರ್ಥಿ ಗೆಲ್ಲುತ್ತಿದ್ದರು. ಅವರ ಬೆಂಬಲ ಇಲ್ಲದಿದ್ದರೆ ಜೆಡಿಎಸ್ ಅಭ್ಯರ್ಥಿ ಇಪ್ಪತ್ತು ಸಾವಿರ ಓಟು ಪಡೆದುಕೊಳ್ಳತ್ತಾರೆ. ರೇವಣ್ಣ ಬೆಂಬಲ ಇಲ್ಲದೆ ಸ್ಪರ್ಧೆ ಮಾಡಿದ್ರೆ ಅವರ ಅಭ್ಯರ್ಥಿ ಠೇವಣಿ ಕಳೆದುಕೊಳ್ತಾರೆ. ಹಿರಿಯ ನಾಯಕರು, ಅವರ ಶಕ್ತಿ ಹಾಗಾಗಿ ಅವರಿಗೆ ಗೌರವ ಕೊಡುತ್ತೇನೆ. ಸವಾಲೇ ಬೇರೆ, ರೇವಣ್ಣ ಅವರ ಶಕ್ತಿನೇ ಬೇರೆ, ಯಾರೂ ಅಲ್ಲೆಗಳಿಯಬಾರದು ಎಂದು ಹಾಡಿ ಹೊಗಳಿ, ಪರೋಕ್ಷವಾಗಿ ರೇವಣ್ಣರನ್ನ ಕುಟುಂಬ ರಾಜಕಾರಣ ಎಂದು ಪ್ರೀತಂಗೌಡ ಅವರು ಕಾಲೆಳೆದಂತಿತ್ತು.

ಬಿಜೆಪಿ ಅಭ್ಯರ್ಥಿಗಳು ಚಾಮುಂಡೇಶ್ವರಿ, ಹುಣಸೂರು, ಚಾಮರಾಜನಗರಕ್ಕೆ ನಾಮಪತ್ರ ಸಲ್ಲಿಸುವಾಗ ಹೋಗುವಂತೆ ಹೈಕಮಾಂಡ್ ಸೂಚಿಸಿದೆ. ಮೊದಲ ಬಾರಿ ಸ್ಪರ್ಧೆ ಮಾಡಿದಾಗ ಶಾಸಕನಾಗಲು ಅವಕಾಶ ಕೊಟ್ಟಿದ್ದು, ಈ ಬಾರಿ ಗೆದ್ದರೆ ಸಚಿವನಾಗುತ್ತಾರೆ ಎಂಬ ಚರ್ಚೆ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಸಕರು, ನಾನು ರಾಜಕೀಯ ಸನ್ಯಾಸಿಯಲ್ಲ. ಗೆದ್ದರೆ ಸಚಿವ ಸ್ಥಾನ ಕೊಡಿ ಅಂತ ಕಾರ್ಯಕರ್ತರು ಕೇಳ್ತಾರೆ. ಕಾರ್ಯಕರ್ತರು ಕೇಳುವುದರಲ್ಲಿ ತಪ್ಪೇನಿದೆ ಎಂದು ಪ್ರೀತಂಗೌಡ ಅವರು ಈಗಲೇ ಸಚಿವ ಸ್ಥಾನಕ್ಕೆ ಅರ್ಜಿ ಹಾಕಿದಂತಿತ್ತು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಆರ್. ಮೋಹನ್, ಹುಡಾ ಅಧ್ಯಕ್ಷ ಲಲಾಟ್ ಮೂರ್ತಿ, ಬಿಜೆಪಿ ನಗರಧ್ಯಕ್ಷ ವೇಣುಗೋಪಾಲ್, ಮುಖಂಡರಾದ ರಂಗನಾಥ್ ಇತರರು ಉಪಸ್ಥಿತರಿದ್ದರು.

‘ಕೈ ಅಭ್ಯರ್ಥಿ ಇನ್ನೂ 8 ತಿಂಗಳಲ್ಲಿ ಜೈಲಿಗೆ ಹೋಗ್ತಾರೆ.’

ಬಿಜೆಪಿ ಗೆದ್ದರೆ ಯಾರು ಸಿಎಂ ಆಗ್ತಾರೆ ಅನ್ನೋ ಪ್ರಶ್ನೆಗೆ ವಿಜಯೇಂದ್ರ ಹೇಳಿದ್ದು ಹೀಗೆ..

‘ನನಗಷ್ಟೇ ಬಿಜೆಪಿ ಟಿಕೇಟ್ ಸಿಕ್ಕಿದ್ದಕ್ಕೆ ಕಾರಣವೇನಂದ್ರೆ..’

- Advertisement -

Latest Posts

Don't Miss