ಹಾಸನ : ಹಾಸನದಲ್ಲಿ ಮಾತನಾಡಿದ ಶಾಸಕ ಪ್ರೀತಂಗೌಡ, ಭವಾನಿ ರೇವಣ್ಣ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಭವಾನಿ ರೇವಣ್ಣ, ಪ್ರೀತಂಗೌಡರ ತಂದೆ ವಿರುದ್ಧ, ರೇವಣ್ಣನವರ ಬಳಿ ಶಾಸಕರ ತಂದೆ ದಮ್ಮಯ್ಯ ಅಂತ ಕೈಮುಗಿದು, ಹೆಂಡತಿ ಮಕ್ಕಳು ಸಾಕಲಾರದೆ, ಬೆಂಗಳೂರು ಬಿಬಿಎಂಪಿಗೆ ಹಾಕಿಸಿಕೊಂಡಿದ್ದರು ಎಂದು ಹೇಳಿದ್ದರು. ಹೀಗಾಗಿ ಇಂದು ಶಾಸಕರು, ಭವಾನಿ ಮಾತಿಗೆ ತಿರುಗೇಟು ನೀಡಿದ್ದಾರೆ.
‘ಅವ್ವಾ ಮಗನಿಗೆ ಸುಳ್ಳು ಹೇಳೋ ಡಿಎನ್‌ಎ ಪ್ರಾಬ್ಲಂ ಇರ್ಬೇಕು’
ಸಂಸದ ಪ್ರಜ್ವಲ್ ರೇವಣ್ಣ, ಭವಾನಿರೇವಣ್ಣ ಅವರನ್ನು ಕುಡುಕರು ಎಂದು ಹೇಳುವ ಮೂಲಕ ಮಾತು ಪ್ರಾರಂಭಿಸಿದ ಪ್ರೀತಂ, ನಮ್ಮ ತಾಯಿ ಹುಟ್ಟುವ ಮುಂಚೆ ನೂರು ಎಕರೆ ಖಾತೆದಾರರು. ನಮ್ಮ ತಾಂದೆ ಹುಟ್ಟುವ ಮುಂಚೆ ಹತ್ತಾರು ಎಕರೆ ಖಾತೆದಾರರು. ಸಾಲಿಗ್ರಾಮಕ್ಕೆ ಹೋಗಿ ಅಕ್ಕ ಅವರ ಮನೆಯಲ್ಲಿ ಎಷ್ಟು ಗುಂಟೆ ಜಾಗ ಇತ್ತು ಅಂತ ಕೇಳಿ. ಹೊಳೆನರಸೀಪುರಕ್ಕೆ ಸೊಸೆಯಾಗಿ ಬರುವ ಮುಂಚೆ ಅವರ ಮನೆಯ ಪರಿಸ್ಥಿತಿ ಏನು ಅಂತ ಅವರಿಗೆ ಅವರ ಆತ್ಮ ವಿಮರ್ಶೆ ಮಾಡಿಕೊಳ್ಳಲಿ.
ಮೈಸೂರು ಮಹಾರಾಜರು ಏನಾದ್ರು ಸಾಲ ಕೊಟ್ಟು ಅವರಿಗೆ ಆಗರ್ಭ ಶ್ರೀಮಂತರಾಗಿದ್ದರಾ ಭವಾನಿ ಅಕ್ಕ. ಮಾತನೋಡೋ ಶೈಲಿ ನೋಡಿದ್ರೆ ಅವರು ಆಗರ್ಭ ಶ್ರೀಮಂತರು ಅನ್ಸುತ್ತೆ. ಅಲ್ಕೋಮೀಟರ್ ಇಟ್ಕಂಡಿರಿ, ನೆಕ್ಸ್ಟ್ ಪ್ರೆಸ್‌ಮೀಟ್ ಬಂದಾಗ ಚೆಕ್‌ಮಾಡಿ ಏನಾದರೂ ನಶೆ ಇದ್ದರೆ ಏನು ಅನ್ಕೋಬೇಡಿ. 30, 60 ಅಲ್ಲ ಎರಡು ಬಾಟ್ಲು ಕುಡಿತರೆ. ತಾಯಿ, ಮಗ ಇಬ್ಬರು ಎರಡು ಗಂಟೆಯವರೆಗೆ ನಶೆ ಏರಿಸಿಕೊಂಡಿರುತ್ತಾರೆ ಎಂದು ಪ್ರೀತಂ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ: ಸಚಿವ ಆರ್. ಅಶೋಕ್..
ಅಲ್ಲದೇ, ಬೆಳಿಗ್ಗೆ ಬಂದು ಏನ್ ಮಾತಾಡ್ತಿವಿ ಅಂತ ಗೊತ್ತಾಗಲ್ಲ. ರೇವಣ್ಣ ಅವರು ಮಾತಾಡಲ್ಲ, ಅವರು ನಶೆ ಏರಿಸಿಕೊಳ್ಳಲ್ಲ. ಭವಾನಿ ಅಕ್ಕ, ಎಂಪಿ ನಶೆ ಮೇಲೆ ಮಾತಾಡಿದ್ದಾರೆ. ಹಾಸನ ಕ್ಷೇತ್ರದ ಜನರು, ಇಡೀ ರಾಜ್ಯದ ಜನರು ಮಾತನಾಡುತ್ತಿದ್ದಾರೆ . ರೇವಣ್ಣ ಈ ನಶೆಯರ ಮಧ್ಯೆ ಸಿಲುಕಿಕೊಂಡು ನರಳಿ ಹೋಗಿದ್ದಾರೆ. ನಮ್ಮ ತಾಯಿ ಬಿಎ, ನಮ್ಮ ತಂದೆ ಬಿಇ ಓದಿದ್ದಾರೆ ಹಾಗಾಗಿ ನಮಗೆ ಸಂಸ್ಕಾರ ಕಲಿಸಿಕೊಟ್ಟಿದ್ದಾರೆ ಎಂದು ಪ್ರೀತಂ ಹೇಳಿದ್ದಾರೆ.