ಹಾಸನ : ಕಳೆದ ಚುನಾವಣೆ ವೇಳೆ ನೀಡಿದ ಎಲ್ಲಾ ಭರವಸೆಗಳನ್ನು ಈಗಾಗಲೇ ಈಡೇರಿಸಿದ್ದೇನೆ. ಮುಂದೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಒಂದು ಲಕ್ಷ ಮತ ಪಡೆಯಬೇಕೆಂದು ಬಿಜೆಪಿ ಕಾರ್ಯಕರ್ತರು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ನಾಮ ಪತ್ರ ಸಲ್ಲಿಸುವ ಮೊದಲು ಅಂಬೇಡ್ಕರ್ ಜಯಂತಿ ಮತ್ತು ರಂಜಾನ್ ಹಬ್ಬದ ಅಂಗವಾಗಿ ಸಾವಿರಾರು ಜನರು ಸೇರಿ ಬೃಹತ್ ರ್ಯಾಲಿ ಮಾಡಲಾಗುವುದು ಎಂದು ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡ ತಿಳಿಸಿದರು.
ನಗರದ ಖಾಸಗಿ ಹೋಟೆಲೊಂದರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಧೂಳುಮುಕ್ತ, ಕಸಮುಕ್ತ ನಗರ, ರಿಂಗ್ ರೋಡ್, ಏರ್ಪೋರ್ಟ್, 24 ಗಂಟೆ ಕುಡಿಯುವ ನೀರು ವ್ಯವಸ್ಥೆ, ಉದ್ಯಾನವನ ಸೇರಿದಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಬಹುತೇಕ ಎಲ್ಲಾ ಭರವಸೆಯನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದೇನೆ. ಇನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಶೀರ್ವಾದ, ವಿಜಯೇಂದ್ರ ಅವರ ಶಕ್ತಿಯಿಂದ ಈ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಾಯಿತು ಎಂದು ಪ್ರೀತಂಗೌಡ ಹೇಳಿದ್ದಾರೆ.
ಏಪ್ರಿಲ್ ೧೪ರ ಶುಕ್ರವಾರದಂದು ಹಾಸನ ವಿದಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬೃಹತ್ ರಾಲಿ ಮಾಡುತ್ತೇವೆ. ಆದರೆ ನಾಮಪತ್ರ ಅಂದು ಸಲ್ಲಿಸುವುದಿಲ್ಲ ಎಂದರು. ಹಾಸನ ನಗರದ ಸಾಲಗಾಮೆ ರಸ್ತೆಯ ಸ್ಟೇಡಿಯಂ ಬಳಿಯಿಂದ ಡಿಸಿ ಕಛೇರಿ ವರೆಗೆ ಮೆರವಣಿಗೆ ನಡೆಯಲಿದೆ. ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನಾಳೆ ನಾಮಪತ್ರ ಸಲ್ಲಿಕೆಯ ರಾಲಿ ನಡೆಸುತ್ತೇವೆ. ಬಳಿಕ ಒಳ್ಳೆ ದಿನ ನೋಡಿ ನಾಮಪತ್ರ ಸಲ್ಲಿಕೆ ಮಾಡುತ್ತೇವೆ. ಮೇ.೧೦ ರಂದು ನಡೆಯುವ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾದರೂ ಒಂದು ಲಕ್ಷ ಓಟು ಪಡೆದುಕೊಳ್ಳಬೇಕು ಎಂದು ಕಾರ್ಯಕರ್ತರು ನಿರ್ಧರಿಸಿದ್ದಾರೆ. ಹಾಗಾಗಿ ಈ ನಿಟ್ಟಿನಲ್ಲಿ ನಮ್ಮ ಕೆಲಸ ನಡೆಯಲಿದೆ ಬೇರೆ ಯಾವುದೇ ವಿಶ್ಲೇಷಣೆ ಮಾಡೋಕೆ ಹೋಗುವುದಿಲ್ಲ ಎಂದು ಪ್ರೀತಂಗೌಡ ಹೇಳಿದ್ದಾರೆ.
ಅನುಮಾನ ಇದ್ದರೆ ಈಗಲೇ ಇವಿಯಂ ಮೆಷಿನ್ ಪರಿಶೀಲನೆ ಮಾಡಿಕೊಳ್ಳಿ. ನಂತರ ನಮಗೆ ಒಂದು ಲಕ್ಷ ಮತ ಶಾಸಕರು ಹೇಳಿದಂತೆ ಹೇಗೆ ಬಂತು ಎನ್ನುವ ಅನುಮಾನ ಪಡಬೇಡಿ. ಶಾಸಕರು ಓದಿರೋದು ಬೇರೆ ಕಂಪ್ಯೂಟರ್ ಸೈನ್ಸ್ ಹಾಗಾಗಿ ಏನೋ ಮಾಡಿದ್ದಾರೆ ಎಂದುಕೊಳ್ಳಬೇಡಿ ಎಂದು ವಿರೋದಿಗಳಿಗೆ ಟಾಂಗ್ ನೀಡಿದ ಅವರು, ಒಂದು ಲಕ್ಷ ಮತ ಪಡೆದು ಬಾರೀ ಬಹುಮತದಿಂದ ಗೆಲ್ತಿನಿ ಎಂದು ಶಾಸಕ ಪ್ರಿತಂ ಜೆ. ಗೌಡ ಹೇಳಿದ್ರು. ಇನ್ನು ಹಾಸನ ಜಿಲ್ಲೆಯ ಎಲ್ಲಾ ತಾಲೂಕಿಗೂ ನಾನು ತೆರಳಿ ನಮ್ಮ ಬಿಜೆಪಿ ಅಭ್ಯರ್ಥಿ ಪರ ಮತಕೇಳಲಾಗುವುದು ಎಂದರು.