Monday, December 23, 2024

Latest Posts

ಬಸವೇಶ್ವರ ಏತ ನೀರಾವರಿ ಯೋಜನೆಗೆ ಹಣ ಬಿಡುಗಡೆ ಮಾಡಿಲ್ಲವೆಂದು ಶಾಸಕ ರಾಜು ಕಾಗೆ ಅಸಮಾಧಾನ..

- Advertisement -

Chikkodi Political News: ಚಿಕ್ಕೋಡಿ: ಎಂಎಲ್‌ಎ ಫಂಡ್ ಬಿಡುಗಡೆ ವಿಚಾರವಾಗಿ ಕೈ ಶಾಸಕ ರಾಜು ಕಾಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯ ಕಾಗವಾಡ ತಾಲೂಕಿನ ಉಗಾರ ಪಟ್ಟಣದಲ್ಲಿ ಶಾಸಕ ರಾಜು ಕಾಗೆ ಈ ಬಗ್ಗೆ ಮಾತನಾಡಿದ್ದು, ಏನೂ ಇಲ್ಲದೇ ನಾವು ಖಾಲಿ ಕುಳಿತಿದ್ದೇವೆ. ಬಸವೇಶ್ವರ ಏತನೀರಾವರಿ ಯೋಜನೆ ಕುರಿತು ಹತ್ತು ಬಾರಿ ಸಿಎಂ, ಡಿಸಿಎಂ ಭೇಟಿಯಾಗಿದ್ದೇನೆ. ಈವರೆಗೂ ಆ ಯೋಜನೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ಬಸವೇಶ್ವರ ಏತ ನೀರಾವರಿ ಯೋಜನೆ ಮುಂದಿಟ್ಟುಕೊಂಡೇ ನಾನು ಚುನಾವಣೆ ಗೆದ್ದಿದ್ದು. ಜನರಿಗೆ ಆಶ್ವಾಸನೆ ಕೊಟ್ಟಿದ್ದೇವೆ, ಜನರಿಗೆ ಬಹಳ ನಿರೀಕ್ಷೆ ಇದೆ. ಎಲ್ಲಿ ಹೋದರೂ ಜನ ಪ್ರಶ್ನೆ ಮಾಡ್ತಾರೆ, ಮೊದಲೇ ಬರಗಾಲ. ಪ್ರವಾಹ ವೇಳೆ ಕೆರೆ ತುಂಬಿಸಿದ್ರೆ ಜನ ಜಾನುವಾರುಗಳಿಗೆ ಆಧಾರವಾಗುತ್ತಿತ್ತು. ಒಂದು ಟಿಸಿ ಬೇಕಾದ್ರೆ ನೀವೆ ಹಣ ತುಂಬಿ ಅಂತಾ ರೈತರಿಗೆ ಹೇಳ್ತಾರೆ. ಮೂರ್ನಾಲ್ಕು ಲಕ್ಷ ರೂ. ಹಣ ರೈತರಿಗೆ ನೀಡಲು ಆಗಲ್ಲ. ಆಡಳಿತ ಸುಧಾರಣೆ ಆಗಬೇಕು ಎಂದು ಹೇಳಿದ್ದೇನೆ. ನಿನ್ನೆ ಇಂಧನ ಸಚಿವರು ನನ್ನ ಜೊತೆ ಮಾತನಾಡಿ ಸರಿಪಡಿಸುವ ಭರವಸೆ ಇದೆ ಎಂದು ಹೇಳಿದ್ದಾರೆ.

ಕ್ಷೇತ್ರದ ಜನರು ಸಮುದಾಯ ಭವನ, ದೇವಸ್ಥಾನಗಳಿಗೆ ಹಣ, ನೀರಾವರಿ ಯೋಜನೆ ಕೇಳುತ್ತಿದ್ದಾರೆ. ಏನು ಇಲ್ಲದೇ ನಾವು ಖಾಲಿ ಕುಳಿತುಕೊಂಡಿದ್ದೇವೆ. ಎಂಎಲ್‌ಎ ಫಂಡ್ ಕೊಟ್ಟಿದ್ದೀವಿ ಎಂದಿದ್ದಾರೆ, ಎರಡು ತಿಂಗಳಾದರೂ ಈವರೆಗೂ ಆದೇಶ ಬಂದಿಲ್ಲ. ಐವತ್ತು ಲಕ್ಷ ನೀಡಿದ್ದೀವಿ ಎಂದಿದ್ದಾರೆ. ಜಿಲ್ಲಾಧಿಕಾರಿಗಳಿಂದ ಪತ್ರ ಬರಬೇಕಿತ್ತು ಇನ್ನೂ ಬಂದಿಲ್ಲ. ಇವೇ ಎಲ್ಲ ನೋವುಗಳು ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಅಸಮಾಧಾನ ಹೊರಹಾಕಿದ್ದಾರೆ.

ಸ್ವಚ್ಚತಾ ಸಿಬ್ಬಂದಿಯ ಕಣ್ಣೀರ ಕಹಾನಿ: ಸಾಕ್ಷ್ಯಚಿತ್ರ ಸಾಕ್ಷಿಕರಿಸಿದ ಪೌರಕಾರ್ಮಿಕರ ನೋವು..!

‘ಬಿಜೆಪಿ ಜತೆ ಮೈತ್ರಿಯಾಗಿದೆ ಎಂದರೆ ಅಲ್ಪಸಂಖ್ಯಾತರಿಗೆ ಭಯ ಬೇಡ’

ಪರಿಸರ ಜಾಗೃತಿಗಾಗಿ ಪಾದಯಾತ್ರೆ: ಮಾದರಿಯಾದ ಅಯೋಧ್ಯೆಯ ಯುವಕ

- Advertisement -

Latest Posts

Don't Miss