Tuesday, December 24, 2024

Latest Posts

‘ಇನ್ನೆರಡು ಮೂರು ತಿಂಗಳಲ್ಲಿ ಬಿಜೆಪಿ- ಕಾಂಗ್ರೆಸ್ ಶಾಸಕರು ಜೆಡಿಎಸ್‌ಗೆ ಸೇರ್ಪಡೆಯಾಗುತ್ತಾರೆ’

- Advertisement -

ಮಂಡ್ಯ: ಮಹದೇವಪುರ ಗ್ರಾಮದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿದ್ದು, ಇನ್ನೆರಡು ಮೂರು ತಿಂಗಳಲ್ಲಿ ಬಿಜೆಪಿ- ಕಾಂಗ್ರೆಸ್ ಶಾಸಕರು ಜೆಡಿಎಸ್‌ಗೆ ಸೇರ್ಪಡೆಯಾಗುತ್ತಾರೆಂದು ಹೇಳಿದ್ದಾರೆ.

ನಟಿ ತಾರಾ ಕಾರು ಚಾಲಕನ ವಿರುದ್ಧ ಎಫ್ಐಆರ್ ದಾಖಲು

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಮಾತನಾಡಿದ ರವೀಂದ್ರ ಶ್ರೀಕಂಠಯ್ಯ, ಬಿಜೆಪಿ ಪಕ್ಷದಲ್ಲಿ ಜನ ನೆಮ್ಮದಿಯಾಗಿರೋದನ್ನ ಬಯಸೋದಿಲ್ಲ. ದಿನಾ ಒಂದೊಂದು ಕಾಂಟ್ರವರ್ಸಿ ಸೃಷ್ಟಿಸಲಾಗುತ್ತಿದೆ. ಹಿಜಾಬ್ ಆಯ್ತು,ಈಗ ಮತ್ತೊಂದು ತಗೊಂಡು ಕೂತಿದ್ದಾರೆ. ಹಿಂದುತ್ವ ಶುರುಮಾಡಿದ್ದಾರೆ. ಎಲ್ಲವೂ ಸರಿ ಇದ್ದ ಜಾಗದಲ್ಲಿ ವಿನಾ ಕಾರಣ ಗಲಾಟೆ ಮಾಡಿಕೊಳ್ಳೊ ವಾತವರಣ ಕ್ರಿಯೇಟ್ ಆಗ್ತಿದೆ. ಜನ ಶಾಂತಿಯಿಂದ ಬದುಕಬೇಕೆಂಬ ಉದ್ದೇಶ ಸರ್ಕಾರಕ್ಕೆ ಕಾಣ್ತಿಲ್ಲ ಎಂದು ಹೇಳಿದ್ದಾರೆ.

ಜೈಲಿನ ಖೈದಿಗಳ ಹಕ್ಕಿನ ಬಗ್ಗೆ ವಿವಿಧ ಜಾಗೃತಿ ಕಾರ್ಯಕ್ರಮ: ನ್ಯಾ. ಬಿ.ಜಿ.ರಮಾ

ಅಲ್ಲದೇ, ಹಿಂದುತ್ವದ ವ್ಯಾಖ್ಯಾನಗಳೇನಿದೆ ಅದು ಸರಿ ಇಲ್ಲ. ನಮ್ಮ ದೇಶ ಹಿಂದೂ ರಾಷ್ಟ್ರ ಅದರಲ್ಲಿ ಯಾವುದೇ ಅನುಮಾನ ಇಲ್ಲ. ಅದರಲ್ಲಿ ಅವರ ವ್ಯಾಖ್ಯಾನವನ್ನ ಹೇಳುವಾಗ ಪಾಲಿಷ್ಡ್ ಆಗಿ ಮಾತನಾಡಬೇಕಾಗುತ್ತೆ. ಸಮಾಜವನ್ನ ಒಂದು ಹಂತಕ್ಕೆ ತೆಗೆದುಕೊಂಡು ಹೋಗಬೇಕಾದ ಮುಖಂಡರೇ ಈ ಬಗ್ಗೆ ಹೇಳೋಕ್ಕೆ ಬರದೇ, ಅಥವಾ ಹೇಳುವ ರೀತಿಯಲ್ಲಿ ಹೇಳದೇ, ಗೋಂದಲ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಯಾವುದೇ ರಾಜಕಾರಣಿಗಳು ಸಹಕರಿಸಬಾರದು ಎಂದು ಬಿಜೆಪಿ- ಕಾಂಗ್ರೆಸ್ ವಿರುದ್ಧ ಶಾಸಕ ರರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದ್ದಾರೆ.

- Advertisement -

Latest Posts

Don't Miss