Wednesday, October 15, 2025

Latest Posts

‘ಸರ್ಕಾರ ಇನ್ನಾದರೂ ಎಚ್ಚೆತ್ತು ರೈತರಿಗೆ ನೀಡಿದ ಭರವಸೆ ಈಡೇರಿಸಲಿ, ಇಲ್ಲವಾದಲ್ಲಿ ಪ್ರತಿಭಟನೆ ಗ್ಯಾರಂಟಿ’

- Advertisement -

ಅರಸೀಕೆರೆ :- ಕೃಷಿ ಚಟುವಟಿಕೆಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಸರ್ಕಾರ ತಾತ್ಸಾರ ಮನೋಭಾವ ತಾಳಿರುವುದನ್ನು ಖಂಡಿಸಿ, ರೈತರ ಹಿತ ದೃಷ್ಟಿಯಿಂದ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲು ಹಿಂಜರಿಯುವುದಿಲ್ಲ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಅಕ್ರಮ ಸಕ್ರಮ ಯೋಜನೆ ಅಡಿ ತಲಾ 23,800 ರೂಗಳನ್ನು ಫಲಾನುಭವಿ ರೈತರಿಂದ ಪಡೆದು ಟಿ.ಸಿ ಅಳವಡಿಸಿಕೊಡುವುದಾಗಿ ರೈತರಿಗೆ ಭರವಸೆ ನೀಡಿ ನಮ್ಮ ತಾಲೂಕು ಒಂದರಲ್ಲೇ 4147 ಮಂದಿ ರೈತರಿಂದ ಠೇವಣಿ ಹೆಸರಿನಲ್ಲಿ ಹಣ ಪಡೆದಿರುವ ಸರ್ಕಾರ ನಾಲ್ಕು ವರ್ಷಗಳು ಕಳೆದರೂ ಫಲಾನುಭವಿ ರೈತನ ಕೃಷಿ ಭೂಮಿಗೆ ಟಿಸಿ ಅಳವಡಿಸಿಕೊಡದೆ ದಿನ ದುಡುತ ಬಂದಿರುವುದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದು ಸರ್ಕಾರದ ಕಾರ್ಯವೈಕರಿ ಕುರಿತು ಟೀಕಾ ಪ್ರಹಾರ ನಡೆಸಿದರು.

ಚಾಣಕ್ಯನ ಪ್ರಕಾರ ಗಂಡನಲ್ಲಿ ಈ ಗುಣಗಳಿದ್ದರೆ ನಿಮ್ಮ ದಾಂಪತ್ಯ ಸುಖವಾಗಿರುತ್ತದೆ..!

ಕ್ಷೇತ್ರ ವ್ಯಾಪ್ತಿಯಲ್ಲಿ ಗಂಗಾ ಕಲ್ಯಾಣ ಯೋಜನೆ ಅಡಿ ಎಸ್ ಸಿ ಎಸ್ ಟಿ ಸಮುದಾಯದ ರೈತರು ಸೇರಿದಂತೆ ಹಿಂದುಳಿದ ವರ್ಗದ 650ಕ್ಕೂ ಹೆಚ್ಚು ಮಂದಿ ಫಲಾನುಭವಿ ರೈತರಿಗೆ ಕೊಳವೆಬಾವಿ ಕೊರೆಸಿ ಕೊಟ್ಟು ವರ್ಷಾನುಗಟ್ಟಲೆಯಾಗಿದೆ ಈ ಕೊಳವೆ ಬಾವಿಯಲ್ಲಿ ನೀರು ಇದ್ದರು ವಿದ್ಯುತ್ ಸಂಪರ್ಕ ಇಲ್ಲದೆ ರೈತರಿಗೆ ಯಾವುದೇ ಪ್ರಯೋಜನವಾಗದ ಕಾರಣ ಜನಪ್ರನಿಧಿಗಳು ಹಾಗೂ ಅಧಿಕಾರಿಗಳನ್ನು ರೈತರು ಶಪಿಸುತ್ತಿದ್ದಾರೆ ಎಂದರು.

ಸರ್ಕಾರದ ಯೋಜನೆ ರೈತ ಪರವಾಗಿದ್ದರಿಂದ ನಾನು ಸಹ ಕ್ಷೇತ್ರದ ಸಾವಿರಾರು ರೈತರಿಗೆ ಹಣ ಕಟ್ಟುವಂತೆ ಕೇಳಿಕೊಂಡಿದ್ದರಿಂದ ಸಾಲ ಸೋಲ ಮಾಡಿ ರೈತರು ತಮ್ಮ ಕಂತಿನ 23.800 ರೂಗಳನ್ನು ನೀಡಿದರು ಸರ್ಕಾರ ಮಾತ್ರ ತನ್ನ ಮಾತಿನಂತೆ ನಡೆದುಕೊಳ್ಳದೆ ಇರುವುದರಿಂದ ಕೊಳವೆ ನೀರನ್ನೆ ನೆಚ್ಚಿಕೊಂಡು ಕೃಷಿ ಚಟುವಟಿಕೆ ಮಾಡುತ್ತಿರುವ ಬಯಲು ಸೀಮೆ ತಾಲೂಕಿನ ರೈತರು ಕಂಗಾಲಾಗುವಂತೆ ಮಾಡಿದೆ ಎಂದರು.

ಕುರುಬ ಸಮಾಜದ ಹಣ ದುರುಪಯೋಗ: ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಲು ಕೇಶವಮೂರ್ತಿ ಆಗ್ರಹ

ನಮ್ಮ ಕೃಷಿ ಭೂಮಿಗೆ ಟಿಸಿಯೂ ಇಲ್ಲ. ನಾವು ಕಟ್ಟಿದ ಹಣ ಹಿಂತಿರುಗುವ ಗ್ಯಾರಂಟಿ ಇಲ್ಲ. ಏನು ಮಾಡುವುದು ಎಂದು ಪ್ರತಿದಿನ ನನ್ನ ಮನೆಗೆ ಹತ್ತಾರು ಮಂದಿ ರೈತರು ಬಂದು ಪ್ರಶ್ನಿಸುತ್ತಿದ್ದಾರೆ. ಅವರಿಗೆ ಏನು ಹೇಳುವುದು..? ಸರ್ಕಾರ ಇನ್ನಾದರೂ ಎಚ್ಚೆತ್ತು ರೈತರಿಗೆ ನೀಡಿದ ಭರವಸೆಯಂತೆ ಟಿ.ಸಿ ಅಳವಡಿಸಿಕೊಡದೆ ಹೋದರೆ, ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹಬ್ಬನಘಟ್ಟ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ್. ಹಬ್ಬನಘಟ್ಟ ಸಹಕಾರ ಸಂಘದ ಅಧ್ಯಕ್ಷ ರಾಜೇಗೌಡ. ಜೆಡಿಎಸ್ ಮುಖಂಡರಾದ ಯಳವಾರೆ ಕೇಶವಣ್ಣ ಹರಪನಹಳ್ಳಿ ಜಯಣ್ಣ ಮತ್ತು ಇತರರು ಉಪಸ್ಥಿತರಿದ್ದರು.

- Advertisement -

Latest Posts

Don't Miss