Wednesday, June 7, 2023

Latest Posts

ಸಿಎಂ- ಸುಧಾಕರ್ ಹಗ್ಗಜಗ್ಗಾಟ- ಕೊನೆಗೂ ಅಧ್ಯಕ್ಷಗಿರಿ ಗಿಟ್ಟಿಸಿಕೊಂಡ ಶಾಸಕ..!

- Advertisement -

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಸೂಕ್ತ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಶಾಸಕ ಡಾ.ಸುಧಾಕರ್ ಕೊನೆಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಜಯರಾಂ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಶಾಸಕ ಸುಧಾಕರ್ ಗೆ ಸ್ಥಾನ ನೀಡಲಾಗಿದೆ. ಇಂದು ಬೆಳಗ್ಗೆ ಸಿಎಂ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಜಯರಾಂ ರಾಜೀನಾಮೆ ನೀಡಿದ್ರು. ಆದ್ರೆ ಮೈತ್ರಿ ವಿರುದ್ಧವೇ ಮಾತನಾಡಿದ್ದ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಗೆ ನಿಗಮ ಮಂಡಳಿಯಲ್ಲೂ ಸ್ಥಾನ ನೀಡೋದಕ್ಕೆ ಸ್ವತಃ ಸಿಎಂ ತಡೆಯೊಡ್ಡಿದ್ರು. ಹೀಗಾಗಿ ಸಿಎಂ ಮತ್ತು ಶಾಸಕ ಸುಧಾಕರ್ ನಡುವೆ ಹಗ್ಗಜಗ್ಗಾಟ ನಡೆಯುತ್ತಿತ್ತು. ಕೊನೆಗೆ ಒತ್ತಡಕ್ಕೆ ಮಣಿದಿರೋ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ಶಾಸಕ ಸುಧಾಕರ್ ನೇಮಕಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಇನ್ನು ಈ ಬಗ್ಗೆ ಟ್ವೀಟ್ ಮಾಡಿರೋ ಶಾಸಕ ಸುಧಾಕರ್, ಪಕ್ಷದ ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ.

ರಾಹುಲ್ ಗೆ ಸಿದ್ದರಾಮಯ್ಯ ಹೇಳಿದ ಆ ಸೀಕ್ರೆಟ್ ಏನು..?ಮಿಸ್ ಮಾಡದೇ ಈ ವಿಡಿಯೋ ನೋಡಿ

- Advertisement -

Latest Posts

Don't Miss