Monday, December 16, 2024

Latest Posts

‘ಗೋಪುರದ ರೀತಿ ಕಾಣುವುದೆಲ್ಲ ಸಾಬ್ರುದು ಅನ್ನೊದಾದ್ರೆ ನಾವ್ ಏನ್ ಮಾಡೊದು..?’

- Advertisement -

ಮೈಸೂರು: ಮೈಸೂರಿನಲ್ಲಿಂದು ಶಾಲೆಗಳಲ್ಲಿ ಕೇಸರಿ ಬಣ್ಣ ಹಾಕುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ವಿನಾಕಾರಣ ನಾವು ಸೃಷ್ಟಿ ಮಾಡುವುದಲ್ಲ. ಅದನ್ನ ರಕ್ಷಣೆ ಮಾಡಬೇಕೇ ಹೊರತು ಹಾಳು ಮಾಡಬಾರದು. ಅವರು ಏನು ಬೇಕಾದ್ರು ಮಾಡಿಕೊಳ್ಳಲಿ. ಟಿಪ್ಪು ಜಯಂತಿ ನಾವು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದೇವೆ. ಆ ದಿನಾಂಕದಂದು ನಾವು ಮಾಡುತ್ತಾ ಬಂದಿದ್ದೇವೆ. ಟಿಪ್ಪು ಜಯಂತಿ ಒಂದು ದಿನ ಮಾಡುತ್ತೇವೆ. ಅವರು ವರ್ಷ ಪೂರ್ತಿ ವಿರೋಧ ಮಾಡ್ತಾರೆ ಎಂದು ಹೇಳಿದ್ದಾರೆ.

‘ನನಗೆ ಹೆಚ್ಚು ವರ್ಷ ಬದುಕಬೇಕು, ಆದರೆ ಎಷ್ಟು ವರ್ಷ ಬದುಕಿರುತ್ತೇನೋ ಗೊತ್ತಿಲ್ಲ’

ಇನ್ನು ಟಿಪ್ಪು ನಿಜ ಕನಸುಗಳು ಪುಸ್ತಕ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ತನ್ವೀರ್ ಸೇಠ, ಬಿಡುಗಡೆಯಾದ ಪುಸ್ತಕ ನನ್ನ ಕೈ ಸೇರಿದೆ. ವಕೀಲ ರಂಗನಾಥ್ ಅವರ ಮೂಲಕ ಮೊಕದ್ದಮೆ ದಾಖಲಿಸ್ತಿವಿ. ಇಂದು ಪಿಐಎಲ್ ಹಾಕ್ತೀವಿ. ಎಲ್ಲಿ? ಯಾವಾಗ ? ಎಂಬುದನ್ನ ವಕೀಲರು ನೋಡಿಕೊಳ್ತಾರೆ ಎಂದಿದ್ದಾರೆ.

ಮನೆಯಲ್ಲೇ ತಯಾರಿಸಿ ಹೊಟೇಲ್ ಶೈಲಿಯ ಮೇಥಿ ಆಲೂ ಪರೋಠಾ..

ಗುಂಬಜ್ ಮಾದರಿಯ ಬಸ್ ನಿಲ್ದಾಣ ಧ್ವಂಸ ಮಾಡುವೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ತನ್ವೀರ್,  ಯಾರ ಯಾರ ದೃಷ್ಟಿಯಲ್ಲಿ ಏನು ಕಾಣುತ್ತೊ ಅದೇ ಕಾಣೊದು. ಗೋಪುರಗಳು ಮಸೀದಿ ಮಾದರಿಯಲ್ಲಿ ಇದೇ ಅಂತ ಹೇಳುವಂತಹ ಪ್ರತಾಪ್ ಸಿಂಹ ಪ್ರಜ್ಞೆ ಯಾವ ರೀತಿ ಇದೆ ಎಂಬುದನ್ನ ತಿಳಿದುಕೊಳ್ಳಬೇಕು‌‌. ಇದು ಸರ್ಕಾರದ ಆಸ್ತಿ, ಏನೆಲ್ಲ ಒಡೆಯುತ್ತಾರೆ ಕಾದು ನೋಡಬೇಕು. ಗೋಪುರದ ರೀತಿ ಕಾಣುವುದೆಲ್ಲ ಸಾಬ್ರುದು ಅನ್ನೊದಾದ್ರೆ ನಾವ್ ಏನ್ ಮಾಡೊದು. ಆ ಶೆಲ್ಟರ್ ಯಾರು ವಿನ್ಯಾಸ ಮಾಡಿದ್ರು? ಎಂಬುದು ನನಗೆ ಗೊತ್ತಿಲ್ಲ. ಗುಂಬಜ್‌ ಮಾದರಿಯ ಬಸ್‌ ನಿಲ್ದಾಣ ಹೊಡೆದು ಹಾಕೋದಾದ್ರೆ‌. ಅದೆಷ್ಟು ಹೊಡೆದು ಹಾಕ್ತಾರೆ ಹೊಡೆದು ಹಾಕಲಿ ಎಂದು ಸಂಸದ ಪ್ರತಾಪ್ ಸಿಂಹಗೆ ತನ್ವೀರ್ ತಿರುಗೇಟು ನೀಡಿದ್ದಾರೆ.

- Advertisement -

Latest Posts

Don't Miss