Hassan News: ಹಾಸನ: ಲೋಕಸಭೆ ಚುನಾವಣೆಗೆ ಬಿಜೆಪಿ ಟಾರ್ಗೆಟ್ ವಿಚಾರಕ್ಕೆ ಸಂಬಂಧಿಸಿದಂತೆ, ಹಾಸನದಲ್ಲಿಂದು ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿದ್ದು, ಮೊದಲ ಆದ್ಯತೆ ವಿರೋಧ ಪಕ್ಷದ ನಾಯಕರು ತಕ್ಷಣ ಆಯ್ಕೆ ಆಗಬೇಕು. ರಾಜ್ಯದ ಅಧ್ಯಕ್ಷರುವ ಏನು ನಿರ್ಧಾರ ಮಾಡ್ತಾರೆ ಅನ್ನೋದು ಸ್ವಲ್ಪ ದಿನಗಳಲ್ಲಿ ಆಗುತ್ತದೆ ಎಂದು ಹೇಳಿದ್ದಾರೆ.
ಆದಾದ ತಕ್ಷಣ ಲೋಕಸಭೆ ಚುನಾವಣೆ ಇರಬಹುದು. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ, ಬೆಂಗಳೂರು ಬಿಬಿಎಂಪಿ ಚುನಾವಣೆ ಸೇರಿ ಎಲ್ಲವನ್ನು ಗಂಭೀರವಾಗಿ ನಾವು ತೆಗೆದುಕೊಂಡಿದ್ದೇವೆ. ಇನ್ನೂ ಹೆಚ್ಚು ಗಂಭೀರವಾಗಿ ತೆಗೆದುಕೊಳ್ತೇವೆ, ಇವೆಲ್ಲಾ ತೀರ್ಮಾನವಾದ ನಂತರ ಅದರ ಸರಿಯಾದ ಸ್ವರೂಪ ಸಿಗುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಇನ್ನು ಎಂಪಿ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಅದರ ಬಗ್ಗೆ ರಾಜ್ಯಮಟ್ಟದಲ್ಲಿ ಇನ್ನೂ ಚರ್ಚೆ ಆಗಿಲ್ಲ. ಹಾಗಾಗಿ ಅದರ ಬಗ್ಗೆ ನನಗೇನು ಮಾಹಿತಿ ಇಲ್ಲ, ಪ್ರತಿಕ್ರಿಯೆ ನೀಡೋದಕ್ಕೂ ಸಾಧ್ಯವಾಗಲ್ಲ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಗಾಳಿಸುದ್ದಿ ಎಂದ ಹೆಚ್.ಡಿ.ಕುಮಾರಸ್ವಾಮಿ
‘ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ, ಮುಂದಿನ ದಿನಗಳಲ್ಲಿ ಉಳಿದ ಗ್ಯಾರಂಟಿ ಜಾರಿ ಮಾಡಲಿದ್ದೇವೆ’