Tuesday, October 3, 2023

Latest Posts

‘ಕುಮಾರಸ್ವಾಮಿ ಒಬ್ಬ ಅಯೋಗ್ಯ ಸಿಎಂ’- ಎಂಎಲ್ ಸಿ ರವಿಕುಮಾರ್ ಹೇಳಿಕೆ

- Advertisement -

ಬೆಂಗಳೂರು: ಜಿಂದಾಲ್ ಗೆ ಭೂಮಿ ಪರಭೆರೆ ವಿಚಾರ ಕುರಿತಂತೆ ಮೈತ್ರಿ ಸರ್ಕಾರದ ಮೇಲೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದೆ. ಭೂಮಿ ನೀಡಿಕೆಯಲ್ಲಿ ಶಾಮೀಲಾಗಿರೋ ಕುಮಾರಸ್ವಾಮಿ ಒಬ್ಬ ಅಯೋಗ್ಯ ಸಿಎಂ ಅಂತ ಬಿಜೆಪಿ ಎಂಎಲ್ ಸಿ ರವಿಕುಮಾರ್ ಕಿಡಿ ಕಾರಿದ್ದಾರೆ.  

ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಮಾತನಡಿದ ವಿಧಾನ ಪರಿಷತ್ ಸದಸ್ಯ ರವಿಕುಮಾರ್ , ಮೈತ್ರಿ ನಾಯಕರ ವಿರುದ್ಧ ತೀವ್ರ ಕಿಡಿ ಕಾರಿದ್ದಾರೆ. ಐಎಂಎ ಪ್ರಕರಣ ಕುರಿತಂತೆ ದೇವೇಗೌಡರು ಅಲ್ಲಿಗೆ ಹೋಗಿ ಯಾಕೆ ಕಣ್ಣೀರು ಹಾಕುತ್ತಿಲ್ಲ, ಈಗ ಎಲ್ಲಿ ಹೋದ್ರು.ಎಲ್ಲಾ ಸೇರಿ ನಾಟಕ ಮಾಡುತ್ತಿದ್ದಾರೆ ಅಂತ ದೇವೇಗೌಡರ ವಿರುದ್ಧ ರವಿಕುಮಾರ್ ಹರಿಹಾಯ್ದಿದ್ದಾರೆ.

ಕುಮಾರಸ್ವಾಮಿ ಒಬ್ಬ ಅಯೋಗ್ಯ ಸಿಎಂ, ಇದನ್ನು ನಾವು ಸಾಬೀತು ಪಡಿಸುತ್ತೇವೆ ಅಂತ ಕಟುವಾಗಿ ಮಾತನಾಡಿದ ರವಿಕುಮಾರ್, ಇದನ್ನು ಬಿಜೆಪಿಯ ಓಪನ್ ಚಾಲೆಂಜ್ ಅಂತ ಸವಾಲೆಸೆದಿದ್ದಾರೆ.

ಇನ್ನು ಸಿದ್ದರಾಮಯ್ಯ ಚುನಾವಣೆ ಫಲಿತಾಂಶ ಬಂದ ಮೇಲೆ ಮನೆಗೆ ಹೋಗಿ ಮಲಗಬೇಕಿತ್ತು ಅಂತ ಲೇಪಡಿ ಮಾಡಿದ್ರು. ಅಲ್ಲದೆ ಬಳ್ಳಾರಿ ಉಪಚುನಾವಣೆಗೆ ಕೋಟ್ಯತರ ರೂಪಾಯಿ ಹಣ ಖರ್ಚು ಮಾಡಿ ಗೆದ್ದರಲ್ಲ, ಅಲ್ಲಿಂದಲೇ ಜಿಂದಾಲ್ ಬಳಿ ಹಣ ಪಡೆಯೋದು ಶುರುವಾಯ್ತು ಅಂತ ರವಿಕುಮಾರ್ ಆರೋಪಿಸಿದ್ರು. ಜಿಂದಾಲ್ ಭೂಮಿ ಮಾರಾಟ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಅಂತ ರವಿಕುಮಾರ್ ಆಗ್ರಹಿಸಿದ್ದಾರೆ.

ನಿಮ್ ಹತ್ರ ಬಿಪಿಎಲ್ ಕಾರ್ಡ್ ಇದೆಯಾ, ಹಾಗಾದ್ರೆ ಎಚ್ಚರ!! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=rVVoF8-8Ooc
- Advertisement -

Latest Posts

Don't Miss