Political News: ಬೆಂಗಳೂರು: ರಾಜ್ಯ ಸರ್ಕಾರ ತನ್ನ ಸಚಿವರಿಗೆ ಹೊಚ್ಚ ಹೊಸ ಸರ್ಕಾರಿ ಕಾರುಗಳನ್ನು ವಿತರಿಸುತ್ತಿದೆ. ಬಹುತೇಕ ಎಲ್ಲ ಸಚಿವರುಗಳು ತಮಗೆ ಇಂಥದ್ದೇ ಕಾರು ಬೇಕು, ಅದಕ್ಕೆ ಇಂಥದ್ದೇ ನಂಬರ್ ಇರಬೇಕು ಎಂದೆಲ್ಲ ಬೇಡಿಕೆ ಸಲ್ಲಿಸುತ್ತಿದ್ದಾರೆ.
ಈ ನಡುವೆ ರಾಜ್ಯದ ಸಚಿವರೊಬ್ಬರು ತಮಗೆ ಸದ್ಯ ಯಾವುದೇ ಹೊಸ ಕಾರಿನ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ, ಮಾದರಿಯಾಗಿದ್ದಾರೆ. ಅವರೇ ಕಾರ್ಮಿಕ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್. ಸಿದ್ದರಾಮಯ್ಯ ಸರ್ಕಾರದ ಅತ್ಯಂತ ಶಿಸ್ತಿನ ಹಾಗೂ ಪ್ರಾಮಾಣಿಕ ಸಚಿವರಲ್ಲೊಬ್ಬರಾಗಿರುವ ಸಂತೋಷ್ ಲಾಡ್ ತಮ್ಮ ಜನಪರ ನಿಲುವುಗಳಿಂದಲೇ ಹೆಚ್ಚು ಜನಪ್ರಿಯರಾದವರು.
ರಾಜ್ಯದೆಲ್ಲೆಡೆ ತೀವ್ರ ಬರ ಆವರಿಸಿದೆ. ಮಳೆ-ಬೆಳೆ ಇಲ್ಲದೆ ರೈತರು ಕಂಗಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದ ಜನರ ತೆರಿಗೆ ಹಣವನ್ನು ವಿನಾಕಾರಣ ಪೋಲು ಮಾಡಬಾರದು ಎನ್ನುವ ನಿಲುವಿಗೆ ಸಚಿವ ಸಂತೋಷ್ ಲಾಡ್ ಬಂದಿದ್ದಾರೆ.
ಇನ್ನು ಸಂತೋಷ್ ಲಾಡ್ ಅವರ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಗಿದ್ದು, ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಅಧ್ಯಾಪಕರ ವಿನಿಮಯ ಧಾರವಾಡದ IIT ಮತ್ತು ಜರ್ಮನ್ ಅಕಾಡೆಮಿಕ್ ಎಕ್ಸ್‌ಚೇಂಜ್ ಸರ್ವಿಸ್ ನಡುವೆ ಒಡಂಬಡಿಕೆ
ದೋಷಯುಕ್ತ ಇವಿ ವಾಹನ ಹೊಸ ಬೈಕ್ ನೀಡಲು ಟಿವಿಎಸ್‌ಗೆ ಗ್ರಾಹಕರ ಆಯೋಗ ಆದೇಶ
Market : ವರ್ಷವಾದರು ಹಂಚಿಕೆಯಾಗದ ಮಾರುಕಟ್ಟೆ ಮಳಿಗೆ : ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡ ವ್ಯಾಪಾರಿಗಳು