Thursday, November 30, 2023

Latest Posts

ಮೋದಿ‌ ಅವರು 10 ವರ್ಷದಲ್ಲಿ ದೇಶವನ್ನ ದಿವಾಳಿ ಮಾಡಿದ್ದಾರೆ: ಸಚಿವ ಸಂತೋಷ್ ಲಾಡ್

- Advertisement -

Political News: ಧಾರವಾಡ : ಕಾವೇರಿ ನೀರು ತಮಿಳುನಾಡಿಗೆ ಬಿಟ್ಟ ವಿಚಾರದ ಬಗ್ಗೆ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಸಿಎಂ ಅವರಿಗೆ ಎಲ್ಲವೂ ಮಾಹಿತಿ ಇದೆ. ನಾವು ಈ ವಿಚರಾವಾಗಿ ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಆದರೆ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕು. ಎಷ್ಟು ನೀರು ಬಿಡಬೇಕು ಎಂಬುದರ ಬಗ್ಗೆ ಸರಕಾರ ನಿರ್ಣಯ ತೆಗೆದುಕೊಳ್ಳುತ್ತದೆ. ಬಂದ್ ವೇಳೆ ಶಾಂತಿಯುತವಾಗಿ ಪ್ರತಿಭಟನೆ ಮಾಡಲಿ. ಇನ್ನು ನಾಳೆ ಜನತಾ ದರ್ಶನ ಹಿನ್ನೆಲೆ, ಸಿಎಂ ಆದೇಶದ ಮೆರೆಗೆ ಜನತಾ ದರ್ಶನವನ್ನು ಎಲ್ಲ ಜಿಲ್ಲೆಗಳಲ್ಲಿ ಮಾಡಲಾಗುತ್ತಿದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ..

ಲೋಕಸಭಾ ಚುನಾವಣೆ ವಿಚಾರದ ಬಗ್ಗೆ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದು,  ಮೋದಿ‌ ಅವರು 10 ವರ್ಷದಲ್ಲಿ ದೇಶವನ್ನ ದಿವಾಳಿ ಮಾಡಿದ್ದಾರೆ. ಅದೆ ಬೇಸ್ ನಲ್ಲಿ ನಾವು ಈ ಬಾರಿ ಲೋಕಸಭಾ ಚುನಾವಣೆಯನ್ನು ಎದುರಿಸುತ್ತೇವೆ. 10 ವರ್ಷದಿಂದ ಒಂದೇ ಒಂದು ಯೋಜನೆ ಇಲ್ಲ. ಆ ಬಗ್ಗೆ ಪ್ರಧಾನಿ ಇವತ್ತಿಗೂ ಏನೂ ಮಾತನಾಡಲ್ಲ ಎಂದಿದ್ದಾರೆ.

ಅಲ್ಲದೇ, ಅದರ ಬದಲಾಗಿ ಮೊದಲು 5 ಕೋಟಿ ಇಂಟರನೆಟ್ ಬಳಕೆ ಮಾಡುತ್ತಿದ್ದರು. ಈಗ 20 ಕೋಟಿ ಜನ ಇಂಟರನೆಟ್ ಬಳಕೆ ಮಾಡುತ್ತಾರೆ. ಮೊದಲು 6 ಕೋಟಿ ಮೊಬೈಲ್ ಬಳಕೆ ಮಾಡುತ್ತಿದ್ದರು. ಈಗ 20 ಕೋಟಿ ಮೂಬೈಲ್ ಬಳಕೆ ಮಾಡುತ್ತಾರೆ ಅಂತಾರೆ. ಇವೆಲ್ಲ ಸರ್ಕಾರದ ಕಾರ್ಯಕ್ರಮಗಳು ಅಲ್ಲ ಎಂದಿದ್ದಾರೆ.

10 ವರ್ಷದಲ್ಲಿ ಮಾಡಿರುವ ಕಾರ್ಯಕ್ರಮದ ಬಗ್ಗೆ ಮಾಹಿತಿ ಕೊಡಬೇಕು. ಇವತ್ತು ಕೇಂದ್ರ ಸರ್ಕಾರ ಬಂದು ಕಾರ್ಯಕ್ರಮಗಳ ಬಗ್ಗೆ ಹೇಳಬೇಕು. ಯಾರೇ ಪ್ರಧಾನಿ ಆದ್ರೂ ಜಿಡಿಪಿ ಹೆಚ್ಚು ಆಗೆ ಆಗುತ್ತೆ. ಅವರಿಗೆ ಅನೂಕೂಲವಾದುದನ್ನ ಮಾತ್ರ ಮಾತನಾಡುತ್ತಾರೆ. ಪ್ರಧಾನಿ ಮೋದಿ 10 ವರ್ಷದಲ್ಲಿ ಕೇವಲ ಪ್ರಚಾರವನ್ನು ಗಿಟ್ಟಿಸಿಕೊಂಡಿದ್ದಾರೆ . ಕಳೆದ 10 ವರ್ಷದಲ್ಲಿ ಸುಮಾರು 20 ಕೋಟಿ ಜನ ಬಿಪಿಎಲ್ ಕಾರ್ಡ ನಲ್ಲಿ ಸೇರಿಕೊಂಡಿದ್ದಾರೆ. ರಾಹುಲ್ ಗಾಂಧಿ ಅವರು ಸ್ಮಾಲ್‌ ಸ್ಕೆಲ್ ಇಂಡಸ್ಟ್ರೀಸಗಳ ಗಮನ ಹರಿಸಿದೆ. ನಮ್ಮ‌ ಉತ್ಪನ್ನಗಳನ್ನು ಬೇರೆ ಯಾವುದೇ ಅಂಗಡಿಯಲ್ಲಿಡೋದು. ಅವುಗಳನ್ನು ಮತ್ತೆ ನಮಗೆ ಹೆಚ್ಚಳವಾಗಿ ಅವರು ಮಾರಾಟ ಮಾಡುತ್ತಾರೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರದ ಬಗ್ಗೆ ಹೇಳಿಕೆ ನೀಡಿರುವ ಲಾಡ್,  ನಮಗೆ ಎನೂ ಎಫೆಕ್ಟ್ ಆಗಲ್ಲ, ಮೋದಿ‌ ವಿರುದ್ದ ಜನ ಮತ ಹಾಕೆ ಹಾಕ್ತಾರೆ. ಈ ಬಾರಿ ಕಾಂಗ್ರೆಸ್ ಪಕ್ಷ 100% ಅಧಿಕಾರಕ್ಕೆ ಬರುತ್ತೆ. ನಮ್ಮ‌ ಮೇಲಿನ ಆಡಳಿತ ವಿರೋಧಿ ಅಲೇ ಇತ್ತು,  ಆದರೆ ಈ ಬಾರಿ ಬಿಜೆಪಿ ಮೇಲೆ ಇದೆ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದೆ ಬರುತ್ತೆ ಎಂದಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆ ಡಿಕೆಶಿ ಮನೆಗೆ ಸವದಿ ಭೇಟಿ: ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ

ಹೆಬ್ಬಾಳ್ಕರ್‌ ಲಿಂಗಾಯತ ಲೀಡರ್ ಅಂತಾ ಹೇಳೋ ಅವಶ್ಯಕತೆ ಇದೆಯಾ? ಸಂತೋಷ ಲಾಡ್…..!

- Advertisement -

Latest Posts

Don't Miss