ಮೋದಿ ನೇತೃತ್ವದ ಸರ್ಕಾರ 3ನೇ ಬಾರಿಗೆ ಜೂನ್ 5ಕ್ಕೆ ಅಧಿಕಾರ ವಹಿಸಿಕೊಳ್ಳುವ ಭರವಸೆ ಇದೆ: ಜೋಶಿ

Hubli News: ಹುಬ್ಬಳ್ಳಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೂರನೇ ಬಾರಿಗೆ ಜೂನ್ 5 ನೇ ತಾರೀಖು ಅಧಿಕಾರ ವಹಿಸಿಕೊಳ್ಳುವ ಭರವಸೆ ಇದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಭವಾನಿ ನಗರದ ಮತಗಟ್ಟೆ ಸಂಖ್ಯೆ 111 ರಲ್ಲಿ ಕುಟುಂಬ ಸಮೇತವಾಗಿ ಆಗಮಿಸಿ ಮತದಾನ ಮಾಡಿದ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಬಳಿಕ ಸುದ್ದಿಗಾರರಿಂದಿಗೆ ಮಾತನಾಡಿದ ಅವರು, ಜನರು ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಹಬ್ಬ ಇದಾಗಿದೆ. ದೇಶದ ಭವಿಷ್ಯವನ್ನು ನಿರ್ಮಾಣ ಮಾಡುವ ನಿರ್ಣಯದ ಚುನಾವಣೆ ಇದಾಗಿದೆ. ಹೀಗಾಗಿ ದೊಡ್ಡ ಸಂಖ್ಯೆಯಲ್ಲಿ ಮತದಾರರು ಆಗಮಿಸಿ ಮತದಾನ ಮಾಡಿ ಯಶಸ್ವಿಗೊಳಿಸಬೇಕೆಂದರು‌.

ಈಗಾಗಲೇ ಒಂದನೇ ಹಂತದ ಚುನಾವಣೆ ರಾಜ್ಯದಲ್ಲಿ ಮುಗಿದಿದೆ. ಎರಡನೇ ಹಂತದ ಚುನಾವಣೆಯಲ್ಲಿ 14 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ. ಅದರಂತೆ ಕಳೆದ ಬಾರಿಗಿಂತ ಈ ಬಾರಿ ಅಭೂತಪೂರ್ವ ಜಯ ನನ್ನದಾಗಲಿದೆ ಎಂದರು.

ಪ್ರತಿ ಚುನಾವಣೆಯಲ್ಲಿ ಆರೋಪಗಳು ಬರುವುದು ಸಹಜ, ಅದರಂತೆ ಈ ಬಾರಿ ತ್ಯಜೋವಧೆ ಕೆಲಸ ಮಾಡಿದ್ದಾರೆ. ಇದನ್ನು ಮತದಾರರು ಕೇಳಿಸಿಕೊಳ್ಳುವುದಿಲ್ಲ. ಶುದ್ದ ರಾಜಕಾರಣ ಮಾಡಿದ್ದೇನೆ. ಯಾವುದೇ ಕಪ್ಪು ಚುಕ್ಕೆಯಿಲ್ಲದೇ ಆಡಳಿತ ನಡೆಸಿದ್ದೇನೆ. ಅನಗತ್ಯ ಆರೋಪಕ್ಕೆ ತಲೆಕೆಡಿಸಿಕೊಳ್ಳದೇ ಜನರು ನನಗೆ ಆರ್ಶೀವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದಲ್ಲಿ ಬಿಜೆಪಿ 400 ಕ್ಕೂ ಅಧಿಕ ಸೀಟುಗಳನ್ನು ಗೆಲ್ಲುವ ಮೂಲಕ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದರು.

ಇನ್ನು ಪ್ರಜ್ವಲ್ ರೇವಣ್ಣ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿ, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಇದನ್ನು ಸಿಬಿಐಗೆ ವಹಿಸಿದರೇ ಕೇಂದ್ರ ಸರ್ಕಾರ ತನಿಖೆ ಮಾಡಲಿದೆ. ಆದರೆ ರಾಜ್ಯದ ಕಾಂಗ್ರೆಸ್ ನಾಯಕರು ಭಾಗಿಯಾಗಿರುವ ಅನುಮಾನ ಕಾರಣ ಎಸ್ಐಟಿ ತನಿಖೆಗೆ ಕೊಡಲು ನಿರಾಕರಿಸುತ್ತಿದ್ದಾರೆ. ಸಿಬಿಐಗೆ ವಹಿಸುವುದು ಒಳ್ಳೆಯದು ಎಂದರು.

ಮುಷ್ಕರ ಮುಂದೂಡಿದ ಸರ್ಕಾರಿ ಆ್ಯಂಬುಲೆನ್ಸ್ ಸಿಬ್ಬಂದಿಗಳು

ಪಿಓಕೆ ತಂಟೆಗೆ ಹೋದರೆ ಭಾರತದ ಮೇಲೆ ಅಣುಬಾಂಬ್ ಬೀಳುತ್ತೆ: ಫಾರೂಕ್ ಅಬ್ದುಲ್ಲಾ

ಮೇಲ್ಜಾತಿಯವರು ಪೇಪರ್ ಸೆಲೆಕ್ಟ್‌ ಮಾಡುವ ಕಾರಣಕ್ಕೆ ದಲಿತರು ಫೇಲ್ ಆಗುತ್ತಿದ್ದಾರೆ: ರಾಹುಲ್ ಗಾಂಧಿ

About The Author