Sunday, September 8, 2024

Latest Posts

Modi ಭದ್ರತೆ ಲೋಪದ ದಾಖಲೆಗಳನ್ನು ಸಂರಕ್ಷಿಸುವoತೆ ಸುಪ್ರೀಂಕೋರ್ಟ್ ನಿರ್ದೇಶನ

- Advertisement -

ಪ್ರಧಾನ ಮಂತ್ರಿಯವರ ಭದ್ರತಾ ಲೋಪದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಭದ್ರತಾ ಲೋಪವು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದೆ. ಇದರ ಬೆನ್ನಲ್ಲೇ ಭದ್ರತೆಯ ವಿಚಾರ ಸಂಭಾವ್ಯ ಅಂತಾರಾಷ್ಟ್ರೀಯ ಮುಜುಗರವನ್ನು ಉಂಟುಮಾಡಬಹುದು ಎಂದು ಕೇಂದ್ರವು ಸುಪ್ರೀಂಕೋರ್ಟ್ ಗೆ ತಿಳಿಸಿದೆ.
ಈಗಾಗಿ ಪಂಜಾಬ್ ಮತ್ತು ಹರಿಯಾಣ ರಿಜಿಸ್ಟಾರ್ ಜನರಲ್ ಅವರಿಗೆ ಪ್ರಯಾಣದ ದಾಖಲೆಗಳನ್ನು ಸುರಕ್ಷಿತವಾಗಿ ಮತ್ತು ಸಂರಕ್ಷಿಸಿಡಲು ಸುಪ್ರೀಂಕೋರ್ಟ್ ನಿರ್ದೇಶಿಸಿದೆ.
ಪಂಜಾಬ್‌ನ ಗೃಹಸಚಿವರೂ ಈ ವಿಷಯದಲ್ಲಿ ಪರಿಶೀಲನೆಯಲ್ಲಿದ್ದಾರೆ. ಆದ್ದರಿಂದ ಅವರು ತನಿಖಾ ಸಮಿತಿಯ ಭಾಗವಾಗಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ನಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ. ಅದೇ ವೇಳೆ ತನಿಖಾ ಸಂಸ್ಥೆ ಎನ್ ಐ ಎ ಗೆ ಕರೆ ನೀಡುವ ಮನವಿಯನ್ನು ಬೆಂಬಲಿಸಿದೆ.

- Advertisement -

Latest Posts

Don't Miss