Thursday, October 30, 2025

Latest Posts

ಮೋದಿಯವರನ್ನು ಪ್ರಧಾನಮಂತ್ರಿ ಮಾಡಬೇಕು. ಈ ದೇಶ ಉಳಿಯಬೇಕೆಂದರೆ ಮೋದಿ ಬೇಕು: ಹೆಚ್.ಡಿ.ರೇವಣ್ಣ

- Advertisement -

Hassan News: ಹಾಸನ: ಹಾಸನ ಜಿಲ್ಲೆ, ಚನ್ನರಾಯಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆದಿದ್ದು, ಸಭೆಯಲ್ಲಿ ಮಾಜಿಸಚಿವ ಎಚ್.ಡಿ.ರೇವಣ್ಣ ಮಾತನಾಡಿದ್ದಾರೆ.

ವಿಧಾನಸಭಾ ಚುನಾವಣೆ ವೇಳೆ ತಿಪಟೂರಿನಿಂದ ಇಂದಿನ ಉಪಮುಖ್ಯಮಂತ್ರಿಗಳು ಹೇಳಿದ್ರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ‌ ಕೂಡಲೇ ಕ್ವಿಂಟಾಲ್ ಕೊಬ್ಬರಿಗೆ ಹದಿನೈದು ಸಾವಿರ ಕೊಡ್ತಿನಿ ಅಂದ್ರು. ಅವರು ಹೇಳಿದ್ದಾರೋ ಇಲ್ಲವೋ ಶ್ರೀ ಚೌಡೇಶ್ವರಿ ಮೇಲೆ ಆಣೆ ಮಾಡಲಿ ಎಂದು ರೇವಣ್ಣ ಸವಾಲ್ ಹಾಕಿದ್ದಾರೆ.

ನಾನು ಆಗ ಬಾಲಕೃಷ್ಣನಿಗೆ ಹೇಳಿದೆ. ಅವರ ಮಾಡಲ್ಲ. ದೇವೇಗೌಡರನ್ನು ಮೋದಿ ಬಳಿ ಕರೆದುಕೊಂಡು ಹೋಗೋಣ ಅಂದಿದ್ದೆ. ಅದೇ ರೀತಿ ಮೋದಿಯವರ ಬಳಿ ದೇವರಗೌಡರನ್ನು ಕರೆದುಕೊಂಡು ಹೋದೆವು. ಮೂರೇ ದಿನದಲ್ಲಿ ಕ್ಯಾಬಿನೆಟ್‌ಗೆ ಬಂದು ಕೊಬ್ಬರಿ ಬೆಲೆ ಜಾಸ್ತಿ ಮಾಡಿದರು. ಈ ಕ್ವಿಂಟಾಲ್ ಕೊಬ್ಬರಿಗೆ ಹನ್ನೆರಡು ಸಾವಿರ. ರಾಜ್ಯ ಸರ್ಕಾರಕ್ಕೆ ನಿಮಗೆ ರೈತರ ಪರ ಕಾಳಜಿಯಿದ್ದರೆ ಮೂರು ಸಾವಿರ ಕೊಡಿ. ಒಟ್ಟು ಕ್ವಿಂಟಾಲ್‌ಗೆ ಹದಿನೈದು ಸಾವಿರ ಆಗುತ್ತೆ. ಇಲ್ಲವಾದರೆ ಎಲೆಕ್ಷನ್ ಗೆಲ್ಲುಲು ಸುಳ್ಳು ಹೇಳಿದ್ವಿ ಅಂತ ಹೇಳಿ ಎಂದು ರೇವಣ್ಣ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಆದ ಮೇಲೆ ಐದು ಗ್ಯಾರೆಂಟಿಗಳು ನಿಲ್ತವೆ. ಐದು ಗ್ಯಾರೆಂಟಿಗಳು ಎಲ್ಲೆಲ್ಲಿ ಇವೆ ಅಲ್ಲೆಲ್ಲೆ ನಿಂತುಕೊಳ್ತಾವೆ. ಇವತ್ತು ಹಳ್ಳಿ ಕಡೆಗೆ ಬಸ್‌ಗಳನ್ನು ಬಿಡ್ತಿಲ್ಲ. ಏಕೆಂದರೆ ಬಸ್‌ಗಳನ್ನು ಬಿಟ್ಟರೆ ಮಹಿಳೆಯರೇ ಬರ್ತಾರೆ ಅಂತ. ಲೋಕಸಭೆ ಚುನಾವಣೆ ಮುಗಿದ ತಕ್ಷಣವೇ ಗ್ಯಾರೆಂಟಿಯಲ್ಲಾ ಖಾಲಿ ಆಗುತ್ತೆ ಎಂದು ಹೇಳುವ ಮೂಲಕ, ಗ್ಯಾರೆಂಟಿಗಳನ್ನು ನಿಲ್ಲಿಸುತ್ತಾರೆ ಎಂದು ಮಾಜಿ ಸಚಿವ ರೇವಣ್ಣ ಭವಿಷ್ಯ ನುಡಿದಿದ್ದಾರೆ.

ಕಾಂಗ್ರೆಸ್ ಸರ್ಕಾರ ರೈತರ ತಲೆ ಹೊಡೆಯುತ್ತಿದೆ. ಬಿಜೆಪಿ ಸರ್ಕಾರವನ್ನು ಮೂವತ್ತು ಪರ್ಸೆಂಟ್ ಎಂದರು. ಇವರದ್ದು ಎಷ್ಟು ಪರ್ಸೆಂಟ್ ಸರ್ಕಾರ..? ರೈತರಿಗೆ ಮೂವತ್ತು ಪೈಪ್, ಐದು ಸ್ಪಿಂಕ್ಲರ್ ಕೊಡಲು 1600 ಕೊಡಬೇಕಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮೂರು ಸಾವಿರ ರೂ ಜಾಸ್ತಿ ಮಾಡಿದ್ದಾರೆ. ನಾವು ಬದುಕಿರುವವರೆಗೂ ನಾನಾಗಲಿ, ದೇವೇಗೌಡರಾಗಲಿ, ಯಾರೇ ಆಗಲಿ ಮುಸಲ್ಮಾನರನ್ನು ಕೈ ಬಿಡಲ್ಲ. ನಮ್ಮ ಕಷ್ಟ ಕಾಲದಲ್ಲಿ ಕೈ ಹಿಡಿದಿದ್ದಾರೆ. ಮುಸ್ಲಿಂ ಸಮುದಾಯದಕ್ಕೆ ಹತ್ತು ಸಾವಿರ ಕೋಟಿ ಕೊಡ್ತಿನಿ ಅಂತಾರೆ. ಲೋಕಸಭೆ ಚುನಾವಣೆ ಕಳೆದ ಮೇಲೆ ಹತ್ತು ಸಾವಿರ ಇರಲಿ, ಹತ್ತು ರೂಪಾಯಿ ಕೊಡಲ್ಲ ಎಂದು ರೇವಣ್ಣ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಮಗೆ ಬೇಕಿರುವುದು ಸೀಟ್ ಅಲ್ಲ. ಮೋದಿಯವರನ್ನು ಪ್ರಧಾನಮಂತ್ರಿ ಮಾಡಬೇಕು. ಈ ದೇಶಕ್ಕೆ ಮೋದಿಯವರು ಬೇಕಾಗಿದೆ. ಈ ದೇಶ ಉಳಿಯಬೇಕೆಂದರೆ ಮೋದಿ ಬೇಕು. ದೇವೇಗೌಡರು ಮೋದಿಯವರನ್ನು ಪ್ರಧಾನಿಮಂತ್ರಿ ಮಾಡಬೇಕು ಎಂದಿದ್ದಾರೆ. ನಾನು ಹಲವಾರು ಪ್ರಧಾನಿಮಂತ್ರಿಗಳನ್ನು ನೋಡಿದ್ದೇನೆ. ದೇವೇಗೌಡರಿಗೆ ಅತಿಹೆಚ್ಚು ಗೌರವ ಕೊಡುವ ಪ್ರಧಾನಮಂತ್ರಿ ಮೋದಿಯವರು. ದೇವೇಗೌಡರು ಯಾರನ್ನೇ ಅಭ್ಯರ್ಥಿ ಮಾಡಲಿ. ದೇವೇಗೌಡರೇ ಸ್ಪರ್ಧಿಸಿದರೆ ಇನ್ನೂ ಸಂತೋಷ. ಲೋಕಸಭೆ ಚುನಾವಣೆಗೆ ಹಾಸನದಿಂದ ಯಾರೇ ಸ್ಪರ್ಧಿಸಿದರು ಅವರನ್ನು ಗೆಲ್ಲಿಸಿ ಎಂದು ರೇವಣ್ಣ ಮನವಿ ಮಾಡಿದ್ದಾರೆ.

ಆಫ್ರಿಕಾದ ಮಾಲಿಯಲ್ಲಿ ಚಿನ್ನದ ಗಣಿ ಕುಸಿತ: 70 ಮಂದಿ ಸಾವು

ಶೋಯೇಬ್ ಸನಾಗೂ ಡಿವೋರ್ಸ್ ಕೊಟ್ಟು ಇನ್ನೊಬ್ಬಳನ್ನು ಮದುವೆಯಾಗ್ತಾನೆ: ಬಾಂಗ್ಲಾ ಲೇಖಕಿಯ ಭವಿಷ್ಯ

ಬಿಜೆಪಿಗೆ ಜಗದೀಶ್ ಶೆಟ್ಟರ್ ಅನಿವಾರ್ಯತೆ ಇಲ್ಲ: ಶಾಸಕ ಮಹೇಶ ಟೆಂಗಿನಕಾಯಿ..!

- Advertisement -

Latest Posts

Don't Miss