Dharwad News: ಧಾರವಾಡ : ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸಂತೋಷ್ ಲಾಡ್, ರಾಷ್ಟ್ರಪತಿ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಸಿಎಂ ಬಾಯತಪ್ಪಿ ಮಾತನಾಡಿದ್ದಾರೆ. ಉದ್ದೇಶಪೂರ್ವಕವಾಗಿ ಹೇಳಿದ ಮಾತು ಅದಲ್ಲ. ಆದರೆ ಅದರ ಹಿಂದೆ ಅವರು ಹೇಳಿದ ವಿಷಯವನ್ನೂ ನೋಡಬೇಕಲ್ವಾ? ಮಹತ್ವದ ವಿಷಯ ಹೇಳಿದ್ರಲ್ವಾ ಅವರು. ಸಂಸತ್ ಉದ್ಘಾಟನೆಗೆ ರಾಷ್ಟ್ರಪತಿಗಳನ್ನು ಕರೆದಿಲ್ಲ. ಅವರೊಬ್ಬರ ವಿಧವೆ ಹೆಣ್ಣುಮಗಳು. ಬುಡಕಟ್ಟು ಸಮಾಜದವರು. ಅದೇ ಕಾರಣಕ್ಕೆ ಅವರನ್ನು ಸಂಸತ್ ಉದ್ಘಾಟನೆಗೆ ಕರೆದಿಲ್ಲ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ರಾಮ ಪ್ರಾಣಪ್ರತಿಷ್ಠಾಪನೆ ಪೂಜೆ ಮೋದಿ ಮಾಡಿದ್ದು ತಪ್ಪು. ಹಿಂದೂ ಸಂಸ್ಕೃತಿ ಪ್ರಕಾರ ಬ್ರಾಹ್ಮಣರೇ ಪೂಜೆ ಮಾಡಬೇಕು. ಇದರ ಬಗ್ಗೆ ಚರ್ಚೆಯಾಗಬೇಕು. ಪ್ರಧಾನಿ ಪೂಜೆ ಮಾಡಿರುವುದು ಉಲ್ಲಂಘನೆಯಾಗಿದೆ. ಹಿಂದೂ ಸಂಸ್ಕೃತಿ ಪ್ರಕಾರ ಬ್ರಾಹ್ಮಣರೇ ಪೂಜೆ ಮಾಡಬೇಕಲ್ವಾ? ಪ್ರಾಣ ಪ್ರತಿಷ್ಠಾಪನೆ ಬ್ರಾಹ್ಮಣರೇ ಮಾಡಬೇಕಂತ ನಾವು ಕೇಳಿದ್ದೇವೆ. ಆದರೆ ಮೋದಿ ಸಾಹೇಬರು ಪೂಜೆ ಮಾಡಿದರಲ್ವಾ? ಇದನ್ನು ಎಲ್ಲ ಸ್ವಾಮೀಜಿಗಳನ್ನು ಕರೆಯಿಸಿ ಚರ್ಚೆ ಮಾಡಬೇಕು. ಮೋದಿಯವರು ಮಾಡಿದ್ದು ಸರಿಯೋ ತಪ್ಪೋ ಚರ್ಚೆಯಾಗಬೇಕು ಎಂದು ಸಂತೋಷ್ ಲಾಡ್ ಆಗ್ರಹಿಸಿದ್ದಾರೆ.
ಮಂಡ್ಯ ಧ್ವಜ ಗಲಾಟೆ ವಿಚಾರದ ಬಗ್ಗೆ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದು, ಸಿಎಂ ಈಗಾಗಲೇ ಅದಕ್ಕೆ ಉತ್ತರ ಕೊಟ್ಟಿದ್ದಾರೆ. ಇದನ್ನು ರಾಜಕೀಯವಾಗಿ ಎಳೆಯಬಾರದು. ಇದನ್ನು ಹಿಂದೂ-ಮುಸ್ಲಿಂ ಮಾಡುವುದು ಸರಿಯಲ್ಲ. ಸಿಎಂಗೆ ಟಿಪ್ಪು ಸುಲ್ತಾನ್ ಎನ್ನುವುದು ಎಷ್ಟು ಸರಿ. ಹೀಗೆಲ್ಲ ಬಿಜೆಪಿ ಆರೋಪ ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೀಗೆಲ್ಲ ಮಾಡುವುದು ಸರಿಯಲ್ಲ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
‘ನಿಮ್ಮ ನಂಜಿನ ವಿಷ ರಾಜ್ಯವನ್ನೆಲ್ಲಾ, ದೇಶವನ್ನೆಲ್ಲಾ ವ್ಯಾಪಿಸುತ್ತಿದೆ. ಇದಕ್ಕೆ ಏನಂತೀರಿ?’
ಕಾಂಗ್ರೆಸ್ ಪೊಲೀಸ್ ಠಾಣೆ ಎಂದು ಬೋರ್ಡ್ ಹಾಕಿ – ಜೆಡಿಎಸ್ ಮಾಜಿ ಶಾಸಕ ಕೃಷ್ಣಾ ರೆಡ್ಡಿ ಆಕ್ರೋಶ