Saturday, July 27, 2024

Latest Posts

ಮಕ್ಕಳಿಗೆ ಹಣಕಾಸಿನ ಬಗ್ಗೆ ಅರಿವು ಮೂಡಿಸಿ

- Advertisement -

ಇಗಿನ ದಿನಮಾನಗಳಲ್ಲಿ ಹಣಕಾಸಿನ ನಿರ್ವಹಣೆ ತುಂಬಾ ಮುಖ್ಯ ಮಕ್ಕಳು ಬೇಕಾ ಬಿಟ್ಟಿಹಣ ಖರ್ಚು ಮಾಡುತಿರುತ್ತಾರೆ.ಏಕೆಂದರೆ ಅವರಿಗೆ ಹಣದ ಮೌಲ್ಯ ತಿಳಿದಿರುವುದಿಲ್ಲ ಅದಕ್ಕಾಗಿ ಚಿಕ್ಕವಯಸ್ಸಿನಲ್ಲಿಯೇ ಮಕ್ಕಳಿಗೆ ಹಣದ ಬೆಲೆ ಬಗ್ಗೆ ತಿಳಿಸಿ ಹಣವನ್ನು ಉಳಿತಾಯ ಮಾಡುವುದು ಹೇಗೆ ಎಂಬುದರ ಅರಿವನ್ನು ಹೇಳಿಕೊಡಿ ದಿನಾಲು ದುಂದು ವೆಚ್ಚ ಮಾಡುವ ಮಕ್ಕಳಿಗೆ ಹಣ ಉಳಿತಾಯ ಮಾಡುವ ಮಾರ್ಗ ತಿಳಿಸಿಕೊಡಿ.ವಯಸ್ಸಿನ ಅಂತರದಲ್ಲಿ ಹಂತಹಂತವಾಗಿ ಮಕ್ಕಳಿಗೆ ಹಣದ ಮಾಹಿತಿ ನೀಡಿ

ಐದರಿಂದ ಎಂಟು ವರ್ಷದ ನಡುವಿನ ಮಕ್ಕಳಿಗೆ ವಿವಿಧ ನೋಟು, ನಾಣ್ಯಗಳನ್ನು ಗುರುತಿಸುವುದನ್ನು ಕಲಿಸುವ ಜೊತೆಗೆ ಎಣಿಕೆ ಮಾಡುವುದನ್ನು ಹೇಳಿಕೊಡಿ.ಮಕ್ಕಳಿಗೆ ಒಂದು ಪಿಗ್ಗಿ ಬಾಕ್ಸ್ (ಹುಂಡಿ) ಕೊಡಿಸಿ ಅದರಲ್ಲಿ ಹಣ ಸಂಗ್ರಹಿಸಲು ಪ್ರೋತ್ಸಾಹ ಕೊಡಿ. ಹೀಗೆ ಮಾಡುವುದರಿಂದ ಉಳಿತಾಯದ ಮೂಲಕ ಹೇಗೆ ದುಡ್ಡು ನಮ್ಮ ಬಳಿ ಇರುವಂತೆ ನೋಡಿಕೊಳ್ಳಬಹುದು ಎಂಬ ಅಂದಾಜು ಸಿಗುತ್ತದೆ. ಮಕ್ಕಳು ಸಿಕ್ಕಿದ್ದನ್ನೆಲ್ಲ ಖರೀದಿಸಬೇಕು ಎಂದು ಹಠ ಹಿಡಿದಾಗ ನಿಮ್ಮ ಬಳಿ ಇಷ್ಟೇ ಹಣ ಇದೆ ಎಂದು ಹೇಳಿ ಅತ್ಯಗತ್ಯ ಎನ್ನಿಸುವ ವಸ್ತುಗಳನ್ನು ಮಾತ್ರ ಕೊಡಿಸಿ.

9ರಿಂದ 12 ವರ್ಷದ ಮಕ್ಕಳಿಗೆ: ಮಕ್ಕಳು 9ನೇ ವಯಸ್ಸಿಗೆ ಬರುವಷ್ಟರಲ್ಲಿ ಒಂದಷ್ಟು ಪ್ರಾಪಂಚಿಕ ಜ್ಞಾನ ಬಂದಿರುತ್ತದೆ. ಅವರನ್ನು ಬ್ಯಾಂಕಿಗೆ ಕರೆದುಕೊಂಡು ಹೋಗಿ ಅದು ಹೇಗೆ ಕಾರ್ಯನಿರ್ವಹಣೆ ಮಾಡುತ್ತದೆ ಎನ್ನುವುದನ್ನು ವಿವರಿಸಿ. ಜೊತೆಗೆ ಒಂದು ಮೈನರ್ ಅಕೌಂಟ್ ಆರಂಭಿಸಿ. ಬ್ಯಾಂಕ್ ಪಾಸ್ ಬುಕ್, ಖಾತೆಯ ಜಮಾ–ಖರ್ಚು ವಿವರ, ಚೆಕ್ ಬುಕ್, ಡಿಮ್ಯಾಂಡ್ ಡ್ರಾಫ್ಟ್… ಹೀಗೆ ಬ್ಯಾಂಕ್‌ನ ವಿವಿಧ ವಹಿವಾಟುಗಳ ಬಗ್ಗೆಯೂ ತಿಳಿವಳಿಕೆ ಕೊಡಿ. ಅವರಿಗೆ ಸದ್ಯದಲ್ಲಿ ಖರೀದಿ ಮಾಡ
. ಮಕ್ಕಳಿಗೆ ಉಳಿತಾಯದ ಪಾಠ ಹೇಳಿಕೊಡುವ ಜೊತೆಗೆ ಸತ್ಕಾರ್ಯಗಳಿಗೆ ಕೈಲಾದ ಮಟ್ಟಿಗೆ ಧನ ಸಹಾಯ ಮಾಡಬೇಕು ಎನ್ನುವುದನ್ನು ತಿಳಿಸಿಕೊಡಿ. ಯಾವ ಒಳ್ಳೆಯ ಕೆಲಸಕ್ಕೆ ಮಕ್ಕಳು ಧನ ಸಹಾಯ ಮಾಡಲು ಬಯಸುತ್ತಾರೋ ಅದರಂತೆ ನಡೆದುಕೊಳ್ಳಲು ಪ್ರೇರೇಪಿಸಿ.

14 ರಿಂದ 20: ಮಕ್ಕಳ ಹೆಸರಿನಲ್ಲಿ ತೆರೆದಿರುವ ಮೈನರ್ ಬ್ಯಾಂಕ್ ಖಾತೆಯನ್ನು ಅವರಿಗೆ ನಿರ್ವಹಣೆ ಮಾಡಲು ಬಿಡಿ. ಉಳಿತಾಯ ಖಾತೆ, ಚಾಲ್ತಿ ಖಾತೆ, ನಿಶ್ಚಿತ ಠೇವಣಿ, ರೆಕರಿಂಗ್ ಡೆಪಾಸಿಟ್ ಮುಂತಾದ ಸಾಂಪ್ರದಾಯಿಕ ಹೂಡಿಕೆ ವಿಧಾನಗಳನ್ನು ಪರಿಚಯ ಮಾಡಿಕೊಡಿ. ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಹೇಗೆ ನಿರ್ವಹಿಸಬೇಕು ತಿಳಿಸಿಕೊಡಿ.ಅವರ ಶಿಕ್ಷಣ ವೆಚ್ಚ, ದೈನಂದಿನ ಖರ್ಚು ಇತ್ಯಾದಿಗಳನ್ನು ಖಾತೆ ಮೂಲಕವೇ ನಿರ್ವಹಿಸಲು ಸೂಚಿಸಿ. ನಾವು ಹೆಚ್ಚು ಕೌಶಲ ಹೊಂದಿದ್ದರೆ ಹೇಗೆ ಹೆಚ್ಚು ಹಣ ಗಳಿಸಬಹುದು ಎನ್ನುವುದರ ಅರಿವು ಮೂಡಿಸಿ. ವಿವಿಧ ಕೌಶಲಗಳಿಂದ ಒಬ್ಬ ವ್ಯಕ್ತಿ ಹೇಗೆ ಹಲವು ಆದಾಯ ಮೂಲಗಳನ್ನು ಕಂಡುಕೊಳ್ಳಬಹುದು ಎಂಬುದನ್ನು ವಿವರಿಸಿ.

ಈಗಾಗಲೆ 18 ವರ್ಷ ತುಂಬಿದ್ದರೆ ಅಣತಹವರಿಗೆ: ಮಕ್ಕಳಿಗೆ 18 ವರ್ಷ ತುಂಬಿದ ತಕ್ಷಣ ಎಲೆಕ್ಷನ್ ಕಾರ್ಡ, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸನ್ಸ್ , ಆಧಾರ್ ಮುಂತಾದ ಪ್ರಮುಖ ಗುರುತಿನ ದಾಖಲೆಗಳನ್ನು ಮಾಡಿಸಿಕೊಡಿ. ಕೆಲವು ದಾಖಲೆಗಳನ್ನು ಮಕ್ಕಳು ಚಿಕ್ಕವರಿದ್ದಾಗಲೇ ಪಡೆದಿದ್ದರೆ ಅವುಗಳಲ್ಲಿ ಇರುವ ಮಾಹಿತಿಯನ್ನು ಪರಿಷ್ಕರಿಸಿ. ಕೆವೈಸಿ ದಾಖಲೆಗಳನ್ನು ನೀಡುವ ಮೂಲಕ ಮಕ್ಕಳ ಮೈನರ್ ಉಳಿತಾಯ ಖಾತೆಯನ್ನು ರೆಗ್ಯೂಲರ್‌ ಖಾತೆಯನ್ನಾಗಿ ಪರಿವರ್ತಿಸಿ.ಪ್ಯಾನ್ ಕಾರ್ಡ್ ಮಾಡಿಸಿಕೊಳ್ಳಿ. ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸಕ್ರಿಯಗೊಳಿಸಿಕೊಡುವುದರ ಜೊತೆಗೆ ಸಣ್ಣ ಮಟ್ಟದಲ್ಲಿ ಷೇರು ಹೂಡಿಕೆ ಆರಂಭಿಸಲು ನೆರವಾಗುವಂತೆ ಒಂದು ಡಿ-ಮ್ಯಾಟ್ ಖಾತೆ ಮಾಡಿಸಿ.

ಕೊಪ್ಪಳದಲ್ಲಿ ಕೋಳಿಗಳು ಅರೆಸ್ಟ್..?!

ತುಮಕೂರಿನಲ್ಲಿ ಮಹಿಳಾ ಮೋರ್ಚಾ ಸಭೆ

ಚಹಾದೊಂದಿಗೆ ಈ ಆಹಾರಗಳನ್ನು ತಿನ್ನುತ್ತೀರಾ..?ಈ ಸಮಸ್ಯೆಗೆ ಕಾರಣವಾಗಬಹುದು..!

- Advertisement -

Latest Posts

Don't Miss