Tips: ಹಣ ಒಂದೇ ಎಲ್ಲ ಅಲ್ಲ. ಹಣಕ್ಕೂ ಮಿಗಿಲಾಗಿ ನಮ್ಮ ಗುಣ ಚೆನ್ನಾಗಿರಬೇಕು ಅಂತಾ ಹಿರಿಯರು ಹೇಳುತ್ತಾರೆ. ಈ ಮಾತು ಎಷ್ಟು ನಿಜವೋ, ಹಣವಿಲ್ಲದವನು ಹೆಣಕ್ಕಿಂತ ಕಡೆ ಅನ್ನೋ ಮಾತು ಕೂಡ ಅಷ್ಟೇ ನಿಜ. ಹಣವಿಲ್ಲದಿದ್ದರೆ, ರಕ್ತ ಸಂಬಂಧಗಳೇ ದೂರವಾಗುವ ಕಾಲ ಇದು. ನೀನಿಲ್ಲದೇ ನಾನಿಲ್ಲ ಎಂಬ ಜೀವನ ಸಂಗಾತಿ, ನಿನ್ನ ಬಳಿ ಶ್ರೀಮಂತಿಕೆ ಇಲ್ಲದಿದ್ದರೆ, ನನಗೆ ನಿನ್ನ ಅವಶ್ಯಕತೆ ಇಲ್ಲ ಅನ್ನಿಸುವಂತೆ ಮಾಡುವುದು ಕೂಡ ಇದೇ ಹಣ. ಹಾಗಾಗಿ ಹಣ ಎಲ್ಲಕ್ಕಿಂತ ಮುಖ್ಯವಾಗಿದೆ. ಹಾಗಾಗಿ ನಾವಿಂದು, ಪರ್ಸ್ ಯಾವ ರೀತಿ ಬಳಸಿದರೆ, ಹಣದ ಸಮಸ್ಯೆ ಬರುವುದಿಲ್ಲ ಎಂಬ ಬಗ್ಗೆ ಹೇಳಲಿದ್ದೇವೆ.
ಮೊದಲನೇಯದಾಗಿ ನಿಮ್ಮ ಪ್ರೀತಿಪಾತ್ರರು, ಅಥವಾ ಪೋಷಕರು, ಜೀವನ ಸಂಗಾತಿಯ ಬಳಿ ನಿಮಗೆ ಪರ್ಸ್ ಗಿಫ್ಟ್ ಮಾಡಲು ಹೇಳಿ. ಏಕೆಂದರೆ, ಪರ್ಸ್ ಖರೀದಿ ಮಾಡುವುದಕ್ಕಿಂತ, ಯಾರಾದರೂ ಗಿಫ್ಟ್ ಆಗಿ ಕೊಟ್ಟರೆ, ಉತ್ತಮ ಎನ್ನಲಾಗಿದೆ. ಇದರಿಂದ ನಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅಲ್ಲದೇ, ನೀವೂ ಕೂಡ ನಿಮ್ಮ ಪ್ರೀತಿ ಪಾತ್ರರಿಗೆ ಪರ್ಸ್ ಗಿಫ್ಟ್ ಆಗಿ ನೀಡಿದರೆ ಒಳ್ಳೆಯದು. ಆದ್ರೆ ಪರ್ಸ್ ನೀಡುವಾಗ, ಖಾಲಿ ಪರ್ಸ್ ನೀಡಬಾರದು. ಅದರಲ್ಲಿ ಒಂದು ರೂಪಾಯಿಯಾದರೂ ಹಾಕಿ ಕೊಡಬೇಕು.
ಎರಡನೇಯದಾಗಿ ನಿಮ್ಮ ಪರ್ಸ್ ಹರಿದಿದ್ದರೆ, ಅದನ್ನು ಬಳಸಬೇಡಿ. ಏಕೆಂದರೆ, ಹರಿದ ಪರ್ಸ್ ಬಳಸಿದರೆ, ನಿಮ್ಮ ಪರ್ಸ್‌ನಲ್ಲಿ ದುಡ್ಡು ನಿಲ್ಲುವುದಿಲ್ಲ. ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಹಾಗಾಗಿ ಹೊಸ ಪರ್ಸನ್ನು ಗಿಫ್ಟ್ ಆಗಿ ನೀಡುವಂತೆ ನಿಮ್ಮ ಪ್ರೀತಿಪಾತ್ರರಲ್ಲಿ ಹೇಳಿ.
ಇನ್ನು ಮೂರನೇಯದಾಗಿ ಕಪ್ಪು ಮತ್ತು ನೀಲಿ ಬಣ್ಣದ ಪರ್ಸ್ ಯಾವುದೇ ಕಾರಣಕ್ಕೂ ಬಳಸಬೇಡಿ. ಬೇರೆ ಬಣ್ಣದ ಪರ್ಸ್ ಬಳಸಿ. ಕಪ್ಪು ಮತ್ತು ನೀಲಿ ಬಣ್ಣದ ಪರ್ಸ್ ಇದ್ದವರಿಗೆ ಸದಾ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುತ್ತದೆ. ದುಡ್ಡು ಬಂದರೂ, ಅದಕ್ಕೆ ತಕ್ಕ ಹಾಗೆ ಖರ್ಚೂ ಹಾಗೆ ಬರುತ್ತದೆ. ದುಡ್ಡು ನಿಲ್ಲುವುದಿಲ್ಲ. ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ.